ನಾಳೆ (ಜೂ.25) ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

ಜೂ.25 ಮಂಗಳವಾರ ದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೋಡಿಕಾನ, ಕೊಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಮತ್ತು 33/11...

ನಾಳೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್

ಸುಬ್ರಹ್ಮಣ್ಯ: ರಾಜ್ಯದ ಉಪಮುಖ್ಯಮಂತ್ರಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರಾಜ್ಯದ ಶ್ರೀಮಂತ ದೇವಾಲಯವಾದ ಕುಕ್ಕೆಗೆ ಆಗಮಿಸಲಿದ್ದಾರೆ . ಇವರು ಬೆಳಗ್ಗೆ 10: 30 ಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಆಗಮಿಸಿ ರಾತ್ರಿ ಗಂಟೆ 8:40 ರ ತನಕ ದೇವಾಲಯದಲ್ಲಿ ಇರಲಿದ್ದಾರೆ ಎಂದು ಉಪಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಪ್ರವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad Widget

ಸುಳ್ಯ : ಬಿಜೆಪಿ ನೂತನ ಕಛೇರಿ ಉದ್ಘಾಟಿಸಿದ ಮಾಜಿ ಸಿ.ಎಂ.ಯಡಿಯೂರಪ್ಪ

ಸುಳ್ಯ: ಸುಳ್ಯ ಮಂಡಲ ಬಿಜೆಪಿ ನೂತನ ಕಛೇರಿಯು ಸುಳ್ಯ ಕೆವಿಜಿ ಆಯುರ್ವೇದ ಆಸ್ಪತ್ರೆಯ ಬಳಿ ನಿರ್ಮಾಣಗೊಂಡಿದ್ದು , ಇದೀಗ ಕಛೇರಿಯನ್ನು ಬಿಜೆಪಿ ಹಿರಿಯ ನಾಯಕ ಕೇಂದ್ರಿಯ ಸಂಸದೀಯ ಮಂಡಳಿ ಸದಸ್ಯರಾದ ಬಿ ಎಸ್ ಯಡಿಯೂರಪ್ಪ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ , ಎಸ್ ಅಂಗಾರ , ಸತೀಶ್ ಕುಂಪಲ, ಮಂಡಲ...

ಬಾಳಿಲ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ 32 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕೃಷ್ಣಮೂರ್ತಿ ಇವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಎಸ್ಡಿಎಂಸಿ ವತಿಯಿಂದ ಅಭಿನಂದನೆ-ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ರಾವ್ ಯು ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ವಿದ್ವಾನ್ ಮೌನೇಶ್...

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ “ಫ್ರೆಶ್ ಅಪ್ – ಬಿಲ್ಡ್ ಆಸ್ ಎ ಸ್ಮಾರ್ಟ್ ಟೀಚರ್” ಒಂದು ದಿನದ ಶಿಕ್ಷಕರಾಗಿ ಕಾರ್ಯಗಾರ

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಒಂದು ದಿನದ ಶಿಕ್ಷಕರ ಕಾರ್ಯಗಾರವು ಜೂನ್ 23 ರಂದು ನಡೆಯಿತು. "ಫ್ರೆಶ್ ಅಪ್ - ಬಿಲ್ಡ್ ಆಸ್ ಎ ಸ್ಮಾರ್ಟ್ ಟೀಚರ್" ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಅಧ್ಯಕ್ಷರಾದ ಯು ಹೆಚ್ ಅಬೂಬಕರ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ತರಬೇತುದಾರರಾದ...

ರಾಜ್ಯ ಸರಕಾರವು  ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ-  ಮಾಜಿ ಸಿಎಂ ಬಿ.ಎಸ್.ವೈ

ರಾಜ್ಯ ಸರಕಾರವು  ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ದಿಯನ್ನು ಮರೆತಿದೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿದೆ ಎಂದು ಆರೊಪಿಸಿದರು.ಬಿಜೆಪಿ ಮುಂದೆ ಅಂಕಿ ಅಂಶಗಳನ್ನು ಇಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಅಭಿವೃದ್ಧಿ ಒತ್ತಾಯಿಸಿ ಹೋರಾಟ ನಡೆಸಲಿದೆ ಎಂದರು.ಮುಂದಿನ ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ಹಾಗೂ...

ವಳಲಂಬೆ ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿಯಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಬಗ್ಗೆ ಪ್ರಶ್ನಾಚಿಂತನೆ – ಕ್ಷೇತ್ರದಲ್ಲಿ ಸರ್ಪಸಂಸ್ಕಾರ,ಆಶ್ಲೇಷಬಲಿ,ಅಷ್ಟನಾಗ ಸಮಾರಾಧನೆ ನಡೆಸಲು ತೀರ್ಮಾನ – ಇಲ್ಲಿದೆ ಕ್ಷೇತ್ರದ ಹಿನ್ನೆಲೆ

ಗುತ್ತಿಗಾರು ಗ್ರಾಮದ ವಳಲಂಬೆ ಮಣಿಯಾನ ಪುರಾಳಬದಿ ಶ್ರೀ ಶಂಖಚೂಡ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಜೂ.20 ರಂದು ಶಶಿಧರನ್ ಮಾಂಗಾಡು ದೈವಜ್ಞರು ಮತ್ತು ನೀಲೇಶ್ವರ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಪ್ರಶ್ನಾಚಿಂತನೆ ನಡೆಯಿತು. ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಜೂ.26 ರಂದು ಬೆಳಿಗ್ಗೆ ಸರ್ಪಸಂಸ್ಕಾರ ನಡೆಯಲಿದೆ. ಜೂ.29. ರಂದು ಬೆಳಿಗ್ಗೆ ಗಣಹೋಮ,ಶಾಂತಿ ಹೋಮ, ಆಶ್ಲೇಷ...

ಸುಳ್ಯ : ವ್ಯಕ್ತಿ ಕಾಣೆ – ಪೊಲೀಸ್ ದೂರು – ಹೊಳೆ ಬದಿ ಸಿಕ್ಕಿದ ಚಪ್ಪಲಿ

ಕುರುಂಜಿ ಗುಡ್ಡೆ ನಿವಾಸಿ ಕುಮಾರ (36)ಎಂಬವರು ಜೂ. 23 ಮಧ್ಯಾಹ್ನ ದಿಂದ ಕಾಣೆ ಯಾಗಿರುತ್ತಾರೆ. ಇಂದು  ಬಸ್ಮಡ್ಕ ಹೊಳೆ ದಡದಲ್ಲಿ  ಈತನ ಚಪ್ಪಲಿ ಸಿಕ್ಕಿದ್ದು ಹೊಳೆಗೆ ಬಿದ್ದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು ಮನೆಯವರು   ಪೊಲೀಸರಿಗೆ ದೂರು ನೀಡಿರುತ್ತಾರೆ. ಈ ಬಗ್ಗೆ ಯಾರಿಗಾದರೂ ಮಾಹಿತಿ  ಸಿಕ್ಕಿದರೇ 7899677259 ದೂರವಾಣಿ ಸಂಖ್ಯೆ ಅಥವಾ. ಪೋಲೀಸ್ ಸ್ಟೇಷನ್ ಸಂಪರ್ಕಿಸಲು ಮನೆಯವರು...

ಶೌರ್ಯ ವಿಪತ್ತು ನಿರ್ವಹಣಾ ಘಟಕ ಐದನೇ ವರ್ಷಕ್ಕೆ ಪಾದಾರ್ಪಣೆ, ರಕ್ತ ದಾನ ಶಿಬಿರ.

ಕಲ್ಲುಂಗುಂಡಿ: ಶೌರ್ಯ ವಿಪತ್ತು ನಿರ್ವಹಣಾ ಘಟಕ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಲೇಡಿ ಕ್ವೆಶ್ಚನ್ ಆಸ್ಪತ್ರೆ ಮತ್ತು ರೆಡ್ ಕ್ರಾಸ್ ಸಂಸ್ಥೆ ಸಹಯೋಗದಿಂದ ರಕ್ತದಾನ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಅಶೋಕ ಚಿದಾನಂದ ದೇವಿಪ್ರಸಾದ್ ಸವಿತಾ ತಾರಾ ಹಾಗೂ ವಿಶಾಲಾಕ್ಷಿ ಯವರು ರಕ್ತದಾನ ಮಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷರು ಹಾಗೂ...
Loading posts...

All posts loaded

No more posts

error: Content is protected !!