ಮುರೂರು : ಆನೆ ದಾಳಿಯಿಂದ ಕೃಷಿ ಹಾನಿ

j ಮಂಡೆಕೋಲು ಗ್ರಾಮದ ಮುರೂರು ಕೃಷ್ಣ ಬೆಳ್ಚಪ್ಪಾಡ ಇವರ ತೋಟಕ್ಕೆ ಕಳೆದ ರಾತ್ರಿ ದಾಳಿ ನಡೆಸಿದ ಕಾಡಾನೆ ಹಿಂಡು ಬಾಳೆ,ಅಡಿಕೆ ಗಿಡಗಳನ್ನು ನಾಶ ಮಾಡಿದೆ. ಈ ಹಿಂಡಿನಲ್ಲಿ ಮರಿಯಾನೆಯೊಂದು ಸೇರಿದಂತೆ ನಾಲ್ಕು ಆನೆಗಳಿವೆ ಎಂದು ತಿಳಿದುಬಂದಿದೆ.

ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ

ಯಕ್ಷರಂಗದ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ರವರು ಅ.12ರಂದು ಬೆಳಗ್ಗೆ ವಿಧಿವಶರಾಗಿದ್ದು, ಅವರಿಗೆ 66 ವರ್ಷ ವಯಸ್ಸಾಗಿತ್ತು.ಇವರು 1955 ರಲ್ಲಿ ಪದ್ಯಾಣ ತಿರುಮಲೇಶ್ವರ ಭಟ್ ಹಾಗೂ ಸಾವಿತ್ರಿ ದಂಪತಿಗಳ ಮೂರನೇ ಮಗನಾಗಿ ಜನಿಸಿದ್ದು, ಕಳೆದ 40 ವರ್ಷಗಳಿಂದ ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆ ಕ್ಷೇತ್ರದಲ್ಲಿ ಅಗ್ರಗಣ್ಯ ಕಲಾವಿದರಾಗಿ ಪ್ರಸಿದ್ದರಾಗಿದ್ದಾರೆ.ಪದ್ಯಾಣ ಗಣಪತಿ ಭಟ್ ಅವರು ಚೌಡೇಶ್ವರಿ, ಕುಡಾವು,...
Ad Widget

ವಿದ್ಯಾಬೋಧಿನೀ ಹಿ.ಪ್ರಾ. ಶಾಲೆಯ ಭಜನಾ ತಂಡದ ವಿದ್ಯಾರ್ಥಿಗಳಿಂದ ಕುಣಿತ ಭಜನೆ ಸೇವೆ

ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಭಜನಾ ತಂಡದ ವಿದ್ಯಾರ್ಥಿಗಳಿಂದ ನವರಾತ್ರಿ ಪ್ರಯುಕ್ತ ಶ್ರೀರಾಮ ಭಜನಾ ಮಂಡಳಿ ಎಣ್ಮೂರು ಇಲ್ಲಿ ಕುಣಿತ ಭಜನೆ ಸೇವೆ ನಡೆಸಲಾಯಿತು. ಶಾಲಾ ಶಿಕ್ಷಕ ಶಿವಪ್ರಸಾದ್ ಜಿ ಇವರ ನೇತೃತ್ವದಲ್ಲಿ ಕಣ್ವಶ್ರೀ ಕಲಾ ಕೇಂದ್ರ ಕಾಣಿಯೂರು ಇದರ ಸಂಚಾಲಕರಾದ ಸದಾನಂದ ಆಚಾರ್ಯ ಇವರ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು...

ನ.7 : ನಾಗತೀರ್ಥ ಮಿತ್ರ ಮಂಡಲದ ವತಿಯಿಂದ ದೀಪಾವಳಿ ಕಪ್ ಕ್ರಿಕೆಟ್ ಪಂದ್ಯಾಟ

ಮಿತ್ರ ಮಂಡಲ ನಾಗತೀರ್ಥ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ.7 ರಂದು ದೀಪಾವಳಿ ಕಪ್ ಕ್ರಿಕೆಟ್ ಪಂದ್ಯಾಟ ನಡೆಸುವ ಬಗ್ಗೆ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಸಭೆಯಲ್ಲಿ ಮಿತ್ರ ಮಂಡಲ ನಾಗತೀರ್ಥ ಇದರ ಅದ್ಯಕ್ಷ ನಿತಿನ್ ಕುಮಾರ್ ನಾಗತೀರ್ಥ ಕಾರ್ಯದರ್ಶಿ ನವೀನ್ ನಾಗತೀರ್ಥ, ಕ್ರೀಡಾ ಕಾರ್ಯದರ್ಶಿ ಹರ್ಷಿತ್ ಸಂಪ, ಮಿತ್ರ...

ಅ.14 : ಮಾವಿನಕಟ್ಟೆಯಲ್ಲಿ ನವರಾತ್ರಿ ಪೂಜೆ ಹಾಗೂ ಆಯುಧ ಪೂಜೆ

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನವರಾತ್ರಿ ಪೂಜೆ ಹಾಗೂ ಆಯುಧ ಪೂಜಾ ಕಾರ್ಯಕ್ರಮ ಅ.14 ರಂದು ನಡೆಯಲಿದೆ. ಅ.14 ರಂದು ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ, 8.00 ರಿಂದ ಭಜನಾ ಕಾರ್ಯಕ್ರಮ, ಬೆಳಿಗ್ಗೆ 9.30 ರಿಂದ ನವರಾತ್ರಿ ಪೂಜೆ ಪ್ರಾರಂಭ, ಮಧ್ಯಾಹ್ನ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ ಎಂದು ಸಾರ್ವಜನಿಕ ಆಯುಧ ಪೂಜಾ...

ಪ್ರಚೋದನೆಯನ್ನು ಪ್ರಬುದ್ಧತೆಯಿಂದ ಎದುರಿಸೋಣ: ಇಕ್ಬಾಲ್ ಬಾಳಿಲ

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಹಿಂದೂ ಮುಸ್ಲಿಮರಲ್ಲಿ ಒಡಕು ಉಂಟು ಮಾಡಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳನ್ನು ಖಂಡಿಸುತ್ತೇವೆ ಅಲ್ಲದೇ, ಪ್ರಚೋದನೆಯನ್ನು ಪ್ರಬುದ್ಧತೆಯಿಂದ ಏದುರಿಸೋಣ ಎಂದು SKSSF ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಹೇಳಿದರು. ಅವರು ಇಂದು SKSSF ಸುಳ್ಯ ವಲಯ ಸಮಿತಿ ವತಿಯಿಂದ ನಡೆದ ಮುಸ್ಲಿಂ ಸಮುದಾಯದ ವಿರುದ್ದ ನಿರಂತರವಾಗಿ ನಡೆಯುತ್ತಿರುವ...

ಕೊರತ್ತೋಡಿ : ಅಡ್ಕಾರ್ ಸ್ಟೋರ್ ಶುಭಾರಂಭ

ಮರ್ಕಂಜ ಗ್ರಾಮದ ಕೊರತ್ತೋಡಿಯಲ್ಲಿ ಸತೀಶ್ ಅಡ್ಕಾರ್ ಮಾಲಕತ್ವದ ಅಡ್ಕಾರ್ ಸ್ಟೋರ್ ಅ.8 ರಂದು ಶುಭಾರಂಭಗೊಂಡಿತು.

ಹರಿಹರ ಪಲ್ಲತ್ತಡ್ಕ : ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ನೇಮಿಚಂದ್ರ ದೋಣಿಪಳ್ಳ

‌ಹರಿಹರ ಪಲ್ಲತ್ತಡ್ಕ ಹಿರಿಯ ಪ್ರಾಥಮಿಕ ಶಾಲಾ ನೂತನ ಎಸ್ ಡಿ ಎಮ್ ಸಿ ಸಮಿತಿ ಇತ್ತೀಚೆಗೆ ರಚಿಸಲಾಯಿತು. ಅಧ್ಯಕ್ಷರಾಗಿ ನೇಮಿಚಂದ್ರ ದೋಣಿಪಳ್ಳ, ಉಪಾಧ್ಯಕ್ಷರಾಗಿ ಸೌಮ್ಯ ಕಿರಿಭಾಗ ಅವರನ್ನು ಆಯ್ಕೆಮಾಡಲಾಗಿದೆ. ಸದಸ್ಯರುಗಳಾಗಿ ಪದ್ಮನಾಭ ಕಲ್ಕುದಿ, ನವೀನ ಮುಂಡಾಜೆ, ದೇವಿಪ್ರಸಾದ್, ಚಿದಾನಂದ.ಯಂ, ಕುಶ ಮಲ್ಲಾರ, ಶ್ರೀ ದೇವಿ ಬಿ.ಕೆ, ಸಾವಿತ್ರಿ ಕೆ, ರೇವತಿ ಕೆ,ಭಾರತಿ,ಚಿತ್ರಕಲಾ, ಬೇಬಿ,ತನುಜ ಕೆ, ಸವಿತ,...

ಉದಯೋನ್ಮುಖ ಸಾಹಿತಿಗಳು ಓದುವ ಹವ್ಯಾಸವನ್ನು ಹೆಚ್ಚು ರೂಡಿಸಿಕೊಳ್ಳಬೇಕು: ಲತಾಶ್ರೀ ಸುಪ್ರೀತ್ ಮೋಂಟಡ್ಕ

ಸುಳ್ಯ : ಸಾಹಿತ್ಯಗಳನ್ನು ಓದುವ ಮತ್ತು ಬರೆಯುವ ಹವ್ಯಾಸಗಳಿದ್ದರೆ ಉತ್ತಮ‌ ಸಾಹಿತಿಗಳಾಗಬಹು ಉದಯೋನ್ಮುಖ‌ ಸಾಹಿತಿಗಳು ಹೆಚ್ಚು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಉದಯೋನ್ಮುಖ ಸಾಹಿತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಭಿಪ್ರಾಯಪಟ್ಟರು.ಅವರು ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ಬರಾನಂದ ಸರಸ್ಬತಿ ಸ್ವಾಮೀಜಿಯವರ 181 ನೇ ಕೃತಿ 'ಸಾಧಕರಿಗೆ ಇರುವ ಸವಾಲುಗಳು' ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.ತಮ್ಮ ವಿಶಿಷ್ಟ...

ಪಂಜ : ಯುವಕ ಮಂಡಲಗಳ ಸಹಯೋಗದಿಂದ ಬೃಹತ್ ಸ್ವಚ್ಚತಾ ಕಾರ್ಯಕ್ರಮ

ಕೇಂದ್ರ ಸರ್ಕಾರದ ಸ್ವಚ್ಚಾ ಭಾರತ ಕಾರ್ಯಕ್ರಮ ಪಂಜ ಗ್ರಾಮ ಪಂಚಾಯತ್ ನ ಸಹಯೋಗದೊಂದಿಗೆ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ.ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಿಂದ ಮೊದಲ್ಗೊಂಡು ಅಡ್ಡತೋಡು,ಪಲ್ಲೋಡಿ,ಕರಿಕ್ಕಳ,ಪೊಳಂಜ ರಸ್ತೆ, ಪಂಜ ಪೇಟೆಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿಕೊಂಡ ಪೊದೆಗಳನ್ನು ಕಡಿದು ಸ್ವಚ್ಚ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಯುವಕ ಮಂಡಲಗಳ ಉತ್ಸಾಹಿ ಯುವಕರ ಅವಿರತ ಶ್ರಮದಿಂದ ಈ...
Loading posts...

All posts loaded

No more posts

error: Content is protected !!