ಸಂಪಾಜೆ :ವಲಯಾರಣ್ಯ ಕಛೇರಿಯಲ್ಲಿ ಆಯುಧ ಪೂಜೆ

ಸಂಪಾಜೆ ವಲಯ ಅರಣ್ಯ ಕಚೇರಿಯಲ್ಲಿ ಆಯುಧ ಪೂಜೆಯ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿಗಳು,ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಾಗೀರಥಿ ಹೊಸೊಳಿಕೆ

ದೇವಚಳ್ಳ ಗ್ರಾಮದ‌ ಹೊಸೊಳಿಕೆ ದಿ. ಕುಂಞಣ್ಣ ಗೌಡರ ಧರ್ಮಪತ್ನಿ ಭಾಗೀರಥಿ (90.ವ) ರವರು ಅ.13ರಂದು ನಿಧನರಾದರು. ಮೃತರು ಮಕ್ಕಳಾದ ಪಾವನೇಶ್ವರ ಹೊಸೊಳಿಕೆ, ಗಂಗಾಧರ ಹೊಸೊಳಿಕೆ, ಲೋಕೇಶ‌ ಹೊಸೊಳಿಕೆ, ಪುಷ್ಪವೇಣಿ ಭಾಸ್ಕರ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
Ad Widget

ಬೆಳ್ಳಾರೆ : ಸ್ವರ್ಣ ಬೈಕ್ ಪಾಯಿಂಟ್ ನಲ್ಲಿ ಆಯುಧಪೂಜೆ ಕಾರ್ಯಕ್ರಮ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪಾಯಿಂಟ್ ನಲ್ಲಿ ಅ.14ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಗಗನ್ ನಾಲ್ಗುತ್ತು, ವಸಂತ ಕುಮಾರ್ ನಾಲ್ಗುತ್ತು, ಸಿಬ್ಬಂದಿಗಳಾದ ಭರತ್ ಹಾಗೂ ತೀರ್ಥೇಶ್, ಸತೀಶ್ ಕಳಂಜ, ಜಗದೀಶ್ ಮುಂಡುಗಾರು ಉಪಸ್ಥಿತರಿದ್ದರು.

ಹರಿಹರಪಲ್ಲತ್ತಡ್ಕ : ಶ್ರೀ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ & ಪ್ಲಂಬರ್ಸ್ ಇಂದು ಶುಭಾರಂಭ

ಹರಿಹರಪಲ್ಲತ್ತಡ್ಕದ ವಿರಾಮಿಸು ಕಾಂಪ್ಲೆಕ್ಸ್ ನಲ್ಲಿ ಕಿಶೋರ್ ವಾಡ್ಯಪ್ಪನಮನೆ ಮಾಲಕತ್ವದ ಶ್ರೀ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ & ಪ್ಲಂಬರ್ಸ್ ಇಂದು ಶುಭಾರಂಭಗೊಳ್ಳಲಿದೆ.

ತಳೂರು : ಶ್ರೀ ವಿಷ್ಣು ಅಟೋ ವರ್ಕ್ಸ್ ನಲ್ಲಿ ವಾಹನ ಪೂಜೆ

ತಳೂರಿನಲ್ಲಿರುವ ಚಂದ್ರಶೇಖರ ಆಚಾರಿಕಾನ ಮಾಲಕತ್ವದ ಶ್ರೀ ವಿಷ್ಣು ಅಟೋ ವರ್ಕ್ಸ್ ನಲ್ಲಿ ನವರಾತ್ರಿ ಉತ್ಸವ ಅಂಗವಾಗಿ ವಾಹನ ಪೂಜೆ ಅ.12 ರಂದು ನಡೆಯಿತು.

ಐವರ್ನಾಡು ಕಾಲೇಜಿನ ಶಿಕ್ಷಕಿ ಪ್ರೇಮಾರಿಗೆ ಕವಿಗೋಷ್ಟಿಯಲ್ಲಿ ಸನ್ಮಾನ

ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಶ್ರೀಮತಿ ಪ್ರೇಮಾ ಉದಯ್ ಕುಮಾರ್ ರವರು ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಯಲ್ಲಿ ಅ.10 ರಂದು ನಡೆದ ಅಖಿಲ ಭಾರತ ಕೇಂದ್ರೀಯ ಕನ್ನಡ ಸಾಹಿತ್ಯ ವೇದಿಕೆಯ ತೃತೀಯ ಕವಿ ಕಾವ್ಯ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.

ಹರಿಹರ ಪಲ್ಲತ್ತಡ್ಕ :- ದಿವಾಕರ ಮುಂಡಾಜೆಯವರ ಶಿವ ಡಿಜಿಟಲ್ಸ್ ಸ್ಟುಡಿಯೋ ಸ್ಥಳಾಂತರ

ಹರಿಹರ ಪಲ್ಲತ್ತಡ್ಕದಲ್ಲಿ ಸುಮಾರು 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿವಾಕರ ಮುಂಡಾಜೆ ಅವರ ಮಾಲಕತ್ವದ ಶಿವ ಡಿಜಿಟಲ್ಸ್ ಅ.15 ರಂದು ಸ್ಥಳಾಂತರಗೊಂಡು ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸ್ಟುಡಿಯೋ ಮಾಲಕರಾದ ದಿವಾಕರ ಮುಂಡಾಜೆ ತಿಳಿಸಿದ್ದಾರೆ.(ವರದಿ :- ಉಲ್ಲಾಸ್ ಕಜ್ಜೋಡಿ)

ಪೈಲಾಜೆ : ಚರಂಡಿಗಿಳಿದ ಸರಕಾರಿ ಬಸ್

ಐನೆಕಿದು ಗ್ರಾಮದ ಪೈಲಾಜೆಯಲ್ಲಿ ಅ.11 ರಂದು ಸಂಜೆ ಬಾಳುಗೋಡಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಜೀಪೊಂದಕ್ಕೆ ಸೈಡ್ ನೀಡುವ ಸಂದರ್ಭದಲ್ಲಿ ಚರಂಡಿಗಿಳಿದ ಘಟನೆ ನಡೆಯಿತು. ನಂತರ ಜೆ.ಸಿ.ಬಿ ಬಳಸಿ ಬಸ್ಸನ್ನು ಚರಂಡಿಯಿಂದ ಮೇಲೆತ್ತಲಾಯಿತು ಎಂದು ತಿಳಿದುಬಂದಿದೆ. ವರದಿ :- ಉಲ್ಲಾಸ್ ಕಜ್ಜೋಡಿ

ಬೆಳ್ಳಾರೆ: ಕ್ಷಯ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ನೆರವಿನ ಹಸ್ತ

ಬೆಳ್ಳಾರೆ ಗ್ರಾಮದ ದರ್ಖಾಸು ಬಳಿಯ ಚೀಮುಳ್ಳು ಎಂಬಲ್ಲಿ ಕ್ಷಯ ರೋಗದಿಂದ ಬಳಲುತ್ತಿದ್ದ ಓರ್ವ ವ್ಯಕ್ತಿಗೆ ಸೂಕ್ತ ಸೂರು ವ್ಯವಸ್ಥೆ ಮತ್ತು ಊಟ ಉಪಾಹಾರದ ಸೂಕ್ತ ವ್ಯವಸ್ಥೆ ಇಲ್ಲದಿರುವ ಬಗ್ಗೆ ಮನಗಂಡ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿಯವರು ಡಾ।। ಎಸ್ ನಾರಾಯಣ್ ಭಟ್ ಬೆಳ್ಳಾರೆ ಪ್ರತಿಷ್ಠಾನದ ನೆರವಿನ ಅಂಬ್ಯುಲೆನ್ಸ್...

ಹರಿಹರ ಪಲ್ಲತ್ತಡ್ಕ :- ಅ.16 ರಂದು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಯ ವಿಶೇಷ ಶಿಬಿರ

ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್, ಅಂಚೆ ಇಲಾಖೆ ಪುತ್ತೂರು ವಿಭಾಗ ಹಾಗೂ ಉಪವಿಭಾಗ ಸುಳ್ಯ ಇವುಗಳ ಜಂಟಿ ಸಹಯೋಗದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಅ.16 ರಂದು ಬೆಳಗ್ಗೆ 10:00 ಗಂಟೆಯಿಂದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಯ ವಿಶೇಷ ಶಿಬಿರ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಗ್ರಾಮಪಂಚಾಯತ್ ಅದ್ಯಕ್ಷರಾದ ಜಯಂತ್...
Loading posts...

All posts loaded

No more posts

error: Content is protected !!