- Wednesday
- August 19th, 2026
ರಾತ್ರಿ 10:30 ರ ಸಮಯ. ನಾಳೆ ಬೆಳಿಗ್ಗೆ ಬೇಗ ಏಳಬೇಕೆಂದು ಅಲಾರಾಂ ಇರಿಸಿ ಮಲಗಿದೆ. ಆಗತಾನೇ ಮಳೆ ಶುರುವಾಗಿತ್ತು. ಹೊತ್ತು ಕಳೆದು ಬೆಳಗಾಯಿತು. ಬೆಳಿಗ್ಗೆ ಬೇಗ ಏಳಬೇಕೆಂದು ಅಲಾರಾಂ ಇರಿಸಿ ಮಲಗಿದ್ದ ನನಗೆ ಮಳೆಯಿಂದಾಗಿ ಏಳಲು ಮನಸ್ಸಾಗಲಿಲ್ಲ. ಇನ್ನೂ ಸ್ವಲ್ಪ ಹೊತ್ತು ನಿದ್ರಿಸೋಣ ಎಂದು ಪುನಃ ಮಲಗಿದೆ. ಅಲಾರಾಂ ಬಡಿದುಕೊಳ್ಳುತ್ತಲೇ ಇತ್ತು, ಆದರೆ ಏಳಲು ಮನಸ್ಸಾಗಲಿಲ್ಲ....
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ವಿಪರೀತ ಮಳೆಯ ಕಾರಣದಿಂದ ಕೆ. ಪಿ ಸಿ. ಸಿ ನಿರ್ದೇಶನದಂತೆ ಜು.9 ರಂದು ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ನಡೆಯಬೇಕಾಗಿದ್ದ ಮಹಿಳಾ ಸಂಘಟನೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ "ನಾ... ನಾಯಕಿ.." ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರ ನಿರ್ಧರಿಸಲಾಗುವುದು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ. ಸಿ ಜಯರಾಮ್...
ಭೂಕಂಪನ ಭಾದಿತ ಪ್ರದೇಶಗಳಲ್ಲಿ ಒಂದಾಗಿರುವ ಪೆರಾಜೆ ಗ್ರಾಮದ ಬೆಟ್ಟದಪುರ ವ್ಯಾಪ್ತಿಯಲ್ಲಿ ಹಲವು ಬಾರಿ ಭೂಕಂಪನ ಸಂಭವಿಸಿದೆ. ಗಣಿಗಾರಿಕೆಗಳಿಂದ ನೈಸರ್ಗಿಕ ಅಸಮತೋಲನ ಉಂಟಾಗುತ್ತಿದೆ ಎಂದು ತಜ್ಞರು ವರದಿಗಳಲ್ಲಿ ಉಲ್ಲೇಖಿಸಿದ್ದರೂ ಇಲ್ಲಿಯ ಗಣಿಗಾರಿಕೆ ನಿಲ್ಲಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗುತ್ತಿಲ್ಲ. ಗಣಿಗಾರಿಕೆ ಇಲ್ಲವಾದರೆ ಮುಂದಿನ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಬೆಟ್ಟದಪುರ ಪರಿಸರದ ಸ್ಥಳೀಯ ನಿವಾಸಿಗಳು ಮತ್ತು ಪೆರಾಜೆ ಗ್ರಾಮಸ್ಥರೆಂಬ ಹೆಸರಿನಲ್ಲಿ...
ತೊಡಿಕಾನ ಗ್ರಾಮದ ಮುತ್ತುಕೋಡಿ ಮಾವಿನಕಟ್ಟೆ ಬಾಳೆಕಜೆ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ನವರು ಶೀಘ್ರ ರಸ್ತೆ ಸಂಪರ್ಕ ಸರಿಪಡಿಸಿಕೊಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭಾರಿ ಮಳೆಗೆ ಜು.06 ರಂದು ಹರಿಹರ ಪಲ್ಲತ್ತಡ್ಕ ಗ್ರಾಮದ ಕೊಪ್ಪತ್ತಡ್ಕ ಎಂಬಲ್ಲಿರುವ ಸೇತುವೆಯ ಒಂದು ಬದಿಯ ತಡೆಗೋಡೆಯ ಮಣ್ಣು ಕುಸಿದು ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ. ವರದಿ :- ಉಲ್ಲಾಸ್ ಕಜ್ಜೋಡಿ
ಧರ್ಮಸ್ಥಳದ ಧರ್ಮಾಧಿಕಾರಿ, ಗ್ರಾಮಾಭಿವೃದ್ಧಿ ಯೋಜನೆಯ ಹರಿಕಾರ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲಿದ್ದಾರೆ. ಗ್ರಾಮಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ರಾಜ್ಯದ ಹೆಮ್ಮೆಯಾಗಿದೆ. ಗ್ರಾಮೀಣಾಭಿವೃದ್ಧಿಯೆ ಸಾಧನೆಗೆ ಸಂದ ಗೌರವವಾಗಿದೆ. ಈ ಬಗ್ಗೆ ಸ್ಮರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಸ್ಥಳ ಭೇಟಿ ಹಾಗೂ ಅವರ...
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಳೆದ 24 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು ಜಿಲ್ಲೆಯಾದ್ಯಂತ ದಿನಾಂಕ: 7.07.2022 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ, ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢ ಶಾಲೆ, ಪದವಿ ಪೂರ್ವ, ಪದವಿ,...
ಬಳ್ಪದಲ್ಲಿ ಸಂಸದ ನಳಿನ್ ಕುಮಾರ್ ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಇತಿಹಾಸ ಪ್ರಸಿದ್ಧ ಭೋಗಾಯನ ಕೆರೆ ಅಭಿವೃದ್ಧಿಪಡಿಸಿದ್ದರು. ಇದೀಗ ವ್ಯಾಪಕ ಮಳೆಗೆ ಕೆರೆಯ ಕಟ್ಟೆ ಕುಸಿದುಬಿದ್ದಿದೆ. ಈ ಬಗ್ಗೆ ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ.
ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ನೆಯ್ಯೋಣಿ ಕಟ್ಟಡದಲ್ಲಿ ಕೆ.ಎಸ್.ಆರ್.ಟಿ.ಸಿ. ಯ ನಿವೃತ ಸಂಚಾರ ನಿಯಂತ್ರಕರಾದ ಹರಿಶ್ಚಂದ್ರ ಮೇಲಡ್ತಲೆ ಅವರ ಪುತ್ರಿ ಡಾ. ಶ್ರೀನಿಧಿ ಎಂ.ಎಚ್ ಮಾಲಕತ್ವದ ಶ್ರೀನಿಧಿ ಕ್ಲಿನಿಕ್ ಜು.6 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಮಾಲಕರ ತಂದೆ ಹರಿಶ್ಚಂದ್ರ ಮೇಲಡ್ತಲೆ, ತಾಯಿ ಶ್ರೀಮತಿ ಜಲಜಾ, ಶಿವಣ್ಣ ಗೌಡ, ಶ್ರೀಮತಿ ವೆಂಕಮ್ಮ, ಕಟ್ಟಡದ ಮಾಲಕರಾದ...
Loading posts...
All posts loaded
No more posts
