- Thursday
- August 20th, 2026
ಹರಿಹರ ಪಲ್ಲತ್ತಡ್ಕದಲ್ಲಿ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಘಟನಾ ಸ್ಥಳಗಳಿಗೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಆ.03 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹರಿಹರ ಪಲ್ಲತ್ತಡ್ಕ ಗ್ರಾಮದ ಹರಿಹರ ಪೇಟೆಯಲ್ಲಿ ಭಾರೀ ಹಾನಿ ಸಂಭವಿಸಿದ್ದು, ಹಾನಿಗೊಳಗಾದ ಸ್ಥಳ ಹಾಗೂ ಅಂಗಡಿಗಳ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ.ಕೆ.ವಿ, ಪುತ್ತೂರು ಎ.ಸಿ ಗಿರೀಶ್...
ಆ.3ರಂದು ಮುಂಜಾನೆ ಸುರಿದ ಮಳೆಗೆ ಮರ್ಕಂಜ ಗ್ರಾಮದ ಹೊಸೋಳಿಕೆ ಮೋಹನ್ ನಾಯ್ಕ್ ಎಂಬವರ ಮನೆಯ ಕೊಟ್ಟಿಗೆ ಬಿದ್ದು ಸಂಪೂರ್ಣ ಹಾನಿಗೊಂಡಿದೆ ಎಂದು ತಿಳಿದುಬಂದಿದೆ.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ದಯಾನಂದ ಕೊರತ್ತೋಡಿ, ಕಾರ್ಯದರ್ಶಿ ಯಾಗಿ ದಯಾನಂದ ಕೇರ್ಪಳ, ಖಜಾಂಜಿಯಾಗಿ ದಯಾನಂದ ಕಲ್ನಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸತೀಶ್ ಹೊದ್ದೆಟ್ಟಿ, ಜತೆ ಕಾರ್ಯದರ್ಶಿ ಪ್ರಜ್ಞಾ ಎಸ್. ನಾರಾಯಣ್, ನಿರ್ದೇಶಕರಾಗಿ...
ಭಾರೀ ಮಳೆಯಿಂದಾಗಿ ಕೊಲ್ಲಮೊಗ್ರು ದೋಲನ ಮನೆ ಲಲಿತಾ ಎಂಬುವವರ ಮನೆ ಕುಸಿತಗೊಂಡಿದ್ದು, ಆ.02 ರಂದು ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನಪ್ರತಿನಿಧಿಗಳು, ಮುಖಂಡರು ಜೊತೆಗಿದ್ದರು. ಬಳಿಕ ಅಲ್ಲಿಯೇ ಸಮೀಪದ ದೋಲನ ಮನೆ ಎಂಬಲ್ಲಿ ಹೊಳೆ ಕೊರೆತಕ್ಕೆ ಸಿಲುಕಿ ಅಪಾರ ಹಾನಿಯಾಗಿದ್ದ ಕೃಷಿ ಭೂಮಿಯನ್ನು ವೀಕ್ಷಿಸಿ ಪರಿಹಾರದ ಭರವಸೆ ನೀಡಿದರು. ಕಂದಾಯ ನಿರೀಕ್ಷಕ...
ಮಾವಿನಕಟ್ಟೆ ಕಂದ್ರಪ್ಪಾಡಿ ರಸ್ತೆಯಲ್ಲಿ ಅಚ್ರಪ್ಪಾಡಿ ಬಳಿ ಬರೆ ಕುಸಿತಗೊಂಡಿದೆ. ಬರೆ ಕುಸಿತದಿಂದ ವಿದ್ಯುತ್ ಕಂಬ ಧರೆಗುಳಿದಿದ್ದು ಸಂಚಾರ ಸ್ಥಗಿತಗೊಂಡಿದೆ.
ಉಪ್ಪುಕಳ ಬಾಳುಗೋಡು ಗ್ರಾಮದ ಬಸವನಗುಡಿಯಿಂದ ಉಪ್ಪುಕಳ ಸಂಪರ್ಕಿಸುವ ಸಿದ್ದನಗುಡ್ಡೆ ಕುಸಿದಿದೆ. ಕೊತ್ನಡ್ಕ ಉಪ್ಪುಕಳದ ನಿವಾಸಿಗಳು ರಸ್ತೆಯಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
ಆ.01 ರಂದು ಸುರಿದ ಭಾರೀ ಮಳೆಗೆ ಸೋಮವಾರ ತಡರಾತ್ರಿ ಕಡಬ ತಾಲೂಕಿನ ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ಎಂಬಲ್ಲಿನ ಕಾಲು ಸೇತುವೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ವರದಿ :- ಉಲ್ಲಾಸ್ ಕಜ್ಜೋಡಿ
ಸುಬ್ರಹ್ಮಣ್ಯದಲ್ಲಿ ಆ.1 ರಂದು ನಡೆದ ಭೂಕುಸಿತದಿಂದಾಗಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ರೂ.11 ಲಕ್ಷ 5 ಸಾವಿರ ಮೊತ್ತದ ಒಟ್ಟು 3 ಚೆಕ್ ನ್ನು ಸಚಿವ ಎಸ್. ಅಂಗಾರ ಆ. 2 ರಂದು ಕುಸುಮಾಧರಿಗೆ ಕುಸುಮಾಧರರ ತಂದೆ ಬೊಮ್ಮಣ ಗೌಡ ಕರಿಮಜಲುರವರ ನಿವಾಸದಲ್ಲಿ ವಿತರಿಸಿದರು. ಮೃತಪಟ್ಟ ಇಬ್ಬರು ಮಕ್ಕಳಿಗಾಗಿ ಸರಕಾರದಿಂದ ತಲಾ 5 ಲಕ್ಷದಂತೆ ಹಾಗೂ ಮನೆ...
ರಾತ್ರಿಯಿಡಿ ಸುರಿದ ಮಳೆ ಆರ್ಭಟಕ್ಕೆ ಕೊಯನಾಡು,ಕಲ್ಲುಗುಂಡಿ, ಗೂನಡ್ಕನ ಜನತೆ ಮತ್ತೊಮ್ಮೆ ಸಂಕಟ ಪಡುವಂತಾಗಿದೆ. ಪಯಸ್ವಿನಿ ನದಿ ಮತ್ತೆ ಉಕ್ಕಿ ಹರಿಯತೊಡಗಿದ್ದು ನಿನ್ನೆಯಷ್ಟೆ ಜಲಪ್ರಳಯಕ್ಕೆ ಒಳಗಾಗಿದ್ದ ಸಂಪಾಜೆ ಕಲ್ಲುಗುಂಡಿ ಪ್ರದೇಶದಲ್ಲಿ ಇಂದು ಪುನಹ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವವರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಕಲ್ಲುಗುಂಡಿಯಲ್ಲಿ, ಗೂನಡ್ಕದಲ್ಲಿ ಮನೆಗಳು ಜಲಾವೃತವಾಗಿದ್ದು ರಾಜ್ಯ ಹೆದ್ದಾರಿ ಬಂದ್ ಆಗಿದೆ. ಅರಂಬೂರು...
Loading posts...
All posts loaded
No more posts
