- Thursday
- August 20th, 2026
ವಿಧಿಯ ಆಟ ತುಂಬಾ ಕ್ರೂರ, ಸೂತ್ರಧಾರನ ಆಟ ಘೋರ, ಕೊಚ್ಚಿ ಹೋದ ಬದುಕ ತೀರ, ಮನಸ್ಸು ಆಗಿದೆ ತುಂಬಾ ಭಾರ... ಎಲ್ಲಾ ಇದ್ದ ಊರಿನಲ್ಲಿ ಏನೂ ಇಲ್ಲದಾಗಿದೆ, ಎಲ್ಲಾ ಕೊಚ್ಚಿ ಹೋಗಿದೆ, ಖುಷಿಯು ದೂರವಾಗಿದೆ, ದುಃಖ ಎಲ್ಲೆಡೆ ತುಂಬಿದೆ... ದೂರವಿರುವ ಗಗನದಿಂದ ಘೋರವಾದ ಮಳೆಯು ಸುರಿದು ಬದುಕು ದುಸ್ತರವಾಗಿದೆ, ಈ ಊರೇ ತತ್ತರವಾಗಿದೆ, ಕಣ್ಣೀರೇ ಉತ್ತರವಾಗಿದೆ......
ಆ.4 ರ ಸಂಜೆ ಸುರಿದ ಭಾರಿ ಮಳೆಗೆ ಕಂದ್ರಪ್ಪಾಡಿ ದೇವ ಮಡಪ್ಪಾಡಿ ಸಂಪರ್ಕಿಸುವ ರಸ್ತೆಯ ಕಂದ್ರಪ್ಪಾಡಿ ಎಂಬಲ್ಲಿ ಬರೆ ಕುಸಿದು ರಸ್ತೆಯಲ್ಲಿ ಸಂಚರಿಸಲು ಸಂಕಷ್ಟವಾಗಿದೆ
ವಳಲಂಬೆ ದೇವಸ್ಥಾನದ ಬಳಿಯಿರುವ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಮಳೆಗೆ ಕೊಚ್ಚಿ ಬಂದ ಮರಗಳು ಸಿಲುಕಿ ಹಾನಿಯಾಗಿದೆ. ಮೂರು ಪಿಲ್ಲರ್ ಕೊಚ್ಚಿ ಹೋಗಿದೆ. ಇದರಿಂದ ನೀರು ಬ್ಲಾಕ್ ಆಗಿ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿತ್ತು. ಉಳಿದ ಪಿಲ್ಲರ್ ಗಳಲ್ಲಿ ಸಿಲುಕಿರುವ ಮರಗಳನ್ನು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಊರವರು ತೆರವುಗೊಳಿಸಿದರು.
ಮೇಘಸ್ಪೋಟದಿಂದ ನಲುಗಿ ಹೋಗಿರುವ ಕಲ್ಮಕಾರು ಕೊಲ್ಲಮೊಗ್ರು ಭಾಗದಲ್ಲಿ ಸೇವಾ ಭಾರತಿ, ವಿಶ್ವಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವೀರಕೇಸರಿ ಮಿತ್ರವೃಂದ ಮಂಡೆಕೋಲು ಮೊದಲಾದ ಸಂಘಟನೆಗಳು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡರು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೂ ಶ್ರಮಸೇವೆ ನಡೆಸಿದರು. ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿರುವಂತೆಯೇ ಪುನಃ ಸುರಿದ ಭಾರಿ ಮಳೆಗೆ ಮೇಲಿನ ಭಾಗದಿಂದ ಅನಿರೀಕ್ಷಿತವಾಗಿ ಹರಿದು ಬಂದ...
ಆ.3 ರಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಹಾಲೆಮಜಲಿನ ಸುಧೀರ್ ಗೌಡ, ಹರೀಶ್, ಪುರುಷೋತ್ತಮ್ ಗೌಡ, ಶಿವಪ್ರಸಾದ್ ಹಾಲೆಮಜಲು, ವೆಂಕಪ್ಪ ಗೌಡ ಗುಡ್ಡೆಮನೆ ಇವರ ಅಡಿಕೆ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಷ್ಟು ನೀರು ಉಕ್ಕಿ ಹರಿದಿದೆ ಎನ್ನಲಾಗಿದೆ.
ಕಲ್ಮಕಾರು ಕೊಲ್ಲಮೊಗ್ರ ಭಾಗದಲ್ಲಿ ಮಧ್ಯಾಹ್ನ ದಿಂದಲೇ ವ್ಯಾಪಕ ಮಳೆಯಾಗುತ್ತಿದ್ದು ಮತ್ತೆ ಪ್ರವಾಹ ಪರಿಸ್ಥಿತಿ ಬಂದಿದೆ. ಕೊಲ್ಲಮೊಗ್ರ ಸೇತುವೆ ಮೇಲೆ ನೀರು ಹರಿಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಅಮರ ಸೇನಾ ರಕ್ತದಾನಿಗಳ ತಂಡ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಂಯುಕ್ತಾಶ್ರಯದಲ್ಲಿ ಆ.14 ರಂದು ಆಜಾದಿ ಕಾ ಅಮೃತ ಮಹೋತ್ಸವವನ್ನು ರಕ್ತದಾನ...
ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಆ.03 ರಂದು ಕೊಲ್ಲಮೊಗ್ರಕ್ಕೆ ಭೇಟಿ ನೀಡಿ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಬೆಂಡೋಡಿ ಸೇತುವೆ ಹಾಗೂ ಕೃಷಿ ಹಾನಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಳೆಹಾನಿಗೊಳಗಾದ ಗಿರೀಶ್ ಹಾಗೂ ಚಂದ್ರಶೇಖರ ಅವರಿಗೆ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ.ಕೆ.ವಿ, ಪುತ್ತೂರು ಎ.ಸಿ ಗಿರೀಶ್ ನಂದನ್, ಜಿಲ್ಲಾ ಪಂಚಾಯತ್...
ಬೇಕಾಗಿದ್ದಾರೆ : ಸುಳ್ಯದ ಆಸುಪಾಸಿನವರಾಗಿದ್ದು ಪತ್ರಿಕೆಯಲ್ಲಿ ಕೆಲಸ ಮಾಡಲು ಆಸಕ್ತ ಅಭ್ಯರ್ಥಿಗಳು ಬೇಕಾಗಿದ್ದಾರೆ. ತಮ್ಮ ಬಯೋಡೇಟಾ ವನ್ನು 9449387044 ನಂಬರ್ ಗೆ ಕಳುಹಿಸಿಕೊಡಿ.
ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಸರಕಾರದ ಯೋಜನೆಯಂತೆ ಗ್ರಾಮೀಣ ಮಕ್ಕಳ ಭೌತಿಕ ಸಾಮರ್ಥ್ಯ ಹೆಚ್ಚಿಸುವ ಚದುರಂಗ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಚೆಸ್ ಸ್ಪರ್ಧೆಯನ್ನು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮಂಡೆಕೋಲಿನಲ್ಲಿ ನಡೆಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಗ್ರಾಮ...
Loading posts...
All posts loaded
No more posts
