- Monday
- August 24th, 2026
ನಾಗರಿಕ ಸೇವಾ ಸಮಿತಿ ಕೊಲ್ಲಮೊಗ್ರು-ಕಲ್ಮಕಾರು ಇದರ ವತಿಯಿಂದ ಡಿ.30 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ಕಾಂತಾರ ಚಲನಚಿತ್ರದ ಓಟಿಟಿ ಪ್ರದರ್ಶನ ಹಾಗೂ ದೈವ ನರ್ತಕರಿಗೆ ಮತ್ತು ರಂಗಭೂಮಿ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ನಾಗರಿಕ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ನಿವೃತ್ತ ಶಿಕ್ಷಕರಾದ ಕುಂಞಟ್ಟಿ ಶಿವರಾಮ ಮಾಸ್ತರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಪ್ರಧಾನ...
ಅರಂತೋಡು ಗ್ರಾಮದ ಉಳುವಾರು ಮಧುಸೂದನ ಉಳುವರು ಬ್ರೈನ್ ಹ್ಯಾಮರೇಜ್ ಇಂದು ನಿಧನರಾದರು ಎಂದು ತಿಳಿದುಬಂದಿದೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ತಿಲೋತ್ತಮೆ, ಪತ್ನಿ ಮಮತಾ ಹಾಗೂ ಮಕ್ಕಳಾದ ಪ್ರೀತಮ್ ಹಾಗೂ ಮೌಲ್ಯ ಅವರನ್ನು ಅಗಲಿದ್ದಾರೆ.
ಡಿ.28 ರಂದು ಮಧ್ಯಾಹ್ನ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಾಂಗ್ರೆಸ್ ಮುಖಂಡ ಸುಧೀರ್ ರೈ ಮೇನಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು. ವಿಷ ಸೇವಿಸಿರುವುದು ಮನೆಯವರಿಗೆ ತಿಳಿಯುತ್ತಿದ್ದಂತೆ ಸುಳ್ಯ ಜ್ಯೋತಿ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು...
ಪೆರುವಾಜೆ ಗ್ರಾಮದ ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.30 ಶುಕ್ರವಾರದಂದು ನಡೆಯಿತು. ಬೆಳಿಗ್ಗೆ ಗಣಹೋಮ ನಂತರ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 7.00ಕ್ಕೆ ದೈವದ ಭಂಡಾರ ತೆಗೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಆ ಬಳಿಕ ಶ್ರೀ ಕೊರಗಜ್ಜ ದೈವದ ನೇಮೋತ್ಸವ...
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಅಡಿಕೆ ಕೃಷಿಗೆ ಭವಿಷ್ಯವಿಲ್ಲ ಎಂಬ ಆರಗ ಜ್ಞಾನೇಂದ್ರರವರ ಹೇಳಿಕೆಯನ್ನು ಖಂಡಿಸಿ ಡಿ. 30ರಂದು ಯೂತ್ ಕಾಂಗ್ರೇಸ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಯೂತ್ ಕಾಂಗ್ರೇಸ್ ಉಸ್ತುವಾರಿ ಅಭಿಷೇಕ್ ಬೆಳ್ಳಿಪಾಡಿ ಮಾತನಾಡಿ "ಜಿಲ್ಲೆ ಹಾಗೂ ರಾಜ್ಯದಲ್ಲಿ ಅಡಿಕೆ ಕೃಷಿಗೆ ಒಂದು ಗೌರವವಿದೆ. ಕೃಷಿಯನ್ನೇ ಅವಲಂಬಿಸಿರುವ ಅನೇಕ ಕುಟುಂಬಗಳನ್ನು ನಾವೀಗ ಕಾಣಬಹುದು....
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆಂಬ ಆರೋಪದಡಿ ಏನೆಕಲ್ಲಿನ ಯುವಕನೊಬ್ಬನ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯೇನೆಕಲ್ಲಿನ ಆಟೋ ಚಾಲಕ ಜೀವನ್ ಎಂಬ ಯುವಕನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಐವರ್ನಾಡು ಗ್ರಾಮದ ಮುಚ್ಚಿನಡ್ಕ ಅಚ್ಚುತರವರು ಹೃದಯಾಘಾತದಿಂದ ಡಿ.29 ರಂದು ರಾತ್ರಿ ನಿಧನರಾದರು. ಅವರಿಗೆ 58 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ,ಪುತ್ರ,ಪುತ್ರಿ,ಅಳಿಯ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ. ಇವರು ಐವರ್ನಾಡು ಪಿಕಪ್,ಜೀಪು,ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿದ್ದರು. ಜೀಪು ಚಾಲಕರಾಗಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹಾದೇವ್ ಅವರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರಕಾರದ ಅಧೀನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವರ್ಗಾವಣೆ ಆದೇಶ ಹೊರಡಿಸಿದ್ದು, ಸದ್ಯ ಅವರನ್ನು ಕೂಡಿಗೆಗೆ ವರ್ಗಾಯಿಸಲಾಗಿದೆ. “ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ” ತಕ್ಷಣದಿಂದ ಜಾರಿಗೆ ಬರುವಂತೆ ಆದೇಶವನ್ನು ಹೊರಡಿಸಲಾಗಿದೆ...
ಶ್ರೀ ಸಿದ್ಧಗಂಗಾ ಯೋಗ ತರಬೇತಿ ಕೇಂದ್ರ ಮತ್ತು ವರ್ಷಿಣಿ ಯೋಗ ಎಜುಕೇಶನ್ ಸಂಸ್ಕೃತಿ ಮತ್ತು ಸ್ಪೋರ್ಟ್ಸ್ ಟ್ರಸ್ಟ್ (ರಿ.) ಇವರು ನಡೆಸಿದ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆ-2022 ರಲ್ಲಿ 8 ರಿಂದ 10 ವರ್ಷದ ಬಾಲಕಿಯರ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ ಸ್ಥಾನ, ಹಾರ್ದಿಕ ಕೆರೆಕ್ಕೋಡಿ ದ್ವಿತೀಯ ಸ್ಥಾನ ಮತ್ತು 11 ರಿಂದ 15 ವರ್ಷದ...
ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಅಚ್ಯುತ.ಪಿ ರವರು ಡಿ.31ರಂದು ತಮ್ಮ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.ಶ್ರೀ ಅಚ್ಯುತ.ಪಿ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಗುತ್ತಿಗಾರಿನಲ್ಲಿ ಪಡೆದು, ಪಿ. ಯು. ಶಿಕ್ಷಣವನ್ನು ಎಸ್.ಎಸ್ ಪಿ.ಯು. ಕಾಲೇಜು ಸುಬ್ರಹ್ಮಣ್ಯದಲ್ಲಿ ಪೂರೈಸಿರುತ್ತಾರೆ. ಧರ್ಮಸ್ಥಳ ಮಂಜುನಾಥೇಶ್ವರ...
Loading posts...
All posts loaded
No more posts
