ಕೊಲ್ಲಮೊಗ್ರು : ಕಾಂತಾರ ಚಲನಚಿತ್ರ ಪ್ರದರ್ಶನ – ದೈವ ನರ್ತಕರಿಗೆ ಹಾಗೂ ಕಲಾವಿದರಿಗೆ ಸನ್ಮಾನ

. . . . . . . . .

ನಾಗರಿಕ ಸೇವಾ ಸಮಿತಿ ಕೊಲ್ಲಮೊಗ್ರು-ಕಲ್ಮಕಾರು ಇದರ ವತಿಯಿಂದ ಡಿ.30 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ಕಾಂತಾರ ಚಲನಚಿತ್ರದ ಓಟಿಟಿ ಪ್ರದರ್ಶನ ಹಾಗೂ ದೈವ ನರ್ತಕರಿಗೆ ಮತ್ತು ರಂಗಭೂಮಿ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ನಾಗರಿಕ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ನಿವೃತ್ತ ಶಿಕ್ಷಕರಾದ ಕುಂಞಟ್ಟಿ ಶಿವರಾಮ ಮಾಸ್ತರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಪ್ರಧಾನ ಅಂಗವಾಗಿ ದೈವ ನರ್ತಕರಾದ ಶ್ರೀಯುತ ಬೊಳಿಯ ಅಜಿಲ ಹಾಗೂ ನೀನಾಸಂ ರಂಗಭೂಮಿ ಕಲಾವಿದೆ ಮಮತಾ ಗುಳಿಕ್ಕಾನ ಇವರನ್ನು ನಾಗರಿಕ ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಉದ್ದೇಶ ಗ್ರಾಮದ ಪ್ರತಿಯೊಬ್ಬರಿಗೂ ದೈವಾರಾಧನೆಯ ಮಹತ್ವ, ಆಚರಣೆಯನ್ನು ತಿಳಿಸುವ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿದ ಕಾಂತಾರ ಚಲನಚಿತ್ರವನ್ನು ಓಟಿಟಿಯ ಮೂಲಕ ದೊಡ್ಡ ಪರದೆ ಎಲ್.ಇ.ಡಿ ಯಲ್ಲಿ ಉಚಿತವಾಗಿ ತೋರಿಸಲಾಯಿತು.
ಸುಮಾರು ಒಂದೂವರೆ ಸಾವಿರಕ್ಕೂ ಮಿಕ್ಕಿ ಎರಡು ಗ್ರಾಮದ ಜನರು ಚಲನಚಿತ್ರವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಸೇವಾ ಸಮಿತಿ ಕೊಲ್ಲಮೊಗ್ರು-ಕಲ್ಮಕಾರು ಇದರ ಅಧ್ಯಕ್ಷರಾದ ಅರುಣ ಕುಮಾರಿ ಪೊಂದ್ರುಕೋಡಿ, ಸಂಚಾಲಕರಾದ ಸುಧಾಮಣಿ ಕುಂಞಟ್ಟಿ, ಪ್ರಧಾನ ಕಾರ್ಯದರ್ಶಿ ಸತೀಶ್.ಟಿ.ಎನ್ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ತೇಜು ಕೊಲ್ಲಮೊಗ್ರು ಕಾರ್ಯಕ್ರಮ ನಿರೂಪಿಸಿದರು.
(ವರದಿ : ಉಲ್ಲಾಸ್ ಕಜ್ಜೋಡಿ)

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading