ಕಾಲುಚೈನು ಬಿದ್ದು ಸಿಕ್ಕಿದೆ

ಸುಳ್ಯ ಶ್ರೀರಾಂ ಪೇಟೆಯ ಎಸ್.ಬಿ.ಐ. ಬ್ಯಾಂಕ್ ಬಳಿ ಬೆಳ್ಳಿಯ ಕಾಲು ಚೈನ್ ಬಿದ್ದು ಸಿಕ್ಕಿರುತ್ತದೆ ಎಂದು ಗುತ್ತಿಗಾರು ಸ.ಪ.ಪೂರ್ವ ಕಾಲೇಜಿನ ಪ್ರಾಂಶುಪಾಲೆ ಚೆನ್ನಮ್ಮ ಪಿ. ತಿಳಿಸಿದ್ದಾರೆ. ಸಂಬಂಧಪಟ್ಟವರು ಇವರನ್ನು ಸಂಪರ್ಕಿಸಿ ಪಡೆದಕೊಳ್ಳಬಹುದು ಮೊ:95915 94612

ಮ್ಯಾಪಥಾನ್ 2020-21: ಸಿವಿಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಡಾ| ಎಂ.ಸಿ.ಜಯಪ್ರಕಾಶ್‌ ಮಡ್ತಿಲ ತಂಡ ವಿಜೇತ

ಐಐಟಿ ಮುಂಬಯಿ, ಎಐಸಿಟಿಇ ಮತ್ತು ಇಸ್ರೋ ಸಂಸ್ಥೆಗಳು ಜಂಟಿಯಾಗಿ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿರುವ ಮ್ಯಾಪಥಾನ್ 2020-21 (ರಾಷ್ಟ್ರೀಯ ಮಟ್ಟದ ಸಹಕಾರಿ ಭಾರತೀಯ ಮ್ಯಾಪಿಂಗ್ ಈವೆಂಟ್) ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಬಡಗ ಮಿಜಾರು ಇಲ್ಲಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಎಂಐಟಿಐ) ಇದರ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ...
Ad Widget

ಕುಲ್ಕುಂದ : ಮಹಾಶಿವರಾತ್ರಿ ಪೂಜೆಯ ಆಮಂತ್ರಣ ಬಿಡುಗಡೆ

ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಅಧ್ಯಕ್ಷರಾದ ಗಿರಿಧರ ಸ್ಕಂದ, ವಿಷ್ಣು ಮೂರ್ತಿ ದೈವಸ್ಥಾನದ ಅಧ್ಯಕ್ಷರಾದ ರವೀಂದ್ರ ರುದ್ರಪಾದ, ಪ್ರದಾನ ಅರ್ಚಕರಾದ ಗಣೇಶ್ ದೀಕ್ಷಿತ್, ರಮೇಶ್ ಭಟ್, ವೆಂಕಟ್ರಮಣ ಭಟ್, ಕೃಷ್ಣ ಭಟ್ ಶಿವರಾಮ ಪಳ್ಳಿಗದ್ದೆ, ಚಂದ್ರಶೇಖರ್ ಬಸವನಮೂಲೆ, ಶೀನಪ್ಪ ಗೌಡ ,ಚೆನ್ನಪ್ಪ ಗೌಡ...

ಮಾ.7 : ಬಡ್ದಡ್ಕದಲ್ಲಿ “ಮಹಿಮೆದ ಮಹಮ್ಮಾಯಿ” ತುಳು ಯಕ್ಷಗಾನ ಬಯಲಾಟ

ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ, ಅಲೆಟ್ಟಿ-ಬಡ್ಡಡ್ಕ ಹಾಗೂ ಊರ-ಪರವೂರ ಕಲಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಡ್ಡಡ್ಡ-ಕಲ್ಲಪಳ್ಳಿ ಇದರ ಪುನಃ ಪ್ರತಿಷ್ಠೋತ್ಸವದ ಅಂಗವಾಗಿ 9ನೇ ವರ್ಷದ ಯಕ್ಷಗಾನ ಬಯಲಾಟ ಮಾ. 07 ಭಾನುವಾರದಂದು ರಾತ್ರಿ ಗಂಟೆ 10 ಕ್ಕೆ ಬಡ್ಡಡ್ಕ ಶಾಲಾ ವಠಾರದಲ್ಲಿ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ -...

ರಜತ ಸಂಭ್ರಮ ಆಚರಿಸಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ – ಕನ್ನಡ ಭುವನೇಶ್ವರಿ ಮೆರವಣಿಗೆಗೆ ಅಕ್ಷಯ ಕೆ.ಸಿ. ಚಾಲನೆ – ಸಮ್ಮೇಳನ ಉದ್ಘಾಟಿಸಿದ ಲಕ್ಷ್ಮೀಶ ತೋಳ್ಪಾಡಿ – ಹೊಸ 10 ಕೃತಿ ಬಿಡುಗಡೆ

ಕನ್ನಡ ಸಾಹಿತ್ಯ ಪರಿಷತ್ ಮತ್ತು 25 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ನೇತೃತ್ವದಲ್ಲಿ ಹಿರಿಯ ಸಾಹಿತಿ ಡಾ.ಪೂವಪ್ಪ ಕಣಿಯೂರು ಅಧ್ಯಕ್ಷತೆಯಲ್ಲಿ ನೆಹರು ಸ್ಮಾರಕ ಮಹಾ ವಿದ್ಯಾಲಯದಲ್ಲಿ ಇಂದು ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಕನ್ನಡ ಭುವನೇಶ್ವರಿ ಮೆರವಣಿಗೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಅಕ್ಷಯ್...

ಅಡ್ಕಾರು : ಅಂಜನಾದ್ರಿ ವಾದ್ಯಕಲಾ ತಂಡ ರಂಗಪ್ರವೇಶ

ಆಂಜನಾದ್ರಿ ವಾದ್ಯಕಲಾ ತಂಡದ ಅಡ್ಕಾರು ಇದರ 2 ನೇ ತಂಡದ ರಂಗಪ್ರವೇಶ ಫೆ.18 ರಂದು ಅಡ್ಕಾರ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗುರುಗಳಾದ ಮನೀಶ್ ಇವರನ್ನು ಸನ್ಮಾನಿಸಲಾಯಿತು. https://youtu.be/u8_pRqhZ1rc

ಮಡಪ್ಪಾಡಿ : ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ, ಉಪಾಧ್ಯಕ್ಷರಾಗಿ ಉಷಾ ಜಯರಾಂ

ಮಡಪ್ಪಾಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ, ಉಪಾಧ್ಯಕ್ಷರಾಗಿ ಉಷಾ ಜಯರಾಂ ಅವಿರೋಧವಾಗಿ ಆಯ್ಕೆಯಾದರು. ಇಲ್ಲಿ 5 ಸ್ಥಾನಗಳ ಪೈಕಿ ಕಾಂಗ್ರೆಸ್ 4 ಹಾಗೂ ಬಿಜೆಪಿ 1 ಸ್ಥಾನ ಪಡೆದಿತ್ತು.

ದೇವಚಳ್ಳ : ಅಧ್ಯಕ್ಷರ ಆಯ್ಕೆಗೆ ಮೀಸಲಾತಿ ತೊಡಕು – ಉಪಾಧ್ಯಕ್ಷರಾಗಿ ಸ್ವಾಭಿಮಾನಿ ಬಳಗದ ರಾಜೇಶ್ವರಿ ಮಾವಿನಕಟ್ಟೆ

ದೇವಚಳ್ಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿ ರಾಜೇಶ್ವರಿ ಮಣಿಕಂಠ ಮಾವಿನಕಟ್ಟೆ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ. ಮಹಿಳೆಗೆ ನಿಗದಿಯಾಗಿದ್ದು, ‘ಬಿ’ ಮಹಿಳೆ ಅಲ್ಲಿ ಇಲ್ಲದಿರುವುದರಿಂದ ‘ಎ’ ಮಹಿಳೆಯಿಂದ ನಾಮಪತ್ರ ಸ್ವೀಕರಿಸಬಹುದೆಂಬ ಬಗ್ಗೆ ಚುನಾವಣಾ ಆಯೋಗದಿಂದ ಲಿಖಿತ ಆದೇಶ ಬಾರದಿರುವ ಕಾರಣ ಅಧ್ಯಕ್ಷತೆಗೆ ಚುನಾವಣೆ ನಡೆಸದಿರಲು ಚುನಾವಣಾಧಿಕಾರಿ ನಿರ್ಧರಿಸಿದ್ದಾರೆ.ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಸ್ವಾಭಿಮಾನಿ...

ಉಬರಡ್ಕ : ಅಧ್ಯಕ್ಷ ಚಿತ್ರಕುಮಾರಿ ಪಾಲಡ್ಕ, ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ

ಉಬರಡ್ಕ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಚಿತ್ರಕುಮಾರಿ ಪಾಲಡ್ಕ, ಉಪಾಧ್ಯಕ್ಷರಾಗಿ ಪ್ರಶಾಂತ್ ಪಾನತ್ತಿಲ ಆಯ್ಕೆಯಾಗಿದ್ದಾರೆ. ಇಲ್ಲಿ ಬಿಜೆಪಿ ಬೆಂಬಲಿತರಿಗೆ ಬಹುಮತವಿದ್ದರೂ ಮೀಸಲಾತಿ ನಿಗದಿಯಿಂದ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. ಉಪಾಧ್ಯಕ್ಷ ಸ್ಥಾನ ಮಾತ್ರ ಬಿಜೆಪಿಗೆ ಲಭಿಸಿದೆ. 9 ಸ್ಥಾನಗಳ ಪೈಕಿ ಬಿಜೆಪಿ 6 ಹಾಗೂ ಕಾಂಗ್ರೆಸ್ 3 ಸ್ಥಾನ ಪಡೆದಿತ್ತು.

ಮುರುಳ್ಯ : ಅಧ್ಯಕ್ಷರಾಗಿ ಜಾನಕಿ ಶಾಂತಿನಗರ, ಉಪಾಧ್ಯಕ್ಷರಾಗಿ ವನಿತಾ ಸುವರ್ಣ ಬಾಮೂಲೆ

ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜಾನಕಿ ಶಾಂತಿನಗರ, ಉಪಾಧ್ಯಕ್ಷರಾಗಿ ವನಿತಾ ಸುವರ್ಣ ಬಾಮೂಲೆ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ ಎಲ್ಲಾ 7 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
Loading posts...

All posts loaded

No more posts

error: Content is protected !!