Ad Widget

ದೇವಚಳ್ಳ : ಅಧ್ಯಕ್ಷರ ಆಯ್ಕೆಗೆ ಮೀಸಲಾತಿ ತೊಡಕು – ಉಪಾಧ್ಯಕ್ಷರಾಗಿ ಸ್ವಾಭಿಮಾನಿ ಬಳಗದ ರಾಜೇಶ್ವರಿ ಮಾವಿನಕಟ್ಟೆ

ದೇವಚಳ್ಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿ ರಾಜೇಶ್ವರಿ ಮಣಿಕಂಠ ಮಾವಿನಕಟ್ಟೆ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ. ಮಹಿಳೆಗೆ ನಿಗದಿಯಾಗಿದ್ದು, ‘ಬಿ’ ಮಹಿಳೆ ಅಲ್ಲಿ ಇಲ್ಲದಿರುವುದರಿಂದ ‘ಎ’ ಮಹಿಳೆಯಿಂದ ನಾಮಪತ್ರ ಸ್ವೀಕರಿಸಬಹುದೆಂಬ ಬಗ್ಗೆ ಚುನಾವಣಾ ಆಯೋಗದಿಂದ ಲಿಖಿತ ಆದೇಶ ಬಾರದಿರುವ ಕಾರಣ ಅಧ್ಯಕ್ಷತೆಗೆ ಚುನಾವಣೆ ನಡೆಸದಿರಲು ಚುನಾವಣಾಧಿಕಾರಿ ನಿರ್ಧರಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಸ್ವಾಭಿಮಾನಿ ಬಳಗದಿಂದ ಸ್ಪರ್ಧಿಸಿದ್ದ ರಾಜೇಶ್ವರಿ ಮಾವಿನಕಟ್ಟೆ 6 ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿ ಬೆಂಬಲದಿಂದ ಸ್ಪರ್ಧಿಸಿದ್ದ ಸೀತಮ್ಮ ಕರಂಗಲ್ಲು 4 ಮತ ಪಡೆದು ಸೋಲು ಕಂಡರು. ಇಲ್ಲಿ ಬಿಜೆಪಿ ಬಂಡಾಯ 5, ಬಿಜೆಪಿ 4 ಹಾಗೂ ಕಾಂಗ್ರೆಸ್ 1 ಸ್ಥಾನಗಳನ್ನು ಪಡೆದಿತ್ತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!