Ad Widget

ಮ್ಯಾಪಥಾನ್ 2020-21: ಸಿವಿಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಡಾ| ಎಂ.ಸಿ.ಜಯಪ್ರಕಾಶ್‌ ಮಡ್ತಿಲ ತಂಡ ವಿಜೇತ

ಐಐಟಿ ಮುಂಬಯಿ, ಎಐಸಿಟಿಇ ಮತ್ತು ಇಸ್ರೋ ಸಂಸ್ಥೆಗಳು ಜಂಟಿಯಾಗಿ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿರುವ ಮ್ಯಾಪಥಾನ್ 2020-21 (ರಾಷ್ಟ್ರೀಯ ಮಟ್ಟದ ಸಹಕಾರಿ ಭಾರತೀಯ ಮ್ಯಾಪಿಂಗ್ ಈವೆಂಟ್) ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಬಡಗ ಮಿಜಾರು ಇಲ್ಲಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಎಂಐಟಿಐ) ಇದರ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಸುಳ್ಯದ ಮಡ್ತಿಲ ಡಾ| ಜಯಪ್ರಕಾಶ್ ಎಂ.ಸಿ ನೇತೃತ್ವದ ತಂಡ ಗೆಲುವು ಸಾಧಿಸಿದೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪ್ರಾರಂಭಿಸಿದ
ಆತ್ಮ ನಿರ್ಭಾರ್ ಭಾರತ್ ಯೋಜನೆಯ ಅಡಿಯಲ್ಲಿ ರಾಷ್ಟ್ರದಾದ್ಯಂತ ನಡೆಸಲ್ಪಟ್ಟ  ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಮಾರು 9,000ಕ್ಕೂ ಅಧಿಕ ಪ್ರತಿಭಾನ್ವಿತರು ಪಾಲ್ಗೊಂಡಿದ್ದು ಸುಮಾರು 478  ಶೈಕ್ಷಣಿಕ
ಸಂಸ್ಥೆಗಳ ತಂಡ ಭಾಗವಹಿಸಿದ್ದು, ಈ ಪೈಕಿ 175 ತಂಡ ವಿಜೇತರೆನಿಸಿದ್ದು 25 ಚಾಂಪಿಯನ್ಸ್ ಆಗಿದ್ದವು. ಈ ಫಲಿತಾಂಶದಲ್ಲಿ ಎಂಐಟಿಇ ಇದರ ಡಾ। ಜಯಪ್ರಕಾಶ್ ಎಂ.ಸಿ ತಂಡ ಜಯಗಳಿಸಿದೆ.

*ಮ್ಯಾಪಥಾನ್ ಬಗ್ಗೆ*
ಮ್ಯಾಪಥಾನ್ ಎನ್ನುವುದು ನಿರ್ಧಿಷ್ಟ ಸಮಸ್ಯೆ ಹೇಳಿಕೆಗಾಗಿ ನಕ್ಷೆ ತಯಾರಿಸುವ ಸ್ಪರ್ಧೆ ಆಗಿದ್ದು, ಐಐಟಿ ಬಾಂಬೇ, ಎಐಸಿಟಿಇ ಮತ್ತು ಇಸ್ರೋ ಜಂಟಿಯಾಗಿ ಆಯೋಜಿಸಿರುವ ಈ ಸ್ಪರ್ಧೆಗೆ ಸಮಗ್ರ ಭಾರತೀಯರನ್ನು ಆಹ್ವಾನಿಸುತ್ತದೆ. ಭಾರತೀಯ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಬಳಸಿಕೊಂಡು ನಕ್ಷೆಗಳನ್ನು ತಯಾರಿಸಲು ಇದೊಂದು ಪಂಥಹ್ವಾನ ನೀಡುತ್ತದೆ.

ಭಾರತೀಯ ರಿಮೋಟ್ ಸೆನ್ಸಿಂಗ್ ಡೇಟಾದ ಸಾಮರ್ಥ ಅರ್ಥಮಾಡಿ ಕೊಳ್ಳುವುದು ಮತ್ತು ಉಚಿತ ಮುಕ್ತ
ಸಂಪನ್ಮೂಲ ನಕಾಸೆ ತಂತ್ರಾಂಶ (ಓಪನ್ ಸೋರ್ಸ್ ಮ್ಯಾಪಿಂಗ್ ಸಾಫ್ಟ್ ವೇರ್) ಕ್ಯೂಜಿಐಎಸ್ ಬಳಸಿ ಭಾರತೀಯ ಪ್ರದೇಶಗಳಿಗೆ ನಕ್ಷೆಗಳನ್ನು ತಯಾರಿಸುವ ಪ್ರಾಥಮಿಕ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಭಾರತೀಯ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಬಳಸಿಕೊಂಡು ಭಾರತದ ವಿಷಯಾಧಾರಿತ ನಕ್ಷೆಗಳನ್ನು ಜಂಟಿಯಾಗಿ ತಯಾರಿಸಲು ಕ್ರೌಡ್ ಸೋರ್ಸಿಂಗ್ ವಿಧಾನದಲ್ಲಿ ಒಟ್ಟಾಗಿ ಕೆಲಸ ಮಾಡಲಾಗುವುದು.

ದೇಶವನ್ನು ಆತ್ಮ ನಿರ್ಭಾರ ಭಾರತ್ ಮತ್ತು ಜಾಗತಿಕ ಜಿಐಎಸ್ ಕೇಂದ್ರವನ್ನಾಗಿ ಮಾಡುವ ಕಡೆಗೆ ಬಾಹ್ಯಾಕಾಶ ಅನ್ವಯಗಳಲ್ಲಿ ದೇಶದಲ್ಲಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಇದು ಪ್ರಯೋಜನಕಾರಿ ಆಗಿದ್ದು, ಸಹಕಾರಿ ಸಮಸ್ಯೆ ಪರಿಹಾರಕ್ಕಾಗಿ ಸಕ್ರಿಯಗೊಳಿಸುವ ವೇದಿಕೆ ಇದಾಗಿದೆ.

ಇವರು ಐವರ್ನಾಡು ಗ್ರಾಮದ ಮಡ್ತಿಲ ನಿವೃತ್ತ ಎಸ್.ಐ. ಚಿನ್ನಪ್ಪ ಗೌಡ ಹಾಗೂ ದಿ.ಹೊನ್ನಮ್ಮ ದಂಪತಿಗಳ ಪುತ್ರ. ತನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಮಡಿವಾಳ ಹೈಸ್ಕೂಲ್ ಶಿಕ್ಷಣವನ್ನು ಐವರ್ನಾಡು ಪದವಿಪೂರ್ವ ಕಾಲೇಜು, ಬಿಎಸ್ಸಿ ಪದವಿಯನ್ನು ಸುಳ್ಯದ ಎನ್ ಎಮ್ ಸಿ ಯಲ್ಲಿ, ಉನ್ನತ ಶಿಕ್ಷಣ ಹಾಗೂ ಪಿಹೆಚ್‌ಡಿ ಪದವಿಯನ್ನು ಮಂಗಳೂರು ಯುನಿವರ್ಸಿಟಿಯಲ್ಲಿ ಪಡೆದಿದ್ದಾರೆ.

ಪತ್ನಿ ಡಾ| ನಿಶ್ಮಿತಾ ಮಡ್ತಿಲ ರವರು ಬಿಸಿರೋಡಿನಲ್ಲಿ ಆಯುಷ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಸ್ಲೋಕ್ 5 ವರ್ಷವಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!