ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು. ಧ್ವಜಾರೋಹಣ ವನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಕತ್ತಾರ್ ಇಬ್ರಾಹಿಂ ನೆರವೇರಿಸಿದರು.ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಖಾದರ್ ಸಿ.ಎಚ್., ಶಾಲಾ ಮುಖ್ಯಶಿಕ್ಷಕಿ ಜಯಲತಾ ಕೆ.ಆರ್., ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.ಧ್ವಜಾರೋಹಣ ದ ನೇತೃತ್ವವನ್ನು ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಕೆ. ವಹಿಸಿದರು.ದತ್ತಿನಿಧಿ ವಿತರಣೆ :...

ಸುಳ್ಯ: ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ಜೆ.ಇ. ಬೋರಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಇಇ ಹರೀಶ್ ನಾಯ್ಕ್, ಎಇ ಸುಪ್ರಿತ್ , ಜೂನಿಯರ್ ಇಂಜಿನಿಯರ್ ಗಳಾದ ಮಹೇಶ್ ಕುಳ,  ಉಷಾ, ದಿವ್ಯ, ಮೇಲ್ವಿಚಾರಕರಾದ ಧರ್ಮಪಾಲ ಕೆ., ಜಯಪ್ರಕಾಶ್ ಕೆ., ಜೋಸೆಫ್, ಹಿರಿಯ ಸಹಾಯಕಿ ಪ್ರಸಿಲ್ಲಾ, ಸಿಬ್ಬಂದಿಗಳಾದ ಅರುಣಕುಮಾರ್, ತಿಮ್ಮಪ್ಪ ಕೆ., ದುರ್ಗಪ್ರಸಾದ್,...
Ad Widget

ಐವರ್ನಾಡು : ಸ್ವಾತಂತ್ರ್ಯೋತ್ಸವ ಆಚರಣೆ – ಸಾಧಕರಿಗೆ ಸನ್ಮಾನ

ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನಡೆಯಿತು.ನಿವೃತ್ತ ಯೋಧರಾದ ಗಣೇಶ್ ಬದಂತ್ತಡ್ಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿವೃತ್ತ ಯೋಧ ಗಣೇಶ್ ಬದಂತ್ತಡ್ಕ, ಸ್ವಚ್ಛತಾ ನಿರತರಾದ, ಬಾಲಕೃಷ್ಣ ಮಡ್ತಿಲ, ಮುರಳೀಧರ ಕೊಚ್ಚಿರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಐವರ್ನಾಡು ಪ್ರಾಥಮಿಕ...

ಅರಂತೋಡು :
ಅಖಂಡ ಭಾರತ ಸಂಕಲ್ಪ ದಿನಾಚರಣೆ – ಪಂಜಿನ ಮೆರವಣಿಗೆ

ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡಹಾಗೂ ಹನುಮಾನ್ ಶಾಖೆ ಆರಂತೋಡು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ಹಾಗೂ ಪಂಜಿನ ಮೆರವಣಿಗೆ ಆ.13 ರಂದು ಅರಂತೋಡಿನಲ್ಲಿ ನಡೆಯಿತು. ಪಂಜಿನ ಮೆರವಣಿಗೆ ಕೋಡಂಕೇರಿ ಕೋರಗಜ್ಜನ ದ್ವಾರದಿಂದ ಹೊರಟು ದುರ್ಗಾಮತಾ ಮಂದಿರದಲ್ಲಿ ಸಮಾಪನಗೊಂಡಿತು. ನಂತರ ಸಭಾ ಕಾರ್ಯಕ್ರಮ ಆರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆಯಿತು. ...

ಮಕ್ಕಳಲ್ಲಿ ದೇಶಪ್ರೇಮವನ್ನು ಪ್ರೇರೆಪಿಸುವ ಅಮೂಲ್ಯವಾದ ಪ್ರಯತ್ನವಾಗಬೇಕು

✍️ ಭಾಸ್ಕರ ಜೋಗಿಬೆಟ್ಟು ನಮಗೆ ಈ ವರ್ಷ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ದೇಶಾದ್ಯಂತ ಈ ಸಂದರ್ಭದಲ್ಲಿ ಪ್ರತಿಯೊಂದು ಮನೆ , ಕಛೇರಿಗಳಲ್ಲಿ ಬಾವುಟವನ್ನು ಹಾರಿಸುವುದರ ಮೂಲಕ ಗೌರವವನ್ನು ಸೂಚಿಸಲಾಗುತ್ತದೆ. ಮಕ್ಕಳಿಗೆ ಬೇರೆ ಚಟುವಟಿಕೆಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಲಾಗುತ್ತದೆ. ಮಕ್ಕಳಿಗೆ ದೇಶಪ್ರೇಮದ ಬಗ್ಗೆ ತಿಳುವಳಿಕೆ ನೀಡಬೇಕು ಇಂದಿನ ಮಕ್ಕಳೆ ಮುಂದಿನ ಜನಾಂಗ....

ಬೆಳ್ಳಾರೆ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸ ವಠಾರದಲ್ಲಿ 77ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮದ್ರಸಾ ಮುಖ್ಯೋಪಾಧ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು. ನಂತರ ವಿದ್ಯಾರ್ಥಿ ನಾಯಕ ಶಿಹಾಬ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸಭೆಯಲ್ಲಿ ಅಧ್ಯಾಪಕರುಗಳು, ವಿದ್ಯಾರ್ಥಿಗಳು, ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭೆಗೆ ಹಸೈನಾರ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.

ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಜಿತ್ ಮೃತ್ಯು

ಸುಳ್ಯ ಶಾಂತಿನಗರ ನಿವಾಸಿ 17 ವರ್ಷದ ಬಾಲಕ ಹೊಟ್ಟೆ ನೋವು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಮೃತ ಬಾಲಕ ಸುಳ್ಯ ಶಾಂತಿನಗರ ನಿವಾಸಿ ಸಂಜೀವ ಎಂಬುವರ ಪುತ್ರ ಶ್ರೀಜಿತ್. ಈತನಿಗೆ ಕಳೆದ ಎರಡು ದಿನಗಳಿಂದ ಹೊಟ್ಟೆ ನೋವು ಕಾಣಿಸಿದ್ದು ಆಗಸ್ಟ್ 13ರಂದು ನೋವು ಉಲ್ಬಣಗೊಂಡು ಮನೆಯವರು ಸುಳ್ಯ...

ಗುತ್ತಿಗಾರು : ಗ್ರಂಥಪಾಲಕರ ದಿನಾಚರಣೆ ಹಾಗೂ ಮಕ್ಕಳ ಕಥಾ ಸಂಕಲನ ಬಿಡುಗಡೆ

ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಮತ್ತು ಕಿರಣರಂಗ ಅಧ್ಯಯನ ಸಂಸ್ಥೆ(ರಿ.) ಗುತ್ತಿಗಾರು ಇವುಗಳ ಸಹಯೋಗದೊಂದಿಗೆ ಗ್ರಂಥಾಲಯ ಪಿತಾಮಹ ಡಾ| ಎಸ್.ಆರ್.ರಂಗನಾಥನ್ ಜನ್ಮದಿನೋತ್ಸವ, ಗ್ರಂಥಪಾಲಕರ ದಿನಾಚರಣೆ, ಮಕ್ಕಳ ಕಥಾ ಸಂಕಲನ ಬಿಡುಗಡೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವು ಆ.13 ರಂದು ಗುತ್ತಿಗಾರು ಗ್ರಾಮ ಪಂಚಾಯತ್...

ಪಾಲಡ್ಕ ಬಳಿ ಪತ್ತೆಯಾದ ಅಪರಿಚಿತ ಶವದ ಗುರುತು ಪತ್ತೆ

ಸುಳ್ಯದ ಅರಂಬೂರು ಬಳಿಯ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಯ ಶವವನ್ನು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಬಾಲಕೃಷ್ಣ (65 ವರ್ಷ) ಎಂದು ಗುರುತಿಸಲಾಗಿದೆ . ಮಿನುಂಗೂರು ಮನೆಯ ಬಾಲಕೃಷ್ಣ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆಗಸ್ಟ್ 8ರಂದು ಚೆಂಬುವಿನಲ್ಲಿರುವ ತನ್ನ ಮನೆಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಅರಂತೋಡಿಗೆ...

ಎಡಮಂಗಲ : ವ್ಯಕ್ತಿ ನಾಪತ್ತೆ – ದೂರು ದಾಖಲು

ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪಾದೆ ಬಾಲಕೃಷ್ಣ ಗೌಡ (56) ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ.2023ರ ಜುಲೈ 31ರಂದು ಮನೆಯಿಂದ ಹೊರಗೆ ಹೋದ ಅವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.5.7 ಎತ್ತರದ ಬಾಲಕೃಷ್ಣ ಗೌಡ ಎಣ್ಣೆಕಪ್ಪು ಬಣ್ಣ ಹೊಂದಿದ್ದಾರೆ. ಕನ್ನಡ, ತುಳು, ಹಿಂದಿ, ತಮಿಳು, ಮಲೆಯಾಳಂ ಮತ್ತು ಮರಾಠಿ...
Loading posts...

All posts loaded

No more posts

error: Content is protected !!