- Friday
- August 28th, 2026
ಗಾಂಧಿ ಜಯಂತಿ ಅಂಗವಾಗಿ ಕಮಿಲದಿಂದ ಗುತ್ತಿಗಾರು ವರೆಗೆ ಸ್ವಚ್ಚತಾ ಕಾರ್ಯ ನಡೆಯಿತು. ಗ್ರಾ.ಪಂ.ಸದಸ್ಯರು, ಅಂಗನವಾಡಿ, ಆಶಾ ಕಾರಗಯಕರ್ತೆಯರು, ಗ್ರಾಮಸ್ಥರು, ಸ್ಥಳೀಯ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿಯವರ ಜನ್ಮ ದಿನದ ಪ್ರಯುಕ್ತ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಅ.1 ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರು , ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಪೇಟೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಲಯನ್ಸ್ ಕ್ಲಬ್ ಜಂಟಿ ಅಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಮಾತನಾಡಿ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಸರ್ವರನ್ನು ಸ್ವಾಗತಿಸಿದರು....
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲೂಕು ಪಂಚಾಯತ್ ಸುಳ್ಯ, ಆರಂತೋಡು ಗ್ರಾಮ ಪಂಚಾಯತ್ ಮತ್ತು ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವುಗಳ ಸಹಯೋಗದಲ್ಲಿ ಅರಂತೋಡು ಅಮೃತ ಸಭಾ ಭವನದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಹಿ ಸೇವಾ ವಿಶೇಷ ಗ್ರಾಮ ಸಭೆ ಹಾಗೂ ಯೋಧ ನಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ...
ವರದಿ : ಉಲ್ಲಾಸ್ ಕಜ್ಜೋಡಿ “ವೈದ್ಯೋ ನಾರಾಯಣೋ ಹರಿಃ” ಎಂಬ ಮಾತಿಗೆ ಅನುಗುಣವಾಗಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆಯನ್ನು ಕಳೆದ 50 ವರ್ಷಗಳಿಂದ ಸಮಾಜಿಕ ಕಳಕಳಿಯಿಂದ ನಡೆಸಿಕೊಂಡು ಬರುತ್ತಿರುವವರು, ವಾಹನ ಸಂಚಾರವಿಲ್ಲದ ಕಾಲಘಟ್ಟದಲ್ಲಿ ತನ್ನ ಬೈಕಿನಲ್ಲಿ ರೋಗಿಗಳ ಮನೆಗೆ ತೆರಳಿ ಶುಶ್ರೂಷೆ ನೀಡುತ್ತಾ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇದ್ದ ಸಮಯದಲ್ಲಿ ಜನರಿಗೆ ಅರಿವು-ನೆರವು-ಚಿಕಿತ್ಸೆಯನ್ನು...
ಸಂಪಾಜೆ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಗಾಂಧಿಜೀ ಜಯಂತಿ ಪ್ರಯುಕ್ತ ಸ್ವಚತಾ ಕಾರ್ಯಕ್ರಮ ನಡೆಯಿತು. ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಅರ್ಚನಾ ರವರ ನೇತೃತ್ವ ದಲ್ಲಿ ಸ್ವಚತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದಲ್ಲಿ ಆರೋಗ್ಯ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯರು, ಭಾಗವಹಿಸಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ 154ನೇ "ಮಹಾತ್ಮ ಗಾಂಧಿ ಜಯಂತಿ "ಹಾಗೂ 119ನೇ" ಲಾಲ್ ಬಹುದ್ದೂರ್ ಶಾಸ್ತ್ರಿ"ಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಚಂದ್ರಶೇಖರ್ ಪಾರೆಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ದಿನದ ಮಹತ್ವವನ್ನು ತಿಳಿಸಿದರು. ಕುಮಾರಿ ಸುಧಾರಾಣಿಯವರು ಈ ಇಬ್ಬರು ಮಹಾನ್ ವ್ಯಕ್ತಿಗಳ ಜೀವನದ ಘಟನೆಗಳನ್ನು ಕಥಾರೂಪವಾಗಿ ತಿಳಿಯಪಡಿಸಿ ಅವರ...
ಸುಳ್ಯ ಬಿಜೆಪಿ ಮಂಡಲ ವತಿಯಿಂದ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗಿರತಿ ಮುರುಳ್ಯ ಅವರು ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯ ಜನ್ಮ ದಿನಾಚರಣೆಯ ಈ ಶುಭದಿನದಂದು ನಾವು ಸು ಳ್ಯ ಬಿಜೆಪಿ ಮಂಡಲ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ...
ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ನೇತೃತ್ವದಲ್ಲಿ ಭಸ್ಮಡ್ಕ, ಕುರುಂಜಿ, ಕೇರ್ಪಳ ಊರವರ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮ ಅ.2 ರಂದು ಭಸ್ಮಡ್ಕದಲ್ಲಿ ನಡೆಯಿತು.ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕೆ.ಸಿ.ಶಿವಾನಂದರು ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಮಂಡಲ ಪ್ರಧಾನ ಕೆ.ಸಿ.ಸದಾನಂದ, ನ.ಪಂ. ಸದಸ್ಯ ಸುಧಾಕರ ಕುರುಂಜಿಭಾಗ್, ಯುವಕ ಮಂಡಲದ...
ನವದೆಹಲಿ: ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮರಳಿಸಲು ಅಥವಾ ವಿನಿಮಯ ಮಾಡಲು ನೀಡಲಾಗಿದ್ದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ 7ರವರೆಗೆ ವಿಸ್ತರಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಆರ್ಬಿಐ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕ್ಗೆ ಮರಳಿಸಲು ಅಥವಾ ವಿನಿಮಯ ಮಾಡಲು ಈ ಹಿಂದೆ ನಿಗದಿಪಡಿಸಿದ್ದ ಅವಧಿಯೂ...
Loading posts...
All posts loaded
No more posts
