- Friday
- August 21st, 2026
ಸಂಪಾಜೆಯ ಮಸೀದಿ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದ ಘಟನೆ ಮಾ.1ರಂದು ವರದಿಯಾಗಿದೆ.ಸಂಪಾಜೆಯ ಮಸೀದಿ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು ಒಬ್ಬಾತನಿಗೆ ಗಂಭೀರ ಗಾಯಾವಾಗಿರುವುದಾಗಿ ತಿಳಿದುಬಂದಿದೆ. ಒಬ್ಬಾತ ಸ್ಥಳೀಯ ಟೀಚರ್ ಒಬ್ಬರ ಮಗ ಎನ್ನಲಾಗಿದೆ. ಒಬ್ಬನ ಕೈಗೆ ಹಾಗೂ ಇನ್ನೊಬ್ಬ ಸವಾರನ ಕಾಲಿಗೆ ಗಾಯವಾಗಿದೆ. ಮಿಥುನ್...
ಸುಳ್ಯ : ಪೆರಾಜೆ ಬಳಿಯ ಪಾಲಡ್ಕ ಎಂಬಲ್ಲಿ ಗೂನಡ್ಕ ಮಾರುತಿ ಶಾಲಾ ಶಿಕ್ಷಕರಾದ ಪದ್ಮನಾಭ ಕಿರ್ಲಾಯ ಎಂಬುವವರು ಖಾಸಗಿ ಬಸ್ ನ ಹಿಂಬದಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಇದೀಗ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅರಂತೋಡು ಗ್ರಾಮದ ಕಿರ್ಲಾಯದವರಾಗಿದ್ದು ಪ್ರಸ್ತುತ ಮೇನಾಲದಲ್ಲಿ ಜಾಗ ಖರೀದಿಸಿ ನೆಲೆಸಿದ್ದರು....
ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿದ್ದು ದೇವಸ್ಥಾನದ ಜೋರ್ಣೋದ್ಧಾರ ಕಾರ್ಯಗಳಿಗಾಗಿ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ಹಾಗೂ ವೈಯಕ್ತಿಕ ದೇಣಿಗೆಯಾಗಿ ರೂ. 1 ಲಕ್ಷ ನೀಡುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ಭರವಸೆ ನೀಡಿದ್ದಾರೆ.ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ಬಳಿಕ ಜೀರ್ಣೋದ್ಧಾರ ಸಮಿತಿ...
ಬಸ್ ನಿಂದ ಬಿದ್ದು ಆಸ್ಪತ್ರೆಗೆ ದಾಖಲು!ಸುಬ್ರಹ್ಮಣ್ಯ ಗ್ರಾಮದ ಬಿಲದ್ವಾರದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಬಸ್ಸು ಚಲಾಯಿಸಿದ ಪರಿಣಾಮ ಮಹಿಳೆಯೋರ್ವರು ಕೆಳಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ಫೆ.27ರಂದು ನಡೆದಿದೆ.ಇವರು ತನ್ನ ಮಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು, ಸುಬ್ರಹ್ಮಣ್ಯ ಬಿಲದ್ವಾರದ ಬಳಿ ಬಸ್ ಇಳಿಯುತ್ತಿದ್ದಾಗ ನಿರ್ವಾಹಕ ಗಮನಿಸದೇ ಬಸ್ ಚಲಾಯಿಸಲು ಸೂಚನೆ ನೀಡಿದ್ದಾರೆ. ಈ ವೇಳೆ ಬಸ್...
ಪೆರಾಜೆ ಬಳಿಯ ಪಾಲಡ್ಕ ಎಂಬಲ್ಲಿ ಗೂನಡ್ಕ ಶಾಲಾ ಶಿಕ್ಷಕರಾದ ಪದ್ಮನಾಭ ಎಂಬುವವರು ಖಾಸಗಿ ಬಸ್ ನ ಹಿಂಬಂದಿಗೆ ಡಿಕ್ಕಿ ಹೊಡೆದ ಪರಿಣಾಮ ಇದೀಗ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ (ರಿ.) ಶಿವಮೊಗ್ಗ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ | ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ 6ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯು ವಾಸವಿ ಪಬ್ಲಿಕ್ ಶಾಲೆ ಕೋಟೆ ರಸ್ತೆ ಶಿವಮೊಗ್ಗ ದಲ್ಲಿ 25 ಫೆಬ್ರವರಿ 2024...
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಲಮೊಗ್ರು ಗ್ರಾಮದ ಚರಣ್ ಕುಞೇಟಿ ಎಂಬುವವರು ಫೆ.28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೆಲವು ತಿಂಗಳುಗಳಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ.ಮೃತರಿಗೆ 29 ವರ್ಷ ವಯಸ್ಸಾಗಿದ್ದು, ಮೃತರು ತಂದೆ ಕೊಲ್ಲಮೊಗ್ರದ ಪೋಸ್ಟ್ ಮಾಸ್ಟರ್ ಚಂದ್ರಶೇಖರ, ತಾಯಿ ಕಲಾವತಿ, ಸಹೋದರ ವಚನ್ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಲಮೊಗ್ರು ಗ್ರಾಮದ ಚರಣ್ ಕುಞೇಟಿ ಎಂಬುವವರು ಫೆ.28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೆಲವು ತಿಂಗಳುಗಳಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ.ಮೃತರಿಗೆ 29 ವರ್ಷ ವಯಸ್ಸಾಗಿದ್ದು, ಮೃತರು ತಂದೆ ಕೊಲ್ಲಮೊಗ್ರದ ಪೋಸ್ಟ್ ಮಾಸ್ಟರ್ ಚಂದ್ರಶೇಖರ, ತಾಯಿ ಕಲಾವತಿ, ಸಹೋದರ ವಚನ್ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಮಾ.01 ಶುಕ್ರವಾರ ಸೂರ್ಯೋದಯದಿಂದ ಮಾ.02 ಶನಿವಾರ ಸೂರ್ಯೋದಯದವರೆಗೆ ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ಹಾಗೂ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರ ಸಂಯುಕ್ತ ಆಶ್ರಯದಲ್ಲಿ 22ನೇ ವರ್ಷದ ಏಕಾಹ ಭಜನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.
Loading posts...
All posts loaded
No more posts
