ಚೊಕ್ಕಾಡಿ :  ಮೈಮೇಲೆ ದನ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತ್ಯು 

ವ್ಯಕ್ತಿಯೊಬ್ಬರ ಮೈಮೇಲೆ ದನ ಬಿದ್ದು ತೀವ್ರ ಜಖಂಗೊಂಡು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದ ಘಟನೆ ಚೊಕ್ಕಾಡಿಯಿಂದ ವರದಿಯಾಗಿದೆ. ಅಮರಪಡೂರು ಗ್ರಾಮದ ಚೊಕ್ಕಾಡಿಯ ನಿವಾಸಿ ನಡುಗಲ್ಲು ರಾಧಾಕೃಷ್ಣರವರು ಫೆ.27 ರಂದು ತಮ್ಮ ದನವನ್ನುಮೇಯಿಸಲು ಕಟ್ಟಿ ಹಾಕಲೆಂದು ತೋಟದ ಬದಿಯಲ್ಲಿ ಕರೆದೊಯ್ಯುತ್ತಿರುವಾಗ ಬರೆಯಲ್ಲಿ ಜಾರಿ ಬಿದ್ದರು. ಈ ವೇಳೆ ದನದ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಅವರ ಕೈಯಲ್ಲಿದ್ದುದರಿಂದ ಎಳೆಯಲ್ಪಟ್ಟು ದನವು...

ಸುಳ್ಯ;  ಮಾ. 10 ರಂದು ಗ್ಯಾರಂಟಿ ಸಮಾವೇಶ

ಸುಳ್ಯ ತಾಲೂಕಿನಲ್ಲಿ ಮಾ. 10 ರಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವು ನಡೆಯಲಿದೆ.ಕರ್ನಾಟಕ ರಾಜ್ಯ ಸರಕಾರವು ನೀಡುತ್ತಿರುವ ಅನ್ನಭಾಗ್ಯ, ಸ್ತ್ರೀಶಕ್ತಿ, ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ ಯೋಜನೆಗಳ ಫಲಾನುಭವಿಗಳ ಸಭೆಯನ್ನು ಸರಕಾರದ ವತಿಯಿಂದ ನಡೆಸಲಾಗುವುದು. ಈ ಸಮಾವೇಶವು ಸುಳ್ಯದ ಪರಿವಾರಕಾನದಲ್ಲಿರುವ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಂಗಣದಲ್ಲಿ ನಡೆಯಲಿದೆ. ಸುಮಾರು 2500 ರಿಂದ 3000 ಮಂದಿ...
Ad Widget

ನವೀನ್ ಚಾತುಬಾಯಿಯವರಿಗೆ ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಕೇಂದ್ರದಿಂದ ಜಿಲ್ಲಾ ಪ್ರಗತಿಪರ ಕೃಷಿಕ ಪುರಸ್ಕಾರ

   ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕೃಷಿಕ ನವೀನ್ ಚಾತುಬಾಯಿಯವರಿಗೆ ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ಜಿಲ್ಲಾ ಮಟ್ಟದ ಪ್ರಗತಿಪರ ಕೃಷಿಕ ಪುರಸ್ಕಾರ ದೊರೆಯಿತು. ಮಾರ್ಚ್ 6ರಂದು ಉಳ್ಳಾಲದಲ್ಲಿ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ-2024 ಕಾರ್ಯಕ್ರಮದಲ್ಲಿ ಜಿಲ್ಲೆಯ 5 ಜನ ಪ್ರಗತಿಪರ ಕೃಷಿಕರಿಗೆ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಗೇರು...

ಅಯೋಧ್ಯೆಗೆ ತೆರಳಿದ ಸುಳ್ಯದ ಬಿಜೆಪಿ ಕಾರ್ಯಕರ್ತರು

ಶ್ರೀ ರಾಮಚಂದ್ರನ ಜನ್ಮಭೂಮಿ ಅಯೋಧ್ಯೆಗೆ ಸುಳ್ಯದಿಂದ ಬಿಜೆಪಿ‌ ಕಾರ್ಯಕರ್ತರು  ಮಾ.6 ರಂದು  ತೆರಳಿದ್ದರು.ಬಿಜೆಪಿ‌ ಕಾರ್ಯಕರ್ತರ ತಂಡದಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗಿಯಾಗಿದ್ದರು. ಶಾಸಕಿಕು. ಭಾಗೀರಥಿ ಮುರುಳ್ಯ ‌ಹಾಗೂ ಪಕ್ಷದ ಮುಖಂಡರು ಶುಭ ಹಾರೈಸಿ ಬೀಳ್ಕೊಟ್ಟರು.

ಮೇನಾಲ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ

ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಅದ್ದೂರಿಯಾಗಿ ಆರಂಭಗೊಂಡಿದೆ.  ವಿಷ್ಣುಮೂರ್ತಿ ದೈವದ ಭಂಡಾರ ಆಗಮನದ ಬಳಿಕ ಕೋರಚ್ಚನ್ ದೈವದ ವೆಳ್ಳಾಟಂ ನಡೆಯಿತು. ಬಳಿಕ ಕಂಡನಾರ್ಕೇಳನ್ ದೈವದ ವೆಳ್ಳಾಟಂ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಗಲ್, ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಮಾ.9 : ಪಾಲ್ತಾಡು ಸಮೀಪದ ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ರಾಜಗುಳಿಗ ದೈವದ ಕೋಲ

ಬೆಳ್ಳಾರೆ : ಪೆರುವಾಜೆ -ಪಾಲ್ತಾಡಿ-ಕೊಳ್ತಿಗೆ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟ  ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವದಕೋಲವು ಮಾ.9 ರಂದು  ನಡೆಯಲಿದೆ.ಮಾ.9 ರಂದು ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ , ಸ್ಥಳ ಶುದ್ದಿ ,ಶ್ರೀ ಮಹಾಗಣಪತಿ ಹೋಮ ನಡೆಯಲಿದೆ.ಸಂಜೆ 6 ಗಂಟೆಗೆ ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು ,ರಾತ್ರಿ 7 ರಿಂದ ಶ್ರೀರಾಜಗುಳಿಗ ದೈವದ...

ಅಯ್ಯನಕಟ್ಟೆ; ಶಾಲೆಯ ಬೀಗ ಮುರಿದು ನಗದು, ಟ್ಯಾಬ್  ಕಳ್ಳತನ!

ಅಯ್ಯನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳವಾದ ಘಟನೆ ವರದಿಯಾಗಿದೆ. 5000 ರೂ.ನಗದು ಹಾಗೂ ಟ್ಯಾಬ್ ಅನ್ನು ಶಾಲೆಯ ಬೀಗ ಮುರಿದು ಒಳನುಗ್ಗಿ ಕಳವುಗೈದಿದ್ದರೆ.  ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಪೋಲಿಸ್ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಸಂಪಾಜೆ ; ಗಡಿಕಲ್ಲು ಮುಂಡಡ್ಕ -ಆಲಡ್ಕ ಭಾಗದ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು  ಅವರು ಗಡಿಕಲ್ಲು ಮುಂಡಡ್ಕ -ಆಲಡ್ಕ ಭಾಗದ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್ ರವರು ತೆಂಗಿನ ಕಾಯಿ ಒಡೆದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಸಂಪಾಜೆ ಸೊಸೈಟಿಯ ಮಾಜಿ ವ್ಯವಸ್ಥಾಪಕ...

20 ವರ್ಷಗಳ ಬಳಿಕ ಸಂಭ್ರಮದಿಂದ ನಡೆಯುತ್ತಿರುವ ಪೆರ್ಣೆ ಕಳಿಯಾಟ ಮಹೋತ್ಸವ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ , ಸುಳ್ಯದಿಂದ ಹಸಿರುವಾಣಿ ಜೊತೆಗೆ ತೆರಳಿದ ಟ್ಯಾಬ್ಲೋ ನಿರ್ಮಾತೃ ಶಶಿ ಅಡ್ಕಾರ್ ಭೇಟಿ, ಗೌರವ ಸಮರ್ಪಣೆ:ಮಾ.7 : ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ ಕಾಸರಗೋಡು ಜಿಲ್ಲೆಯ ಕುಂಬ್ಳೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಕಳಿಯಾಟ ಮಹೋತ್ಸವವು ಮಾ.1 ರಂದು ಆರಂಭಗೊಂಡಿದ್ದು, ಮಾ.7 ರವರೆಗೆ ನಡೆಯಲಿದೆ. ಶ್ರೀ...

ಪಯಸ್ವಿನಿ ಜೇಸಿ ಸಂಸ್ಥೆಯಿಂದ ಪವರ್ ಮ್ಯಾನ್ ಸಂಗಮೇಶ್ ಗೆ  ಸೆಲ್ಯೂಟ್ ದೀ ಸೈಲೆಂಟ್ ಸ್ಟಾರ್   ಪುರಸ್ಕಾರ

ಜೆಸಿಐ ಸುಳ್ಯ ಪಯಸ್ವಿನಿ ವಿವಿಧ ವಿಭಾಗದಲ್ಲಿ ಎಲೆ ಮರೆಯ ಕಾಯಿಯಂತೆ  ಇರುವ  ಸಾಧಕರನ್ನು ಗುರುತಿಸಿ ನೀಡುವ  ದೀ ಸೈಲೆಂಟ್ ಸ್ಟಾರ್  ಪುರಸ್ಕಾರವನ್ನು  8 ವರ್ಷ ಗಳಿಂದ   ಕಲ್ಲುಗುಂಡಿ, ಸಂಪಾಜೆಯ ಪರಿಸರದ ಜನತೆಯ ಕರೆಗೆ ಸ್ಪಂದಿಸುತ್ತಾ ನಿಷ್ಟಾವಂತ ಸೇವೆಯನ್ನು ಸಲ್ಲಿಸುತ್ತಿರುವ  ಸುಳ್ಯ ಮೆಸ್ಕಾಂ ಉಪವಿಭಾಗದ ಅರಂತೋಡು ಶಾಖೆ ಯಲ್ಲಿ ಪವರ್   ಮ್ಯಾನ್   ಸಂಗಮೇಶ್ ತಾಸಂಗಾವ  ಇವರಿಗೆ ಸೈಲೆಂಟ್...
Loading posts...

All posts loaded

No more posts

error: Content is protected !!