- Thursday
- August 13th, 2026
ಕರ್ನಾಟಕ ಅರೆಬಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವಕ್ಕೆ ಇಂದು ಮಂಡೆಕೋಲು ಸಾಕ್ಷಿಯಾಗಿದೆ. ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 'ಅಮೃತ ಸಭಾಭವನದಲ್ಲಿ ಅದ್ದೂರಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ಜಾಕೆ ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಿದರು....
ಪಂಚಶ್ರೀ ಯುವಕ ಮಂಡಲ, ಅಕ್ಷತಾ ಯುವತಿ ಮಂಡಲ, ಅಮೃತಾ ಮಹಿಳಾ ಮಂಡಲ ಪಂಬೆತ್ತಾಡಿ ಇವುಗಳ ಜಂಟಿ ಆಶ್ರಯದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ. 16 ಆದಿತ್ಯವಾರದಂದು ಪಂಬೆತ್ತಾಡಿ ಸಭಾಭವನದಲ್ಲಿ ನಾಗಪ್ಪ ಗೌಡ ಪಂಜಬೈಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಯುವಕ ಹಾಗೂ ಯುವತಿ ಮಂಡಲಗಳ ನೂತನ ಪದಾಧಿಕಾರಿಗಳಿಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ...
ಇತ್ತೀಚೆಗೆ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿರುವಾಗ ಕಂಬ ಮುರಿದು ಕೆಳಕ್ಕೆ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮುಪ್ಪೇರ್ಯ ಗ್ರಾಮದ ಕಿಟ್ಟು ದೇವಸ್ಯರವರು ನ.27 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 48 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಶ್ರೀಮತಿ ಜಯಂತಿ,ಪುತ್ರ ಕೀರ್ತಿಪ್ರಸಾದ್ ಪುತ್ರಿ ಲಿಶ್ಮಿತಾ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ. ಇತ್ತೀಚೆಗೆ ಪಂಜ ಶಾಖೆಯ ವ್ಯಾಪ್ತಿಯಲ್ಲಿ...
ದೇವಚಳ್ಳ ಗ್ರಾಮದ ಮಾವಿನಕಟ್ಟೆ ಬಳಿ ಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನ.29 ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕೊಡಗಿನ ಸಿದ್ದಾಪುರ ಮೂಲದ ಚಂದ್ರ 55 ವರ್ಷ ಎಂದು ಗುರುತಿಸಲಾಗಿದ್ದು ಇವರು ಸಂಬಂಧಿಕರ ಮನೆಗೆ ಕೆಲಸಕ್ಕೆಂದು ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ...
*ಶೀಘ್ರದಲ್ಲಿ ಅತ್ಯಾಧುನಿಕ ಜೇನು ಸಂಸ್ಕರಣಾ ಘಟಕ ಸ್ಥಾಪನೆ-ಶ್ರೀ ನಿರಂಜನ್ ಪೋಳ್ಯ* ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಲೋಗೋ ಅನಾವರಣ ಕಾರ್ಯಕ್ರಮ ನ.28ರಂದು ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ಮುಳಿಯ ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿ ನೂತನ ಲೋಗೋ ಅನಾವರಣಗೊಳಿಸಿದರು. ದೇವಸ್ಥಾನದ...
ಸಂಪಾಜೆ ಗ್ರಾಮದ ಕಲ್ಲುಗುಂಡಿ ದಿ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಅವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.26ರಂದು ಸಂಜೆ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ರಾಜಾರಾಮ ಕೀಲಾರು, ಪುತ್ರಿ ಸುಮನ, ಅಳಿಯ ಡಾ. ಶ್ಯಾಮ್ ಭಟ್, ಸೊಸೆ ಮಮತ, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.
ಸುಬ್ರಹ್ಮಣ್ಯ ನ.26: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.27ರಿಂದ ಡಿ.12ರವರೆಗೆ ನಡೆಯಲಿದ್ದು, ನ.26 ರಂದು ಶುದ್ಧ ಏಕಾದಶಿ ದಿನದಂದು ಪೂರ್ವಶಿಷ್ಟ ಸಂಪ್ರದಾಯದಂತೆ ಶ್ರೀ ಕ್ಷೇತ್ರದ ಮುಖ್ಯಪುರೋಹಿತರಾದ ಸೀತಾರಾಮ ಎಡಪಡಿತ್ತಾಯ ಅವರು ಶ್ರೀದೇವಳದ ಗರ್ಭಗುಡಿಗೆ ಪ್ರವೇಶಿಸಿ ಗಂಟೆ 11:20ಕ್ಕೆ ಹೊರಬಂದು ಭಕ್ತರಿಗೆ ಮೂಲಮೃತಿಕ ಪ್ರಸಾದವನ್ನು ವಿತರಿಸಿದರು.ಈ ಸಂದರ್ಭದಲ್ಲಿ ಕುಕ್ಕೆ ಶ್ರೀ...
ಚಿಗುರು ಗೆಳೆಯರ ಬಳಗ ಪಂಬೆತ್ತಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ನ.24 ರಂದು ಪದಗ್ರಹಣ ಕಾರ್ಯಕ್ರಮ ನಡೆಯಿತು.ಗೌರವಾಧ್ಯಕ್ಷರಾಗಿ ಶ್ರೀನಿವಾಸ ಬಿ., ನೂತನ ಅಧ್ಯಕ್ಷರಾಗಿ ಅಶ್ವಥ್ ಬಾಬ್ಲುಬೆಟ್ಟು, ಕಾರ್ಯದರ್ಶಿಯಾಗಿ ರಮೇಶ್ ಮಡಿವಾಳಮಜಲು, ಉಪಾಧ್ಯಕ್ಷರಾಗಿ ಶರಣ್ಯಕುಮಾರ್ ಮಡಪ್ಪಾಡಿ, ಜತೆಕಾರ್ಯದರ್ಶಿ ಮೋಹನ್ ದಾಸ್ ಮಡಿವಾಳ ಮಜಲು, ಖಜಾಂಜಿಯಾಗಿ ತೀರ್ಥೆಶ್ ಮಡಪ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಶೆಟ್ಟಿಗದ್ದೆ, ಕ್ರೀಡಾ...
ಅಂತರಾಷ್ಟ್ರೀಯ ಗುಣ ಮಟ್ಟದ, ಕ್ಯಾಂಸ್ಕೋ ತಯಾರಿಕೆಯ “ತಾರಾಯಿ” ಕೊಬ್ಬರಿ ಎಣ್ಣೆ ಅತೀ ಶೀಘ್ರ ಮಾರುಕಟ್ಟೆಗೆ ಬರಲಿದೆ. ಸಾಮಾಜಿಕ ಕಾರ್ಯಗಳಿಂದ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಯುವ ಉದ್ಯಮಿ ಗುರು ಪ್ರಸಾದ್ ಪಂಜ ಕ್ಯಾಂಪ್ಕೋ ಸಂಸ್ಥೆಯ ಜತೆ ಒಪ್ಪಂದ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಕೊಬ್ಬರಿ ಎಣ್ಣೆಯನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತುಳು ಹೆಸರು,...
ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಜಾಲ್ಸೂರು ಸೆಕ್ಷನ್ ಹಾಗೂ ಮಂಡೆಕೋಲು ಗ್ರಾಮದ ವಿದ್ಯುತ್ ಸಮಸ್ಯೆಗಳ ಬಗ್ಗೆ ಹಾಗೂ ಖಾಯಂ ಪವರ್ ಮ್ಯಾನ್ ಗಳನ್ನು ನೇಮಿಸುವಂತೆ ಆಗ್ರಹಿಸಿ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ವಿದ್ಯುತ್ ಬಳಕೆದಾರರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಮುಂದಿನ ಎರಡು ತಿಂಗಳೊಳಗೆ ಪವರ್ ಮ್ಯಾನ್ ಗಳ ಸಮಸ್ಯೆ ಪರಿಹರಿಸುವುದಾಗಿ ಈ ಸಂದರ್ಭದಲ್ಲಿ ಇ.ಇ ರವರು ಆಶ್ವಾಸನೆ...
Loading posts...
All posts loaded
No more posts
