- Thursday
- August 13th, 2026
ಎಣ್ಮೂರು ಎಸ್. ಜಿ.ಪ್ರಂಡ್ಸ್ ಕ್ಲಬ್ ಇದರ ನೂತನ ಸಮಿತಿ ಇತ್ತೀಚೆಗೆ ರಚನೆಗೊಂಡಿದೆ. ಗೌರವಾಧ್ಯಕ್ಷರಾಗಿ ಸುಜೀತ್ ರೈ ಪಟ್ಟೆ, ಅಧ್ಯಕ್ಷರಾಗಿ ಬಾಲಕೃಷ್ಣ ರೈ, ಉಪಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಕಲ್ಲೇರಿ, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಗೌಡ ಪಟ್ಟೆ, ಕೋಶಾಧಿಕಾರಿಯಾಗಿ ಮುಸ್ತಫಾ ಕಜೆ, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಸೆಲಿತ್, ಜೊತೆ ಕೋಶಾಧಿಕಾರಿಯಾಗಿ ಚಿದಾನಂದ ಕಾಪಡ್ಕ ಆಯ್ಕೆಯಾದರು.
ರಾಜ್ಯ ಕರುನಾಡ ಹಣತೆ ಕವಿಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ (ರಿ) ಚಿತ್ರದುರ್ಗ ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಸ್ಪರ್ಧೆಯಲ್ಲಿ ಅಕ್ಷತಾ ನಾಗನಕಜೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ವಿಜೇತರಿಗೆ ಡಿಸೆಂಬರ್ 9ಕ್ಕೆ ಚಿತ್ರದುರ್ಗದಲ್ಲಿ ನಡೆಯುವ ಜಾನಪದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ದೊರೆಯಲಿದೆ.ಹಾಗೂ "ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್” ಕವಿಗಳಿಂದ ಸ್ಥಳದಲ್ಲಿಯೇ ದಾಖಲೆ...
ಪ್ರತಿಷ್ಠಿತ ವಸ್ತ್ರ ಮಳಿಗೆ ಪುತ್ತೂರಿನ ರಾಧಾ'ಸ್ ಫ್ಯಾಮಿಲಿ ಶೋ ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ'ಸ್ ಉತ್ಸವ'ದಲ್ಲಿ ಗ್ರಾಹಕರು ಅಮೋಘ ಡಿಸ್ಕೊಂಟ್ ಗಳೊಂದಿಗೆ ಜವುಳಿ ಖರೀದಿಸುವುದರೊಂದಿಗೆ ಭರ್ಜರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಯಶಸ್ವಿಯಾಗಿ 8ನೇ ವಾರದ ಡ್ರಾ ಹಾಗೂ ದ್ವಿತೀಯ ತಿಂಗಳ ಟಿವಿಎಸ್ ಜುಪಿಟರ್ ಬಂಪರ್ ಡ್ರಾ ಇಂದು ನಡೆಯಿತು. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಸದಸ್ಯೆ...
ಫೆಂಗಲ್ ಚಂಡಮಾರುತದಿಂದಾಗಿ ದ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ನಾಳೆ(ಡಿ.3) ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು (12ನೇ ತರಗತಿವರೆಗೆ)ಗಳಿಗೆ ಡಿ.3ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟನೆ ಹೊರಡಿಸಿದ್ದಾರೆ.ಭಾರೀ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಡಳಿತವು ಹೊರಡಿಸಿದ ಪ್ರಕಟನೆಯಲ್ಲಿ ಸೋಮವಾರ...
ಫೆಂಗಲ್ ಚಂಡಮಾರುತದಿಂದಾಗಿ ದ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ನಾಳೆ(ಡಿ.3) ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು (12ನೇ ತರಗತಿವರೆಗೆ)ಗಳಿಗೆ ಡಿ.3ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಭಾರೀ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಡಳಿತವು ಹೊರಡಿಸಿದ ಪ್ರಕಟನೆಯಲ್ಲಿ...
ವಿದ್ಯಾಬೋಧಿನೀ ವಿದ್ಯಾಸಂಸ್ಥೆ ಬಾಳಿಲದಲ್ಲಿ ನವೆಂಬರ್ 29 ಮತ್ತು 30ರಂದು ಸಂಯುಕ್ತ ಕ್ರೀಡೋತ್ಸವ ನಡೆಯಿತು. ಗತಕಾಲದಲ್ಲಿ ಉತ್ತಮ ಕ್ರೀಡಾ ಪ್ರತಿಭೆ ರೂಪಿಸಿದ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕ್ರೀಡಾಪಟುಗಳು ರೂಪುಗೊಳ್ಳಲಿ ಎಂದು ಸುಧಾಕರ ರೈ ಬಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ರಾಷ್ಟ್ರೀಯ ಕ್ರೀಡಾಪಟು, ಉದ್ಯಮಿ ಕ್ರೀಡೋತ್ಸವ 2024ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಧಾಕೃಷ್ಣರಾವ್ ಯು...
https://youtu.be/o2QzORnofws?si=SQ6G5LEE6yrhzjoP ಎಲ್ಲಾ ಇಲಾಖೆಯ ಅಧಿಕಾರಿ ಬಂದಿಲ್ಲ ಹಾಗೂ ಗ್ರಾಮಸ್ಥರು ಕಡಿಮೆ ಸಂಖ್ಯೆಯಲ್ಲಿದ್ದಾರೆಂದು ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಕಪ್ಪು ಪಟ್ಟಿ ಪ್ರದರ್ಶಿಸಿ, ಸಭಾತ್ಯಾಗ ಮಾಡಿದ ಘಟನೆ ನ.30 ರಂದು ನಡೆದ ಚೆಂಬು ಗ್ರಾಮಸಭೆಯಲ್ಲಿ ವರದಿಯಾಗಿದೆ. ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಬಾರದೇ ಇದ್ದರೇ ಗ್ರಾಮ ಸಭೆ ಮಾಡುವುದು ಬೇಡ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಮಸ್ಯೆಗಳಿಗೆ...
ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ಶರತ್ ಭಾಗವತ್ ಎಂಬುವವರ ತೋಟಕ್ಕೆ ನ.30 ರಂದು ರಾತ್ರಿ ಆನೆ ದಾಳಿ ನಡೆಸಿದ್ದು, ಅಡಿಕೆ, ತೆಂಗು, ಬಾಳೆ, ಸ್ಪ್ರಿಂಕ್ಲರ್ ಹಾಗೂ ತೋಟದ ರಕ್ಷಣೆಗಾಗಿ ಅಳವಡಿಸಿದ್ದ ಬೇಲಿಯನ್ನು ಹಾಳುಗೆಡವಿದೆ ಎಂದು ತಿಳಿದುಬಂದಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮದ ಪ್ರಯುಕ್ತ ನ.30ರಂದು ವಿದ್ಯಾರ್ಥಿಗಳಿಗೆ ಆಹಾರ ಮೇಳವನ್ನು ಏರ್ಪಡಿಸಲಾಯಿತು. ಆಹಾರ ಮೇಳದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ ' ಸೋಜ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶಶಿಧರ ಎಂ .ಜೆ, ಪೂರ್ವ ಪ್ರಾಥಮಿಕ ಶಾಲಾ...
Loading posts...
All posts loaded
No more posts
