ಸುಬ್ರಹ್ಮಣ್ಯ : ಡಿ.27 ರಂದು ಉಚಿತ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಡಿ.27 ಶುಕ್ರವಾರದಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಚಿತ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾದ ದಾಖಲಾತಿಗಳ ವಿವರಗಳು ಈ ಕೆಳಗಿನಂತಿವೆ.10 ವರ್ಷಗಳ ಹಿಂದಿನ ಆಧಾರ್ ಕಾರ್ಡ್...

ಸುಬ್ರಹ್ಮಣ್ಯದಿಂದ ನಾಪತ್ತೆಯಾದ ವ್ಯಕ್ತಿ ಹರಿಹರ ಪಳ್ಳತ್ತಡ್ಕದಲ್ಲಿ ಪತ್ತೆ

ಅಡಿಕೆ ತೋಟದಲ್ಲಿ ಪತ್ತೆಯಾದ ವ್ಯಕ್ತಿಯನ್ನು ಮರಳಿ ಕುಟುಂಬದೊಂದಿಗೆ ಸೇರಿಸಿದ “ಸ್ಥಳೀಯರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು” ; ಉಚಿತವಾಗಿ ಸೇವೆ ನೀಡಿದ ಗುತ್ತಿಗಾರಿನ “ಅಮರ ಅಂಬುಲೆನ್ಸ್” ಮಾಹಿತಿ ತಿಳಿದ ತಕ್ಷಣ ಸ್ಪಂದಿಸಿದ “ಹರಿಹರ ಪಳ್ಳತ್ತಡ್ಕ ಗ್ರಾ.ಪಂ” ಡಿ.24 ರಂದು ಹರಿಹರ ಪಳ್ಳತ್ತಡ್ಕದ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರ ಸಂಗಮ ಕ್ಷೇತ್ರದಲ್ಲಿ ಪೂಜೆಯ ಸಂದರ್ಭದಲ್ಲಿ ಸ್ಥಳೀಯರ ಅಡಿಕೆ...
Ad Widget

ನಾಳೆ (ಡಿ.24) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

33 ಕಾವು - ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.24  ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್ ಗಳಲ್ಲಿ...

ಡೈಮಂಡ್ ಅಪರ್ಚುನಿಟಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ “ಗ್ಲೋ ಫೆಸ್ಟ್ ” ಉದ್ಘಾಟನೆ

"ಪುತ್ತೂರಿನ ಪ್ರಸಿದ್ಧ ಜಿ ಎಲ್ ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ ಡೈಮಂಡ್ ಅಪರ್ಚುನಿಟಿ " ಗ್ಲೋ ಫೆಸ್ಟ್ " ಡಿ.23 ರಂದು ಉದ್ಘಾಟನೆಗೊಂಡಿತು. ಡಿ 23 ರಿಂದ ಜ 26 ರ ವರೆಗೆ ವಜ್ರ ಆಭರಣಗಳ ಪ್ರದರ್ಶನ ನಡೆಯಲಿದೆ. ಪುತ್ತೂರಿನ ಗಣೇಶ್ ಟ್ರೇಡರ್ಸ್ ನ ಶ್ರೀಮತಿ ಅನುರಾಧ ವಾಮನ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ...

ಸಂಪಾಜೆ : ಸೋಮಶೇಖರ ಕೊಯಿಂಗಾಜೆ ನೇತೃತ್ವದ ಸಹಕಾರಿ ಅಭಿವೃದ್ಧಿ ರಂಗದ 9 ಅಭ್ಯರ್ಥಿಗಳಿಗೆ ಗೆಲುವು – ಸಮನ್ವಯ ಸಹಕಾರಿ ಬಳಗದ ಇಬ್ಬರು ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿಗೆ ಜಯ

ಸೋಮಶೇಖರ ಕೊಯಿಂಗಾಜೆ ನೇತ್ರತ್ವದ ಸಹಕಾರಿ ಅಭಿವೃದ್ಧಿ ರಂಗದ 9 ಮಂದಿ ಅಭ್ಯರ್ಥಿ ಗೆಲುವು ಸಾಧಿಸುವುದರ ಮೂಲಕ  ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತದ ಚುಕ್ಕಾಣಿಯನ್ನು ಮತ್ತೆ ಹಿಡಿದಿದ್ದಾರೆ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಒಟ್ಟು 27 ಮಂದಿ ಅಭ್ಯರ್ಥಿಗಳು ಸ್ಫರ್ಧಿಸಿದ್ದರು. ಒಟ್ಟು 770 ಮತಗಳ ಪೈಕಿ...

ಸುಳ್ಯ : ರೈತ ದಿನಾಚರಣೆ, ರೈತರಿಗೆ ಮಾಹಿತಿ ಹಾಗೂ ಸನ್ಮಾನ

ಕೃಷಿ ಇಲಾಖೆ ಸುಳ್ಯ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು,  ಕೃಷಿಕ ಸಮಾಜ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ರೈತ ದಿನಾಚರಣೆ, ರೈತರಿಗೆ ಮಾಹಿತಿ ಕಾರ್ಯಕ್ರಮ ಹಾಗೂ ಕೆ.ವಿ.ಕೆ ಮಂಗಳೂರುರವರ ವತಿಯಿಂದ ವಿಶೇಷ ಘಟಕ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ಡಿ.23 ರಂದು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು. ಎ.ಪಿ‌.ಎಂ.ಸಿ ಮಾಜಿ ಅಧ್ಯಕ್ಷ ದೇರಣ್ಣ ಗೌಡ,...

ಸೌಮ್ಯ – ರಜನೀಶ್ ಶುಭವಿವಾಹ

ಮರ್ಕಂಜ ಗ್ರಾಮದ ಬಳ್ಳಕಾನ ವಿಶ್ವನಾಥ ಪೂಜಾರಿ ಮತ್ತು ಜಯಂತಿ ದಂಪತಿಗಳ ದ್ವಿತೀಯ ಪುತ್ರಿ ಸೌಮ್ಯ ಅವರ ವಿವಾಹವು ದಿ| ರಾಮಚಂದ್ರ ಪೂಜಾರಿ ಮತ್ತು ಸರಸ್ವತಿ ದಂಪತಿಗಳ ಪುತ್ರ ದೀಕ್ಷಿತ್ (ರಜನೀಶ್) ಅವರ ವಿವಾಹವು ಡಿ. 22 ರಂದು ಕಡಬ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು. ಡಿ. 23ರಂದು ವಧುವಿನ ಮನೆಯಲ್ಲಿ ಅತಿಥಿ ಸತ್ಕಾರ...

ಮಂಡೆಕೋಲು : ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ರಚನೆ – ಗೌರವಾಧ್ಯಕ್ಷರಾಗಿ ಗಂಗಾಧರ ಮಾವಂಜಿ, ಅಧ್ಯಕ್ಷರಾಗಿ ಪ್ರಕಾಶ್ ಕಣೆಮರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ತೋಟಪ್ಪಾಡಿ

   ಶಬರಿಗಿರಿ ಸೇವಾ ಪ್ರತಿಷ್ಠಾನದ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಕಣೆಮರಡ್ಕ ಇದರ ಮೂರನೇ ವರ್ಷದ ಪುನಃ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ಸಮಿತಿ ರಚನೆಗೊಂಡಿದ್ದು ಸಮಿತಿ ಗೌರವಾಧ್ಯಕ್ಷರಾಗಿ ಗಂಗಾಧರ ಮಾವಂಜಿ, ಅಧ್ಯಕ್ಷರಾಗಿ ಪ್ರಕಾಶ್ ಕಣೆಮರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ತೋಟಪ್ಪಾಡಿ, ಕೋಶಾಧಿಕಾರಿಗಳಾಗಿ ರವಿ ಕಣೆಮರಡ್ಕರವರನ್ನು...

ಡಿ.26 ರಿಂದ ದೇವ – ಕಂದ್ರಪ್ಪಾಡಿ ರಸ್ತೆ ಕಾಮಗಾರಿ ಆರಂಭ : ಬದಲಿ ರಸ್ತೆ ಬಳಸಲು ಇಲಾಖೆ ಸೂಚನೆ

ದೇವ ಕಂದ್ರಪ್ಪಾಡಿಯಲ್ಲಿ ರಸ್ತೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಡಿ.26 ರಿಂದ ನಡೆಯಲಿರುವುದರಿಂದ ರಸ್ತೆ ಬಂದ್ ಆಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸಿ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜೇಸೀಐ ವಲಯ ಅಧಿಕಾರಿಗಳಾಗಿ ಜೇಸಿ ಚಂದ್ರಶೇಖರ್ ಕನಕಮಜಲು ಮತ್ತು ಜೇಸಿ ಯು.ಪಿ ಬಶೀರ್ ಬೆಳ್ಳಾರೆ ಆಯ್ಕೆ

ಜೆಸಿಐ ಭಾರತದ ವಲಯ 15ರ ವಲಯ ಅಧಿಕಾರಿಗಳಾಗಿ ಜೆಸಿಐ ಸುಳ್ಯ ಸಿಟಿಯ ಪೂರ್ವ ಅಧ್ಯಕ್ಷರುಗಳಾದ ಜೇಸಿ ಚಂದ್ರಶೇಖರ್ ಕನಕಮಜಲು ಮತ್ತು ಜೇಸಿ ಯು.ಪಿ ಬಶೀರ್ ಬೆಳ್ಳಾರೆ ಆಯ್ಕೆ ಆಗಿರುತ್ತಾರೆ. ಡಿಸೆಂಬರ್ 23ರಂದು ಉಡುಪಿಯ ತೆಕ್ಕಾರಿನಲ್ಲಿ ನಡೆಯುವ ವಲಯ ಪದ ಪ್ರಧಾನ ಸಮಾರಂಭದಲ್ಲಿ ವಲಯ ಅಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Loading posts...

All posts loaded

No more posts

error: Content is protected !!