ಪುರೋಹಿತ ನಾಗರಾಜ ಭಟ್ಟರಿಗೆ ಹವ್ಯಕ ವೇದರತ್ನ ಪ್ರಶಸ್ತಿ

ಸುಳ್ಯದ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಂಚಾಕರಾದ ಪುರೋಹಿತ ನಾಗರಾಜ ಭಟ್ಟರಿಗೆ ಹವ್ಯಕ ವೇದರತ್ನ ಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪದವಿ ಪ್ರದಾನ

ನಿಷ್ಠೆ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು ಸಾಧ್ಯ ಡಾ. ಹರೀಶ್ ಎಂ.ಆರ್. ನಿರ್ದಿಷ್ಟ ಗುರಿಯೆಡೆಗೆ ಸಾಗಿದರೆ ಯಶಸ್ಸು ಸಾಧ್ಯ : ಡಾ. ಕೆ.ವಿ. ಚಿದಾನಂದ ಇಂದಿನ ಕಾಲದಲ್ಲಿ ಹಲವು ಅವಕಾಶಗಳಿವೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಶ್ರಮವಹಿಸಿ ಮುನ್ನಡಿಯಿಟ್ಟರೆ ಸಫಲತೆ ಪಡೆಯಲು ಸಾಧ್ಯ. ಒಂದು ಕಾಲದಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮೀಣ ಪ್ರದೇಶವಾದ ಸುಳ್ಯದಲ್ಲಿ ಎಲ್ಲರಿಗೂ ಆರೋಗ್ಯ...
Ad Widget

ರಥಬೀದಿ ರಸ್ತೆಯ ಧೂಳಿಗೆ ಮುಕ್ತಿ – ಇಂಟರ್ ಲಾಕ್ ಅಳವಡಿಕೆ ಕಾರ್ಯ ಆರಂಭ

ಸುಳ್ಯ : ಸುಳ್ಯ ಕುಡಿಯುವ ನೀರಿನ ಯೋಜನೆ ಪೈಪ್ ಲೈನ್ ಕಾಮಗಾರಿಯ ಧೂಳಿನಿಂದ ಅಡಕತ್ತರಿಗೆ ಸಿಲುಕಿದ ನ.ಪಂ , ಧೂಳುಮಯವಾದ ರಥಬೀದಿ ವ್ಯಾಪರಸ್ಥರಿಂದ ರಸ್ತೆ ತಡೆಗೆ ಚಿಂತನೆ ? ಎಂಬ ತಲೆಬರಹದೊಂದಿಗೆ ಅಮರ ಸುದ್ದಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ನ.ಪಂ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಇದೀಗ ರಸ್ತೆಯ ಧೂಳಿನ ಸಮಸ್ಯೆಗೆ ಪರಿಹಾರ...

ಸಿ.ಟಿ. ರವಿ ಅವರನ್ನು ಬೆಂಬಲಿಸುವವರು ಕೂಡಾ ಮಹಿಳೆಯರಿಗೆ ಗೌರವ ಕೊಡುವುದಿಲ್ಲವೆಂದೇ ಅರ್ಥ – ಎಂ ವೆಂಕಪ್ಪ ಗೌಡ

ಸಿ.ಟಿ.ರವಿಯವರ ಹೇಳಿಕೆ ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ ಅಲ್ಲದೇ ಬಿಜೆಪಿ ಮಹಿಳಾ ಮೋರ್ಚಾ ಯಾಕೆ ಮೌನವಹಿಸಿದೆ - ಗೀತಾ ಕೋಲ್ಚಾರ್. ಎಂ.ಎಲ್.ಸಿ. ಸಿ.ಟಿ. ರವಿಯವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ರಿಗೆ ಮಾಡಿರುವ ಪದ ಬಳಕೆಯನ್ನು ಸುಳ್ಯ ಕಾಂಗ್ರೆಸ್‌ ಖಂಡಿಸುತ್ತದೆ. ಮತ್ತು ರವಿ ಅವರನ್ನು ಬೆಂಬಲಿಸುವವರು ಕೂಡಾ ಮಹಿಳೆಯರಿಗೆ ಗೌರವ ಕೊಡುವುದಿಲ್ಲವೆಂದೇ ಅರ್ಥ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್...

ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುತ್ತಿರುವ ಗ್ರಾ.ಪಂ. ಗ್ರಂಥಾಲಯಗಳು : ಪ್ರತೀ ಸಂಜೆ ಮಕ್ಕಳಿಗೆ ಆಟದೊಂದಿಗೆ ಓದಿಗೆ ಪ್ರಾಮುಖ್ಯತೆ

ಅಮರ ಸುದ್ದಿ ಸ್ಪೆಷಲ್ ರಿಪೋರ್ಟ್ : ✍️ಉಲ್ಲಾಸ್ ಕಜ್ಜೋಡಿಪುಸ್ತಕಗಳನ್ನು ಓದುವುದು ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹಾಗೂ ನಮ್ಮನ್ನು ನಾವು ಮತ್ತಷ್ಟು ಪ್ರಬುದ್ಧರನ್ನಾಗಿಸಿಕೊಳ್ಳಲು ಇರುವಂತಹ ಒಂದು ಅತ್ಯದ್ಭುತವಾದ ಮಾರ್ಗ. ಆದರೆ ಇಂದಿನ ಈ ಯಾಂತ್ರೀಕೃತ ಜಗತ್ತಿನಲ್ಲಿ ಸ್ಮಾರ್ಟ್ ಫೋನ್, ಕಂಪ್ಯೂಟರ್ ಮುಂತಾದವುಗಳು ನಮ್ಮ ಮನೆ-ಮನಗಳಿಗೆ ಲಗ್ಗೆಯಿಟ್ಟು ನಾವಿಂದು ಪುಸ್ತಕಗಳನ್ನು ಓದುವಂತಹ ಆಸಕ್ತಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪುತ್ತಿದ್ದೇವೆ....

ಟಿಎ.ಪಿ.ಸಿ.ಎಂ.ಎಸ್. ಗೆ ಬಾಕಿ ಪಾವತಿ ಹಾಗೂ ರೇಶನ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಆಹಾರ ಸಚಿವರ ಭೇಟಿ ಮಾಡಿದ ನಿತ್ಯಾನಂದ ಮುಂಡೋಡಿ ನೇತೃತ್ವದ ನಿಯೋಗ : ಭರವಸೆ

ಟಿಎಪಿಸಿಎಂಎಸ್ ಗಳಿಗೆ ಸರಕಾರದಿಂದ ಬರಬೇಕಾದ ಬಾಕಿ ಪಾವತಿಸುವಂತೆ ಹಾಗೂ ರೇಷನ್ ಕಾರ್ಡ್ ಸಮಸ್ಯೆ ಪರಿಹರಿಸುವಂತೆ ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್‌. ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರ ನೇತೃತ್ವದಲ್ಲಿ ಆಹಾರ ಸಚಿವ ಮುನಿಯಪ್ಪರ ಬಳಿ ನಿಯೋಗ ತೆರಳಿ, ಮನವಿ ಮಾಡಲಾಗಿದೆ. ಟಿ.ಎ.ಪಿ.ಸಿ.ಎಂ.ಎಸ್. ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ಕಾರ್ಯದರ್ಶಿ ಜಯರಾಮ ದೇರಪ್ಪಜ್ಜನಮನೆ, ನಿರ್ದೇಶಕ ಎಸ್.ಸಂಶುದ್ದೀನ್ ಮೊದಲಾದವರಿದ್ದರು. ಪಡಿತರ ವ್ಯವಸ್ಥೆ ಸರಿಪಡಿಸಬೇಕು ಹಾಗೂ ಹೊಸ ರೇಶನ್...

ಪೇರಾಲು ಬಜಪ್ಪಿಲ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ – ಹಸಿರುವಾಣಿ‌ ಸಮರ್ಪಣೆ – ಇಂದು ಆದಿಚುಂಚನಗಿರಿ ಶಾಖಾಮಠ ಧರ್ಮಪಾಲನಾಥ ಸ್ವಾಮೀಜಿಗಳಿಂದ ಆಶೀರ್ವಚನ – ನಾಳೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪೇರಾಲು ಬಜಪ್ಪಿಲ ಶ್ರೀ ಇರುವೆರ್ ಉಳ್ಳಾಕುಲು ಧೂಮಾವತಿ ಪರಿವಾರ ದೈವಸ್ಥಾನಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ದೊರೆತಿದ್ದು, ಇಂದು ಬೆಳಗ್ಗೆ ಹಸಿರುವಾಣಿ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಸಮರ್ಪಣೆಗೊಂಡಿತು. ಪೇರಾಲು ಶ್ರೀರಾಮ ಭಜನಾ ಮಂದಿರದ ಬಳಿಯಿಂದ ಆರಂಭಗೊಂಡ ಹಸಿರುವಾಣಿ ಮೆರವಣಿಗೆ ದೈವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹೇಮಂತ್ ಕುಮಾರ್ ಗೌಡರಮನೆ ಚಾಲನೆ ನೀಡಿದರು. ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ,...

ಡಿ.ಎಂ ಶಾರಿಖ್ ಗೆ ಮಾತೃ ವಿಯೋಗ

85 ವರ್ಷದ ಮೆಹರುನ್ನೀಸ್ ರವರು ಡಿ.14 ರಂದು ಶೇರೂರಿನ ಅವರ ಪುತ್ರಿ ಶೇಗುಪ್ತಾ ಪರ್ವಿನ್ ರವರ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರ ಪುತ್ರ ಡಿ.ಎಂ ಶಾರಿಖ್ ಹಾಗೂ ಶಾಯಿಸ್ತಾ ಪರ್ವಿನ್, ಶೆಗುಪ್ತಾ ಪರ್ವಿನ್, ಶೆಹ್ಲಾ ಖಾತೂನ್, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ನಮಾಜ್-ಏ-ಜನಾಝು ವನ್ನು ವಲ್ಕಿಯ ಜುಮಾ ಮಸೀದಿಯ ಇಮಾಮ್ ದಾವಲ್ ಜಿ ಮಹಮ್ಮದ್ ಅಲಿಯವರ ನೇತೃತ್ವದಲ್ಲಿ ನಿರ್ವಹಿಸಲಾಯಿತು.

ಪೈಲಾರು: ‘ನಮ್ಮ ಊರು ನಮ್ಮ ರಸ್ತೆ’ ಶ್ರಮದಾನ ಕಾರ್ಯಕ್ರಮ

ಮಿತ್ರವೃಂದ ಪೈಲಾರು(ರಿ.), ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.), ಶೌರ್ಯ ಯುವತಿ ಮಂಡಲ(ರಿ.)ಪೈಲಾರು ಇದರ ಜಂಟಿ ಆಶ್ರಯದಲ್ಲಿ ಪೈಲಾರು ಸಮಸ್ತ ಜನರ ಸಹಯೋಗದೊಂದಿಗೆ "ನಮ್ಮ ಊರು ನಮ್ಮ ರಸ್ತೆ"ಶ್ರಮದಾನ ಕಾರ್ಯಕ್ರಮ ಡಿ.15ರಂದು ನಡೆಯಿತು. ಪೈಲಾರಿನಿಂದ ಕುಕ್ಕುಜಡ್ಕ ತನಕ ರಸ್ತೆಯ ಬದಿ ಇರುವ ಗಿಡ ಮತ್ತು ಪೊದೆಗಳನ್ನು ತೆಗೆದು ರಸ್ತೆಯನ್ನು ಸ್ವಚ್ಛಗೊಳಿಸುವ ಮತ್ತು ರಸ್ತೆಯ ಗುಂಡಿಗಳಿಗೆ ಕಲ್ಲು ಹಾಕುವ ಮೂಲಕ...

ಕೊಲ್ಲಮೊಗ್ರ : ನವೀಕರಣಗೊಳ್ಳುತ್ತಿರುವ ಮಯೂರ ಕಲಾ ಮಂದಿರ – ಡಿ.25, 26ರಂದು ಅಯ್ಯಪ್ಪ ಸ್ವಾಮಿಯ ರಜತ ರೇಖಾ ಚಿತ್ರ ಸ್ಥಾಪನೆ

ಕೊಲ್ಲಮೊಗ್ರದ ಅಯ್ಯಪ್ಪ ಸ್ವಾಮಿಯ ರಜತ ರೇಖಾ ಚಿತ್ರದ ಸ್ಥಾಪನೆ ಹಾಗೂ ಮಂದಿರದ ಸಭಾಭವನ "ಶ್ರೀ ಮಯೂರ ಕಲಾಮಂದಿರ" ದ ನವೀಕಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಸುಮಾರು 35 ಲಕ್ಷ ರೂ ವೆಚ್ಚದ ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ. ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕ್ಷೇತ್ರ ಅಭಿವೃದ್ಧಿಯಾಗಲಿದೆ. ಹಾಗೂ ಊರವರ ಕಾರ್ಯಕ್ರಮಗಳಿಗೆ ಕನಿಷ್ಠ ದರದಲ್ಲಿ ಹಾಲ್...
Loading posts...

All posts loaded

No more posts

error: Content is protected !!