ದೇವರಕೊಲ್ಲಿ : ಟಿಟಿ ವಾಹನದ ಮೇಲೆ ಮಗುಚಿ ಬಿದ್ದ ಲಾರಿ – ಹಲವರಿಗೆ ಗಂಭೀರ ಗಾಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಅಬ್ಬಿಕೊಲ್ಲಿ ಎಂಬಲ್ಲಿ ಟೆಂಪೋ ಟ್ರಾವೆಲ್ಲರ್ ಮೇಲೆ ಲಾರಿ ಮಗುಚಿ ಬಿದ್ದ ಘಟನೆ ಇಂದು ಸಂಜೆ ವರದಿಯಾಗಿದೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ  ಟಿಟಿ ವಾಹನದೊಳಗೆ ಸಿಲುಕಿದ್ದವರನ್ನು ಹೊರತೆಗೆಯಲಾಗಿದೆ. , ಮೂರು ಅಂಬ್ಯುಲೆನ್ಸ್ ಗಳಲ್ಲಿ ಗಾಯಾಳುಗಳನ್ನು ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ..‌ ಟಿಟಿಯಲ್ಲಿದ್ಸ ಪ್ರಯಾಣಿಕರು ವಾಹನ ನಿಲ್ಲಿಸಿ...

ಇಂದಿನ(ಆಗಸ್ಟ್ 26) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್ ಹಾಗೂ ಕೊಬ್ಬರಿ ಧಾರಣೆ ಸಂಪೂರ್ಣ ಸ್ಥಿರ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 26 ಆಗಸ್ಟ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 26) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
Ad Widget

ನಾಳೆ(ಆ.27) ಬೆಳ್ಳಾರೆ ವಿದ್ಯುತ್ ಉಪಕೇಂದ್ರದ ಈ ಮಾರ್ಗಗಳಲ್ಲಿ ವಿದ್ಯುತ್ ನಿಲುಗಡೆ

33/11ಕೆವಿ ಬೆಳ್ಳಾರೆ ವಿದ್ಯುತ್ ಉಪಕೇಂದ್ರದಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ(ಆ.27) ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 5:30ರವರೆಗೆ 33ಕೆವಿ ಮಾಡಾವು-ಬೆಳ್ಳಾರೆ, 33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆವಿ ಬೆಳ್ಳಾರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮಂ.ವಿ.ಸ.ಕಂ ಪುತ್ತೂರು...

ಅಮ್ಮ ಚಿಣ್ಣರ ಮನೆಯಲ್ಲಿ ಪೋಷಕ ಸಮಿತಿ ರಚನೆ

ಸುಳ್ಯ: ಅಮ್ಮ ಚಿಣ್ಣರ ಮನೆಯ 2026-27ನೇ ಸಾಲಿನ ಪೋಷಕ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಉದಯ್ ಕುಮಾರ್ ಕಂದಡ್ಕ ಆಯ್ಕೆಯಾದರು. ಉಪಾಧ್ಯಕ್ಷರಾಗಿ ತಾರಾನಾಥ್ ಹಾಗೂ ಶ್ರೀಮತಿ ನಿಶ್ಮಿತಾ ಧನಂಜಯ್ ಆಯ್ಕೆಯಾದರು. ಸದಸ್ಯರಾಗಿ ರಮೇಶ್, ಶ್ರೀಮತಿ ಭವ್ಯ ಚೇತನ್, ಶ್ರೀಮತಿ ಶಶಿಕಲಾ ರಂಜಿತ್ ಹಾಗೂ ಶ್ರೀಮತಿ ಅಕ್ಷತಾ ಸತೀಶ್ ಆಯ್ಕೆಯಾದರು. ಸಭೆಯಲ್ಲಿ ಅಮ್ಮ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ...

ಕೋಲ್ಚಾರು : ಶ್ರೀ ಭಗವತಿ ಸೇವಾ ಸಮಿತಿಯ ವತಿಯಿಂದ 24ನೇ ವರ್ಷದ ಓಣಂ ಆಚರಣೆ

ಕೋಲ್ಚಾರು ಶ್ರೀ ಭಗವತಿ ಸೇವಾ ಸಮಿತಿಯ ವತಿಯಿಂದ ಆ.23 ರಂದು 24ನೇ ವರ್ಷದ ಓಣಂ ಆಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ತಿರುವಾದಿರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಹಿಳೆಯರು ಹಾಗೂ ಮಕ್ಕಳಿಗಾಗಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆಚರಣೆಯ ಪ್ರಮುಖ ಆಕರ್ಷಣೆಯಾಗಿದ್ದ ಓಣಂ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಆಯೋಜಿಸಲಾಗಿದ್ದ...

ಹರಿಹರ ಪಳ್ಳತ್ತಡ್ಕ : ಆ.28ರಂದು “ಶ್ರೀ ವರಮಹಾಲಕ್ಷ್ಮೀ ಪೂಜೆ”

ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹರಿಹರ, ಬಾಳುಗೋಡು, ಐನೆಕಿದು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಆ.28 ಶುಕ್ರವಾರದಂದು ಪೂರ್ವಾಹ್ನ 8:30ಕ್ಕೆ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ “ಶ್ರೀ ವರಮಹಾಲಕ್ಷ್ಮೀ ಪೂಜೆ” ನಡೆಯಲಿದ್ದು, ಆ ಪ್ರಯುಕ್ತ ಭಕ್ತಾದಿಗಳು ಪೂಜಾ ವಿಧಿಯಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.

ಸುಳ್ಯ : ಸ್ವಸ್ತಿಕ್ ಕಂಪ್ಯೂಟರ್ಸ್‌ನ ನೂತನ ಶೋರೂಮ್ ಶುಭಾರಂಭ

ಸುಳ್ಯ : ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಸೇವೆ ಹಾಗೂ ವಿವಿಧ ಪರಿಕರಗಳಿಗಾಗಿ ಗ್ರಾಹಕರ ವಿಶ್ವಾಸ ಗಳಿಸಿರುವ ಸ್ವಸ್ತಿಕ್ ಕಂಪ್ಯೂಟರ್ಸ್‌ನ ನೂತನ ಹಾಗೂ ವಿಸ್ತೃತ ಮಳಿಗೆ ಮತ್ತು ಶೋರೂಂ ಆ.26ರಂದು ಶುಭಾರಂಭಗೊಂಡಿತು. ಕಾಸರಗೋಡಿನ ನ್ಯಾಯವಾದಿ ಶ್ರೀಕಾಂತ್ ತ್ರಿಕನ್ನಾಡ್ ನೂತನ ಶೋರೂಂ ಉದ್ಘಾಟಿಸಿ ದೀಪ ಪ್ರಜ್ವಲಿಸಿದರು. ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೃಪಾಶಂಕರ್ ತುದಿಯಡ್ಕ, ಉದ್ಯಮಿ ಕೃಷ್ಣ...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:26-08-2026 ಬುಧವಾರ*01,🐏ಮೇಷರಾಶಿ🐏*📃,ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಸಿಗುವುದು,ಗಮನಿಸಿ:-ವ್ಯವಹಾರದಲ್ಲಿ ಪಾಲುದಾರರು ಹಾಗು ಸಹೋದ್ಯೋಗಿಗಳ ಕಡೆ ಗಮನವಿರಲಿ,ಪರಿಹಾರ:-ಶ್ರೀಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ,*02,🐂ವೃಷಭರಾಶಿ🐂*📃,ಇಂದು ನಿಮಗೆ ಆರ್ಥಿಕವಾಗಿ ಉತ್ತಮ ದಿನವಾಗಲಿದೆ. ಕೆಲವು ಸ್ಥಗಿತಗೊಂಡ...

ಸುಳ್ಯದಲ್ಲಿ ಸಂಭ್ರಮದ ಮಿಲಾದುನ್ನೆಬಿ ಆಚರಣೆ – “ಶಾಂತಿಯ ಸಂದೇಶ, ಮನುಕುಲದ ಸೇವೆಯ ಪ್ರವಾದಿಯವರ ಜೀವನ ಇಂದಿಗೂ ಪ್ರಸ್ತುತ” : ಅಹ್ಸನಿ

ಪ್ರವಾದಿ ಮುಹಮ್ಮದ್ ಮುಸ್ತಫ(ಸ.ಅ) ರವರ ಜನ್ಮದಿನಾಚರಣೆಯ ಅಂಗವಾಗಿ ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್, ಮುನವ್ವಿರುಲ್ ಇಸ್ಲಾಂ ಮದ್ರಸ ಇದರ ಆಶ್ರಯ ದಲ್ಲಿ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರಗಿತು, ಮೀಲಾದ್ ಕಾಲ್ನಡಿಗೆ ಸ್ವಲಾತ್ ಜಾಥಾ ವನ್ನು ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್ ಜಾಥಾ ನಾಯಕ ಆಶಿಕ್ ರವರಿಗೆ ಧ್ವಜ...

ಬಳ್ಪದಲ್ಲಿ ಭಾರಿ ಮಳೆಗೆ ಮಣ್ಣು ಕುಸಿತ ; ಮನೆಗೆ ಹಾನಿ

 ಬಳ್ಪ ಗ್ರಾಮದಲ್ಲಿ ಆ.25 ರಂದು ಸುರಿದ ಭಾರಿ ಮಳೆಗೆ ಮಣ್ಣು ಕುಸಿದು ಮನೆಗೆ ಹಾನಿಯಾಗಿರುವ ಘಟನೆ ನಡೆದಿದೆ. ಬಳ್ಪ ಗ್ರಾಮದ ಹರೀಶ್ ಕಾರ್ಜ ಅವರ ಮನೆಯ ಹಿಂಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಮನೆಯ ಬಾಗಿಲಿಗೆ ಹಾನಿಯಾಗಿದೆ. ಮಣ್ಣು ಕುಸಿತದಿಂದ ಮನೆಯವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ.25 ರಂದು ಬೆಳಗ್ಗಿನಿಂದಲೇ ಬಳ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ...
Loading posts...

All posts loaded

No more posts

error: Content is protected !!