ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರನ್ನು ಭೇಟಿಯಾಗಿ ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ಕುಕ್ಕೆ ಸುಬ್ರಹ್ಮಣ್ಯ ಆರೋಗ್ಯಕೇಂದ್ರ ಮತ್ತು ಬೆಳ್ಳಾರೆ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ 24×7 ಸೇವೆಯನ್ನು ಕಲ್ಪಿಸುವಂತೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಅವರಿಗೆ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸಿದ ಸಚಿವರು ಈ ಎರಡು ಆಸ್ಪತ್ರೆಗಳಲ್ಲಿ ಪರಿಶೀಲಿಸಿ ಅಗತ್ಯ...

ಏನೆಕಲ್ಲು: ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ

ಸುಬ್ರಹ್ಮಣ್ಯ ಆಗಸ್ಟ್ 25 : ಸುಬ್ರಹ್ಮಣ್ಯ ಪಕ್ಕದ ಏನೆಕಲ್ಲು ಪರಿಸರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಏನೆಕಲ್ಲು ಸಂಪರ್ಕಿಸುವ ಮಧುವನ- ಕಲ್ಲಾಜೆ ಸೇತುವೆ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿದು ಅಲ್ಲಿಗೆ ಧಾವಿಸಿದ ಸುಬ್ರಮಣ್ಯ ಗ್ರಾಮ ಪಂಚಾಯತಿ ಸದಸ್ಯ ಮೋಹನ ಕೋಟಿ ಗೌಡನ ಮನೆ ಸ್ಥಳೀಯ ನಿವಾಸಿ ಶ್ರೀ ಕೃಷ್ಣ ಕೋಟೆ ಹಾಗೂ ಶೋಭರಾಜ್...
Ad Widget

ಲೇಖನ : ಚಿಂತೆಗಳ ಸುಳಿಯಲ್ಲಿ…

ಬದುಕು ಅಂದಮೇಲೆ ಅಲ್ಲಿ ಚಿಂತೆಗಳು ಇದ್ದೇ ಇರುತ್ತವೆ. ಬದುಕಿನಲ್ಲಿ ಚಿಂತೆಗಳು ಇಲ್ಲದೇ ಇರುವ ವ್ಯಕ್ತಿಗಳು ಈ ಜಗತ್ತಿನಲ್ಲಿ ಯಾರೊಬ್ಬರೂ ಇರಲಿಕ್ಕಿಲ್ಲ. ಪ್ರತಿಯೊಬ್ಬರಿಗೂ ಕೂಡ ಅವರವರ ಬದುಕಿನಲ್ಲಿ ಹಲವಾರು ಚಿಂತೆಗಳು ಇದ್ದೇ ಇರುತ್ತವೆ. ಒಂದು ವೇಳೆ ಚಿಂತೆಗಳೇ ಇಲ್ಲದಿರುವ ವ್ಯಕ್ತಿಗಳು ಯಾರಾದರೂ ಇದ್ದಾರೆ ಎಂದಾದರೆ ಅವರು “ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ರೆ” ಎನ್ನುವ ಗಾದೆ ಮಾತಿನಂತೆ ದಿನಪೂರ್ತಿ...

ಜಟ್ಟಿಪಳ್ಳ : ಮಾನಸ ಮಹಿಳಾ ಮಂಡಳದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಾನಸ ಮಹಿಳಾ ಮಂಡಳ (ರಿ) ಜಟ್ಟಿಪಳ್ಳ, ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜಟ್ಟಿಪಳ್ಳದ ಯುವಸದನ ದಲ್ಲಿ ಜರುಗಿತು... ಸುಳ್ಯದ ರೋಟರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯಿನಿ ಶ್ರೀಮತಿ ಜ್ಯೋತ್ನಾ ದಿನೇಶ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿ ಬೆಳ್ಳಿಹಬ್ಬ ಆಚರಿಸಿ ಈಗಲೂ ಉತ್ತಮ ಕಾರ್ಯಚಟುವಟಿಕೆ ಗಳನ್ನು ನಡೆಸುತ್ತಿರುವ ಮಹಿಳಾ ಮಂಡಲಕ್ಕೆ...

ದುಗ್ಗಲಡ್ಕ : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಲ್ಸೂರು ವಲಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಜಾಲ್ಸೂರು ವಲಯದ ವತಿಯಿಂದ ದುಗ್ಗಲಡ್ಕದ ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು.   ಕಾರ್ಯಕ್ರಮದ ಉದ್ಘಾಟನೆಯನ್ನು ಜಾಲ್ಸೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಭಾಸ್ಕರ್ ಅಡ್ಕಾರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾದ ಚಂದ್ರಶೇಖರ್ ಮೊಂಟಡ್ಕ ಮಾತನಾಡಿ...

ಇಂದಿನ(ಆಗಸ್ಟ್ 25) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ದರದಲ್ಲಿ ಕೊಂಚ ಚೇತರಿಕೆ ; ಅಡಿಕೆ, ಕಾಳುಮೆಣಸು ಹಾಗೂ ಕೊಬ್ಬರಿ ಧಾರಣೆ ಸ್ಥಿರ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 25 ಆಗಸ್ಟ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 25) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಸುಬ್ರಹ್ಮಣ್ಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ – “ಸ್ವಾಸ್ಥ್ಯ ಸಮಾಜದಿಂದ ಶಸಕ್ತ ರಾಷ್ಟ್ರ ನಿರ್ಮಾಣ” : ಭಾನುಪ್ರಕಾಶ್ ಪೆರುಮುಂಡ

ಸುಬ್ರಹ್ಮಣ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ(ರಿ.) ಸುಳ್ಯ ತಾಲೂಕು ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಆ. 24ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು....

ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಗುಂಡೆಸೆತ ಸ್ಪರ್ಧೆಯಲ್ಲಿ ಕೊಲ್ಲಮೊಗ್ರದ ಮಿಥುನ್ ಬಳ್ಳಡ್ಕ ಪ್ರಥಮ

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ(ರಿ.) ಬೆಂಗಳೂರು ಇದರ ಆಶ್ರಯದಲ್ಲಿ ಆ.23ರಂದು ಬೆಂಗಳೂರಿನ ಜಾಲಹಳ್ಳಿ ಹೆಚ್.ಎಂ.ಟಿ ಗ್ರೌಂಡ್ ನಲ್ಲಿ ನಡೆದ 30 ವರ್ಷದೊಳಗಿನ ವಯೋಮಿತಿ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಮಿಥುನ್ ಬಳ್ಳಡ್ಕ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ನೇಮಿಚಂದ್ರ ಬಳ್ಳಡ್ಕ ಹಾಗೂ ಪ್ರೇಮಾ ದಂಪತಿಯ ಪುತ್ರ. (ವರದಿ :...

ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಗುಂಡೆಸೆತ ಸ್ಪರ್ಧೆಯಲ್ಲಿ ಹರಿಹರ ಪಳ್ಳತ್ತಡ್ಕದ ಸಂದೀಪ್ ಕೇವಳ ಪ್ರಥಮ

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ(ರಿ.) ಬೆಂಗಳೂರು ಇದರ ಆಶ್ರಯದಲ್ಲಿ ಆ.23ರಂದು ಬೆಂಗಳೂರಿನ ಜಾಲಹಳ್ಳಿ ಹೆಚ್.ಎಂ.ಟಿ ಗ್ರೌಂಡ್ ನಲ್ಲಿ ನಡೆದ 30 ವರ್ಷದ ಮೇಲಿನ ವಯೋಮಿತಿ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಸಂದೀಪ್ ಕೇವಳ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ದಿ. ದಶರಥ ಗೌಡ ಕೇವಳ ಹಾಗೂ ಮೀನಾಕ್ಷಿ...

ಅನಿಲ್ ಅಂಬೆಕಲ್ಲು ಹೃದಯಾಘಾತದಿಂದ ನಿಧನ

ಸುಳ್ಯ : ಮರ್ಕಂಜದ ಗ್ರಾಮದ ದೊಡ್ಡಿತ್ಲು ನಿವಾಸಿ ಅನಿಲ್ ಅಂಬೆಕಲ್ಲು ಹಿಂದಿನ ರಾತ್ರಿಯಿಂದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು(ಆ.25)ಮುಂಜಾನೆ ಹೃದಯಾಘಾತದಿಂದ ನಿಧನರಾದರೆಂದು ತಿಳಿದುಬಂದಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರಮ್ಯ, ಪುತ್ರರಾದ ಮೋಕ್ಷಿತ್ ಹಾಗೂ ಕಿಶನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!