- Sunday
- September 13th, 2026
ಸುಳ್ಯ: ತಾಲೂಕು ಧ್ವನಿ ವರ್ಧಕ ಮತ್ತು ಶಾಮಿಯಾನ ಮಾಲಕರ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಪಂದ್ಯಾಟ ಅ.3 ಮತ್ತು 4ರಂದು ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಸುಳ್ಯ ಕಬಡ್ಡಿ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಸಂಘದ ಅಧ್ಯಕ್ಷ ಸಂಶುದ್ಧಿನ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಆ.27ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಸೆ.13 ರಿಂದ 15ರವರೆಗೆ ನಡೆಯಲಿರುವ “ಶ್ರೀ ಗಣೇಶೋತ್ಸವ”ದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ.25ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್, ಮಾಜಿ ಆಡಳಿತ ಮೊಕ್ತೇಸರರಾದ ಡಾ| ಚಂದ್ರಶೇಖರ ಕಿರಿಭಾಗ, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ತಿಂಗಳ ಸಾಮಾನ್ಯ ಸಭೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವು ಆ.25 ಮಂಗಳವಾರದಂದು ಕುಮಾರಧಾರದ ರಿವರ್ ವ್ಯಾಲ್ಯು ಹೋಂ-ಸ್ಟೇಯಲ್ಲಿ ನಡೆದಿದ್ದು 98 ವರ್ಷ ಪ್ರಾಯದ ಹಿರಿಯರಾದ ಮೇದಪ್ಪ ಗೌಡ ಜಾಡಿಮನೆ ಇವರನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು. ಕ್ಲಬ್ ನ ಅಧ್ಯಕ್ಷರಾದ ಲ.ಸತೀಶ್ ಕೂಜುಗೋಡು, IPP ಲ.ವಿಮಲಾ...
ಸುಬ್ರಹ್ಮಣ್ಯ ಆಗಸ್ಟ್ 27 : ಸುಬ್ರಹ್ಮಣ್ಯ ಇನ್ನರ್ವೇಲ್ ಕ್ಲಬ್ ವತಿಯಿಂದ ಓಣಂ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಸುಬ್ರಹ್ಮಣ್ಯದ ಗಣೇಶ್ ಪ್ರಸಾದ್ ಅವರ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಪೂಕಳಂ ಅಂಗವಾಗಿ ರಂಗೋಲಿಯನ್ನು ರಚಿಸಿ ಎಲ್ಲಾ ಇನ್ನರ್ವೇಲ್ನ ಸದಸ್ಯರುಗಳು ಹೂಗಳನ್ನು ಪೋಣಿಸಿ ಪೂಕಳಂ ಸುತ್ತಲು ಕೂತು ಓಣಂ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಇನ್ನರ್ ವೀಲ್...
2025-26ನೇ ಸಾಲಿನ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮಹಾಸಭೆಯಲ್ಲಿ ಸಹಕಾರ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ. ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎ.ವಿ. ವಿಕ್ರಂ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್.ಪಿ. ಪ್ರಶಸ್ತಿ ಸ್ವೀಕರಿಸಿದರು.
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 27 ಆಗಸ್ಟ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 27) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
ಸುಬ್ರಹ್ಮಣ್ಯದ ನಿವಾಸಿ “ಸ್ನೇಕ್ ಮಾಧು” ಎಂದೇ ಹೆಸರುವಾಸಿಯಾಗಿದ್ದ ಹಲವಾರು ಕಡೆಗಳಲ್ಲಿ ಮನೆಗಳಿಗೆ ಬಂದ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದ ಆಟೋ ಚಾಲಕ ಮಾಧವ ಪೂಜಾರಿ ರವರು ಆ.26ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಇವರು ಕಳೆದು ಕೆಲವು ಸಮಯಗಳಿಂದ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಕಲ್ಮಕಾರು ಸಮೀಪ ಬಾವಿಗೆ ಬಿದ್ದ...
ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾವಿನಕಟ್ಟೆಯ ಯುವಕ ಕವನ (ಕಿಶನ್) ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟ ಘಟನೆ ವರದಿಯಾಗಿದೆ. ಎಲಿಮಲೆ ನಿವಾಸಿಯಾಗಿದ್ದ ಕಿಶನ್ ಹಾಗೂ ಹರ್ಷಿತ್ ಪ್ರಯಾಣಿಸುತ್ತಿದ್ದ ಕಾರು ಗುಂಡ್ಯ ಸಮೀಪ ಲಾರಿಯೊಂದಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಕಿಶನ್ ಅವರಿಗೆ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:27-08-2026 ಗುರುವಾರ*01,🐏ಮೇಷರಾಶಿ🐏*📃, ಇಂದುನೀವು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಮತ್ತು ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಬಾಸ್‌ನಿಂದ ಬೇಸತ್ತಿದ್ದರೆ, ಬಹುಶಃ ಹೊಸ ಉದ್ಯೋಗವನ್ನು ಹುಡುಕಲು ಪ್ರಾರಂಭಿಸಲು ಇದು ಸೂಕ್ತ ಸಮಯ, ಗಮನಿಸಿ:- ನಿಮ್ಮ ಸ್ನೇಹಿತರೊಂದಿಗೆ ಸ್ವಲ್ಪ ಸಮಯವನ್ನು ಮೀಸಲಿಡಿ ಸಂಭಾಷಣೆ ನಡೆಸಿ,ಪರಿಹಾರ:-ಮಾತೇ ಮಹಾಲಕ್ಷ್ಮಿ ದೇವಿಯನ್ನು ಪೂಜಿಸಿ,*02,🐂ವೃಷಭರಾಶಿ🐂*📃, ಇಂದುಈರಾಶಿಯವರು ಕೆಲಸದಲ್ಲಿ...
ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ ಇದರ ಆಶ್ರಯದಲ್ಲಿ ಆ. 22 ರಂದು ಕಲ್ಲಡ್ಕದಲ್ಲಿ ನಡೆದ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ಜ್ಞಾನದೀಪ ಎಲಿಮಲೆ ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ರಶ್ಮಿತಾ ಬಲ್ಕಾಡಿ, ಜ್ಞಾನ್ವಿ ಕಡಪಳ 8ನೇ ತರಗತಿ ಹಾಗೂ ಪಂಚಮಿ ದೋಣಿಪಳ್ಳ 7ನೇ ತರಗತಿ...
Loading posts...
All posts loaded
No more posts
