ಹರಿಹರ ಪಳ್ಳತ್ತಡ್ಕ : 17ನೇ ವರ್ಷದ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಸೆ.13 ರಿಂದ 15ರವರೆಗೆ ನಡೆಯಲಿರುವ “ಶ್ರೀ ಗಣೇಶೋತ್ಸವ”ದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ.25ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್, ಮಾಜಿ ಆಡಳಿತ ಮೊಕ್ತೇಸರರಾದ ಡಾ| ಚಂದ್ರಶೇಖರ ಕಿರಿಭಾಗ, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಯತೀಂದ್ರ ಬಾಳುಗೋಡು, ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾತಿಕಲ್ಲು, ಖಜಾಂಜಿ ಶಿವಕುಮಾರ್ ಶಿವಾಲ, ಆರ್ಥಿಕ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ, ಹಿಮ್ಮತ್.ಕೆ.ಸಿ, ಪ್ರಸನ್ನ ಗೋರ್ತಿಲ, ರಾಮಕೃಷ್ಣ ಗೌಡ ನೆತ್ತಾರ, ಶರತ್ ಚಂದ್ರ ಮುಂಡಾಜೆ, ರಾಕೇಶ್ ಮುಳ್ಳುಬಾಗಿಲು, ಲಿಂಗಪ್ಪ ಕುಕ್ಕುಂದ್ರಡ್ಕ, ಲಕ್ಷ್ಮೀಶ ಇಜಿನಡ್ಕ, ವಿನಯ್ ಅಂಙಣ, ಶ್ರೀಮತಿ ಬಿಂದು ಗುಂಡಿಹಿತ್ಲು, ಶ್ರೀಮತಿ ಉಷಾ ಸೋಮಸುಂದರ್ ಕೂಜುಗೋಡು, ಯಕ್ಷಿತ್ ಕಜೆಗದ್ದೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading