- Sunday
- August 16th, 2026
ಸುಳ್ಯ ಕಲಾಸಕ್ತರು ನಿರ್ದೇಶಿಸಿ ಅಭಿನಯಿಸಿದ "ಮೌನ ಮಾತಾದಾಗ" ಎಂಬ ಕನ್ನಡ ಆಲ್ಬಮ್ ಸಾಂಗ್ ವಿಷ್ಣುನಾಗ ಶೇಟ್ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಜು.24ರಂದು ಬಿಡುಗಡೆಗೊಳ್ಳಲಿದೆ. ಇದರ ನಿರ್ದೇಶನವನ್ನು ಕೀರ್ತನ್ ಶೆಟ್ಟಿ ಸುಳ್ಯ ಮಾಡಿದ್ದು ಇದರ ಸಾಹಿತ್ಯವನ್ನು ಪ್ರಶಾಂತ್ ವಿಟ್ಲ ಹಾಗೂ ಗಾಯನವನ್ನು ವಿಷ್ಣುನಾಗ ಶೇಟ್ ಇವರು ಮಾಡಿದ್ದಾರೆ. ಯಶ್ ಫೋಟೋಗ್ರಫಿ ಕಲ್ಲುಗುಂಡಿ ಛಾಯಾಗ್ರಹಣದೊಂದಿಗೆ ಜೀವನ್ ಕೆರೆಮೂಲೆ ಇವರು...
ಜಾಲ್ಸೂರು ಗ್ರಾಮದ ಬೊಳುಬೈಲು ಬಳಿ ಚಲಿಸುತ್ತಿದ್ದ ಸ್ವಿಫ್ಟ್ ಕಾರಿನ ಮೇಲೆ ಮರದ ಗೆಲ್ಲು ಮುರಿದು ಬಿದ್ದು ಕಾರು ಹಾನಿಗೊಂಡ ಘಟನೆ ವರದಿಯಾಗಿದೆ. ಜಯನಗರ ನಿವಾಸಿ ಮುಜೀಬ್ ಎಂಬುವವರು ಬೊಳುಬೈಲಿನಲ್ಲಿರುವ ಪೀಸ್ ಸ್ಕೂಲಿನಿಂದ ತಮ್ಮ ಮಗುವನ್ನು ಕರೆ ತರುವ ವೇಳೆ ಕುಂಬರ್ಚೋಡು ಬಳಿ ಬರುತ್ತಿದ್ದಂತೆ ಮೇಲಿನಿಂದ ಕಾರಿನ ಮುಂಭಾಗದ ಗಾಜಿನ ಭಾಗಕ್ಕೆ ಮರದ ಗೆಲ್ಲು ಬಿದ್ದಿದೆ.ಘಟನೆಯಿಂದ ಕಾರಿನ...
ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರದಾನ ಮಂತ್ರಿಗಳ ಕಾರ್ಯಾಲಯದ ವೆಬ್ಸೈಟ್ ವಿಳಾಸಕ್ಕೆ ಇಮೇಲ್ ಕಳಿಸುವ ಅಭಿಯಾನ ಇಂದಿನಿಂದ ಆರಂಭಿಸಲಾಗುವುದು ನಡೆಸಲಾಗುವುದು ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳುತಿಳಿಸಿದ್ದಾರೆ. ವಾರ್ಡ್ ನ ಸಮಸ್ತ ಜನತೆ ಪ್ರಧಾನ ಮಂತ್ರಿಗಳಿಗೆ ನೇರ ಇ ಮೇಲ್ ಮಾಡುವ ಅಭಿಯಾನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ನಮ್ಮ ಊರಿನಿಂದ ಗರಿಷ್ಠ ಇ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜನಸಂಖ್ಯೆ ಮಿತಿ ಮೀರಿ ಏರುತ್ತಿರುವ ಇಂದಿನ ದಿನದಲ್ಲಿ ಅದರ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ರೆಡ್ ಕ್ರಾಸ್ ಘಟಕ...
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ.ಮೈಸೂರು ಇವರಿಂದ ಕೊಡಲ್ಪಡುವ ರಾಜ್ಯಮಟ್ಟದ ಉತ್ತಮ ಸಿ ಆರ್ ಪಿ ಗಳಿಗೆ ನೀಡುವ "ಶಿಕ್ಷಣ ಸಾರಥಿ" ಪ್ರಶಸ್ತಿಗೆ ದೇವಚಳ್ಳ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಆಯ್ಕೆಯಾಗಿದ್ದಾರೆ. ಇವರು 2007 ರಲ್ಲಿ ಸ.ಕಿ.ಪ್ರಾ.ಶಾಲೆ ಅಚ್ರಪ್ಪಾಡಿಯಲ್ಲಿ ವೃತ್ತಿ ಜೀವನ ಆರಂಭಿಸಿ , ಬಳಿಕ ಸ.ಹಿ.ಪ್ರಾ.ಶಾಲೆ.ದೇವಚಳ್ಳ ಇಲ್ಲಿ ಐದು ವರ್ಷಗಳ...
ಎಡೆಬಿಡದೆ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಹಲವಾರು ಕಡೆ ಪ್ರಕೃತಿ ವಿಕೋಪಗಳು ಆಗುತ್ತಿದ್ದು, ಜನರ ಜೀವನದ ಕೊಂಡಿಯಂತಿರುವ ರಸ್ತೆಗಳು ಹದೆಗೆಟ್ಟು ಹೋಗಿವೆ. ಇಂತಹುದೆ ಸಮಸ್ಯೆ ಸುಮಾರು 50 ವರ್ಷಕ್ಕಿಂತಲೂ ಅಧಿಕ ಹಳೆಯದಾದ ರಸ್ತೆಗೆ ಒದಗಿ ಬಂದಿದೆ. ನೂರಾರು ಮನೆಗಳಿಗೆ ಸಂಪರ್ಕದ ಮೂಲವಾಗಿರುವ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ - ಮಂಞನಕಾನ ರಸ್ತೆಯ ಪಾಡು ಹೇಳತೀರದಂತಾಗಿತ್ತು....
ಎಲಿಮಲೆ ಮಿತ್ರ ಬಳಗದ ವಾರ್ಷಿಕ ಮಹಾಸಭೆಯನ್ನು ಜು. 09 ರಂದು ಬಳಗದ ಕಚೇರಿಯಲ್ಲಿ ಕರೆಯಲಾಯಿತು.ಸಭೆಯ ಅಧ್ಯಕ್ಷತೆ ಯನ್ನು ಓಂಪ್ರಸಾದ್ ಕಜೆ ರವರು ವಹಿಸಿದ್ದರು. ವರದಿ ವಾಚನದ ಬಳಿಕ ಮಿತ್ರ ಬಳಗದ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಓಂ ಪ್ರಸಾದ್ ಕಜೆ, ನೂತನ ಅಧ್ಯಕ್ಷರಾಗಿ ಉದಯಕುಮಾರ್ ಚಳ್ಳ, ಉಪಾಧ್ಯಕ್ಷರಾಗಿ ದೀಕ್ಷಿತ್ ಚಿತ್ತಡ್ಕ, ಕಾರ್ಯದರ್ಶಿಯಾಗಿ ನಿತಿನ್ ಗಟ್ಟಿಗಾರು, ಜತೆ...
ಎಡೆಬಿಡದೆ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ಹೈರಾಣಗಿ ಹೋಗಿದ್ದಾರೆ . ಹಲವಾರು ಕಡೆ ಪ್ರಕೃತಿ ವಿಕೋಪಗಳು ಆಗುತ್ತಿವೆ . ಜನರ ಜೀವನದ ಕೊಂಡಿಯಂತಿರುವ ರಸ್ತೆಗಳು ಹದೆಗೆಟ್ಟು ಹೋಗಿವೆ. ಇಂತಹುದೆ ಸಮಸ್ಯೆ ಸುಮಾರು 50 ವರ್ಷಕ್ಕಿಂತಲೂ ಅಧಿಕ ಹಳೆಯದಾದ ರಸ್ತೆಗೆ ಒದಗಿ ಬಂದಿದೆ. ನೂರಾರು ಮನೆಗಳಿಗೆ ಸಂಪರ್ಕದ ಮೂಲವಾಗಿರುವ ಶೆಟ್ಟಿಗದ್ದೆ - ಮಂಞನಕಾನ ರಸ್ತೆಯ ಪಾಡು ಹೇಳತೀರದಂತಾಗಿತ್ತು....
ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯಲ್ಪಡುವ ಅಮರ ಯೋಗ ತರಬೇತಿ ಕೇಂದ್ರವನ್ನು ಗ್ರಾಮ ಪಂಚಾಯತ್, ಸದಸ್ಯರುಗಳಾದ ಮಾಯಿಲಪ್ಪ ಕೊಂಬೆಟ್ಟು, ಜಗದೀಶ್ ಬಾಕಿಲ, ನಿವೃತ್ತ ಯೋಧ ಅನಿತಾ ಮಹೇಶ್ ಕೊಪ್ಪತಡ್ಕ, ರಾಷ್ಟ್ರಿಯ ಯೋಗ ಪ್ರತಿಭೆ ದೀಕ್ಷಾ ಎಲಿಮಲೆ ಹಾಗೂ ವೆಂಕಟರಮಣ ಸೊಸೈಟಿ ನಿಂತಿಕಲ್ ಇದರ ಶಾಖಾ ವ್ಯವಸ್ಥಾಪಕ ಚರಣ್ ದೇರಪ್ಪಜನ ಮನೆ ದೀಪ...
ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾ.ರೇಣುಕಾ ಪ್ರಸಾದ್ ಕೆ.ವಿ ರವರ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎ.ಜಿ ಐ.ಟಿ.ಐ ಭಾಗಮಂಡಲದಲ್ಲಿ, ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಉಜ್ವಲ್ ಊರುಬೈಲು ರವರನ್ನು ಜು. 16ರಂದು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾತನಾಡಿ, ಭಾಗಮಂಡಲ ಐ.ಟಿ.ಐ ಯ ಅಭಿವೃದ್ಧಿಗೆ...
Loading posts...
All posts loaded
No more posts
