ಸುಳ್ಯ : ಅರೆಭಾಷೆ ಕಲಾವಿದರ ಒಕ್ಕೂಟದ ಪದಾಧಿಕಾರಿಗಳ ಸಾಮಾನ್ಯ ಸಭೆ

ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಪದಾಧಿಕಾರಿಗಳ ಸಾಮಾನ್ಯ ಸಭೆ ಜು. 18 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್ ಮೊಂಟಡ್ಕ ವಹಿಸಿದ್ದರು. ಓಟದ ನೋಂದಣಿ ಕಾರ್ಯದ ಪ್ರಗತಿ ಮತ್ತು ಸದಸ್ಯರ ಸೇರ್ಪಡೆ ಮತ್ತು ಒಕ್ಕೂಟದ ಅಭಿವೃದ್ಧಿಯ ಇತರ ವಿಷಯಗಳ ಬಗ್ಗೆ ಚರ್ಚಿಸಿ, ಜೂನಿಯರ್ ಮತ್ತು ಸೀನಿಯರ್...

ಮರ್ಕಂಜ : ಕೃಷಿ ಸಂಬಂಧಿತ ಸಾಲ ಮರುಪಾವತಿಗೆ ವಿನಾಯಿತಿ ನೀಡಲು ಪಂಚಾಯತ್ ನಿರ್ಣಯ – ಜಿಲ್ಲಾಧಿಕಾರಿಗಳಿಗೆ ಮನವಿ

ಮರ್ಕಂಜ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಸಂಬಂಧಿಸಿದ ಸಾಲಗಳ ಕಂತು ಮರುಪಾವತಿಗೆ ಈ ಆರ್ಥಿಕ ವರ್ಷ ವಿನಾಯಿತಿ ನೀಡಬೇಕೆಂದು ನಿರ್ಣಯಿಸಲಾಗಿದೆ. ಈ ಬಗ್ಗೆ ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದೆಂದೂ ತೀರ್ಮಾನಿಸಲಾಯಿತು. ‌ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಪವಿತ್ರ ಬಿ. ವಹಿಸಿದ್ದರು.ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ. ಸದಸ್ಯ ಚಿತ್ತರಂಜನ್ ಕೋಡಿ ವಿಷಯ ಪ್ರಸ್ತಾಪಿಸಿದರು. ನಿರಂತರವಾಗಿ...
Ad Widget

ಜು.20: ಪತ್ರಿಕಾ ದಿನಾಚರಣೆಯಂದು ಚಂದ್ರಾವತಿ ಬಡ್ಡಡ್ಕ ಅವರಿಗೆ ಸನ್ಮಾನ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗು ಸನ್ಮಾನ ಕಾರ್ಯಕ್ರಮ ಜುಲೈ 20 ರಂದು ಪೂ.10 ರಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ, ರಾಜ್ಯ ‘ಸಹಕಾರಿ ರತ್ನ’ ಪುರಸ್ಕೃತರಾದ ಸೀತಾರಾಮ ರೈ ಸವಣೂರು ಕಾರ್ಯಕ್ರಮ ಉದ್ಘಾಟಿಸುವರು. ಕಾಸರಗೋಡಿನ ‘ಕಣಿಪುರ’ ಯಕ್ಷಗಾನ ಮಾಸ ಪತ್ರಿಕೆಯ...

ಕೊಲ್ಲಮೊಗ್ರ: ಪ್ರಕೃತಿ ವಿಕೋಪಕ್ಕೆ ಬಲಿಯಾಗುತ್ತಿರುವ ಕೃಷಿ – ಹೊಳೆಗೆ ತಡೆಗೋಡೆ ನಿರ್ಮಿಸಲು ನಿವಾಸಿಗಳ ಒತ್ತಾಯ

ಹಲವು ವರ್ಷಗಳಿಂದ ತಾವು ಬೆಳೆಸಿದ ಕೃಷಿ ತುಂಬಿ ಹರಿಯುತ್ತಿರುವ ನದಿ ಪಾಲಾಗುತ್ತಿದ್ದು ಅಡಿಕೆ ಮರ,ತೆಂಗಿನ ಮರ ,ಹಲಸಿನ ಮರ ಕೊಚ್ಚಿ ಹೋಗುತ್ತಿದೆ. ಸಂಪೂರ್ಣ ಕೃಷಿ ಭೂಮಿ ನದಿ ಪಾಲು ಆಗುತ್ತಿದೆ . ಇದು ಕೊಲ್ಲಮೊಗ್ರ ಚಾಳೆಪ್ಪಾಡಿ ದೋಲನ ಮನೆ ಎಂಬಲ್ಲಿನ ಅನೇಕ ಕೃಷಿಕರ ನೋವಿಗೆ ಕಾರಣವಾಗಿದೆ.2018 ನೇ ಇಸವಿಯಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ಕಲ್ಮಕಾರು ಬೆಟ್ಟದಲ್ಲಿ...

ದೊಡ್ಡತೋಟ :- ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕಿನ ದೊಡ್ಡತೋಟ ವಲಯದ ಮಿತ್ತಡ್ಕ, ಗಟ್ಟಿಗಾರು, ನೆಲ್ಲೂರು ಕೆಮ್ರಾಜೆ, ದೊಡ್ಡತೋಟ, ದುಗ್ಗಲಡ್ಕ, ಸೋಣಂಗೇರಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಸತ್ಯನಾರಾಯಣ ದೇವರ ಪೂಜೆಯು ಜು.18 ರಂದು ರೆಂಜಾಳ ಶ್ರೀ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್...

ಕೌಶಿಕ್ ಕುಳ ಜೇಸಿ ವಲಯ ತರಬೇತುದಾರರಾಗಿ ಆಯ್ಕೆ

ಕಾರ್ಕಳದಲ್ಲಿ ಜು. 14 ರಿಂದ 17 ರ ವರೆಗೆ ನಡೆದ ವಲಯ ತರಬೇತುದಾರರ ಪರೀಕ್ಷಾ ಕಮ್ಮಟದಲ್ಲಿ ಜೇಸಿಐ ಪಂಜ ಪಂಚಶ್ರೀ ಯ ಕಾರ್ಯದರ್ಶಿ ಜೇಸಿ ಕೌಶಿಕ್ ಕುಳ ರವರು ಉತ್ತೀರ್ಣರಾಗಿ ವಲಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇವರು ಜೇಸಿಐ ಪಂಜ ಪಂಚಶ್ರೀ ಯ ಪೂರ್ವಾಧ್ಯಕ್ಷರು, ವಲಯ ತರಬೇತುದಾರರೂ ಆಗಿದ್ದ ದಿ. ಮಹಾಬಲ ಕುಳ ಹಾಗೂ ರುಕ್ಮಿಣಿ ಮಹಾಬಲ...

ಅರಮನೆಗಯ ನಿವಾಸಿಗಳ ಮತದಾನ ಬಹಿಷ್ಕಾರದ ಕೂಗು – ಇನ್ನಾದರೂ ತೂಗು ಉಯ್ಯಾಲೆಯ ಸರ್ಕಸ್ ಗೆ ಮುಕ್ತಿ ಸಿಗಬಹುದೇ?

ಆರಂತೋಡು ಹಾಗೂ ಮರ್ಕಂಜ ಗ್ರಾಮದ ಗಡಿಭಾಗದಲ್ಲಿರುವ ಅರಮನೆಗಯ ಎಂಬಲ್ಲಿರುವ ತೂಗು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದು ಈ ಭಾಗಕ್ಕೆ ನಿರ್ಮಿಸಬೇಕೆಂಬ ಬೇಡಿಕೆಗೆ ಮೂವತ್ತು ವರ್ಷ ಕಳೆದಿದೆ. ಅರಂತೋಡು -ಪಿಂಡಿಮನೆ – ಮಿತ್ತಡ್ಕ -ಮರ್ಕಂಜ ರಸ್ತೆಯಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ಶಾಶ್ವತ ತೂಗು ಸೇತುವೆ ತುರ್ತಾಗಿ ನಿರ್ಮಿಸಬೇಕೆಂದು ಒತ್ತಾಯಿಸಿ ಬೇಡಿಕೆ ಈಡೇರುವವರೆಗೆ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿ...

ಸಂಪಾಜೆ : ಅಪಾಯಕಾರಿ ಸ್ಥಿತಿಯಲ್ಲಿ ಅಂಗನವಾಡಿ ವಿದ್ಯುತ್ ಸಂಪರ್ಕ ವ್ಯವಸ್ಥೆ

ಸಂಪಾಜೆ ಗ್ರಾಮದ ಗೂನಡ್ಕ ರಾಜರಾಮಪುರ ಅಂಗವಾಡಿ ಕೇಂದ್ರದ ವಿದ್ಯುತ್ ಸಂಪರ್ಕ ಅಳವಡಿಸಿದ ಜಾಗದಲ್ಲಿ ಮಳೆ ಬರುವಾಗ ನೀರು ಸೋರುತ್ತಿದ್ದು, ಮೀಟರ್ ಹಾಗೂ ಉಪಕರಣ ಒದ್ದೆಯಾಗಿದ್ದು ಅಪಾಯದ ಸ್ಥಿತಿಯಲ್ಲಿದೆ. ಅಂಗನವಾಡಿ ಮಕ್ಕಳು ಗೋಡೆ ಒದ್ದೆಯಾಗಿರುವುದನ್ನು ಮುಟ್ಟಿದರೇ ಶಾಕ್ ಹೊಡೆಯುವುದಂತೂ ಸತ್ಯ. ಸ್ಥಳೀಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು...

ಮಡಿಕೇರಿ –ಮಂಗಳೂರು ರಸ್ತೆ ಸಂಚಾರಕ್ಕೆ ತಡೆ – ಸಂಪಾಜೆ ಗೇಟ್ ನಲ್ಲಿ ಟ್ರಾಫಿಕ್ ಜಾಮ್

ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಮಡಿಕೇರಿ ಡಿಸಿ ಕಛೇರಿ ಬಳಿ ತಡೆಗೋಡೆ ಕುಸಿತದ ಭೀತಿಯಿಂದ ಪರ್ಯಾಯವಾಗಿ ತಾಳತ್ತನಮನೆ ರಸ್ತೆ ಬಳಸಲು ಸೂಚನೆ ನೀಡಲಾಗಿತ್ತು. ಇದೀಗ ಆ ರಸ್ತೆಯಲ್ಲಿ ಕೂಡ ಭೂಕುಸಿದ ಸಾಧ್ಯತೆ ಹಿನ್ನೆಲೆಯಲ್ಲಿ ಮಡಿಕೇರಿ ಪೊಲೀಸರು ತಾಳತ್ತಮನೆ ಸಮೀಪ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದಾರೆ. ಎರಡನೇ ಮೊಣ್ಣಂಗೇರಿ ರಾಮಕೊಲ್ಲಿ ಬಳಿ ಜಲಸ್ಪೋಟ ಉಂಟಾಗಿದ್ದು ಮಣ್ಣು ಮಿಶ್ರಿತ...

ಜ್ಯೋತಿ ಇಂಡಸ್ಟ್ರೀಸ್ ಜಗನ್ನಾಥ ರೈ ಹೃದಯಾಘಾತದಿಂದ ನಿಧನ

ಸುಳ್ಯದ ಜ್ಯೋತಿ ಇಂಡಸ್ಟ್ರೀಸ್ ಮಾಲಕ ಹಾಗೂ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕನ್ನೆಜಾಲು ಜಗನಾಥ ರೈ ಜ್ಯೋತಿ ಅವರು ಜು.18ರಂದು ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ಇದೀಗ ಕೊನೆಯುಸಿರೆಳೆದಿದ್ದಾರೆ . ಇಎನ್ ಟಿ ಸ್ಪೆಷಲಿಸ್ಟ್ ಡಾ.ರವಿಶಂಕರ್ ರಲ್ಲಿ ಚಿಕಿತ್ಸೆಗೆಂದು ಬಂದಿದ್ದ ಅವರು ಅಲ್ಲಿಂದ ಹಿಂತಿರುಗಿ ಹೋಗುತ್ತಿರುವಾಗ ಹೃದಯಾಘಾತಕ್ಕೊಳಗಾದರು. ಕೂಡಲೇ ಅವರನ್ನು ಅವರ ಪುತ್ರಿ ಮತ್ತು ಅಳಿಯ ಕೆವಿಜಿ...
Loading posts...

All posts loaded

No more posts

error: Content is protected !!