ಜನಜಾಗೃತಿಯಿಂದ ಆರೋಗ್ಯ ಕಾಪಾಡಲು ಸಾಧ್ಯ: ಎಸ್. ಅಂಗಾರ | ಪತ್ರಕರ್ತರಿಗೆ ಸ್ಟೀಲ್ ಬಾಟಲ್ ವಿತರಣೆ

ಸುಳ್ಯ: ಜನಜಾಗೃತಿ ಮೂಡಿಸುವ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ರೂಪಿಸುವ ಕೆಲಸವನ್ನು ಜೇಸಿಐ ಮಾಡುತ್ತಿದೆ. ಯಾವುದನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬ ಅರಿವು ಜನರಲ್ಲಿ ಮೂಡಿದಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವ ಎಸ್. ಅಂಗಾರ ಹೇಳಿದರು. ಜೇಸಿಐ ಪಯಸ್ವಿನಿ ಸುಳ್ಯ ವತಿಯಿಂದ ಸೆ. 6ರಂದು ಸುಳ್ಯದ ವೆಂಕಟ್ರಮಣ ಕೋ-ಆಪರೇಟಿವ್ ಸೊಸೈಟಿಯ...

ಪಂಜ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಬಿಜೆಪಿ ಆರೋಪ: ಕಾಂಗ್ರೆಸ್ ಮುಖಂಡರಿಂದ ತಿರುಗೇಟು

ಸುಳ್ಯ: ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ಸುಮಾರು 57 ಗ್ರಾಮಗಳ ಭಕ್ತರು ನಂಬಿಕೊಂಡು ಬರುವ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಬಿಜೆಪಿ ಭಕ್ತರ ಹೆಸರಿನಲ್ಲಿ ಅವ್ಯವಹಾರದ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮಹೇಶ್ ಕರಿಕ್ಕಳ ಆರೋಪಿಸಿದರು. ಸುಳ್ಯದ ಪತ್ರಿಕಾ ಭವನದಲ್ಲಿ ಸೆ. 5ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು...
Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 ದಿನಾಂಕ: 06-09-2026 ಭಾನುವಾರ*01🐏ಮೇಷರಾಶಿ🐏*📃, ಇಂದು ನಿಮ್ಮ ಪ್ರಯತ್ನಗಳಲ್ಲಿ ಧನಾತ್ಮಕ ಫಲಿತಾಂಶಗಳಿರುತ್ತವೆ ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ ಉಂಟಾಗುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ಕೆಲವು ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ, ಗಮನಿಸಿ:- ಇಂದು ಮನೆಯಲ್ಲಿನಿರೀಕ್ಷಿತ ಬದಲಾವಣೆಗಳಿರುತ್ತವೆ,ಪರಿಹಾರ:- ಇಂದು ಸಂಜೆ ನವಗ್ರಹ ದೇವಸ್ಥಾನಕ್ಕೆ ಭೇಟಿ...

ಅಪಘಾತದ ಅರಿವು – ಉಲ್ಲಾಸ್ ಕಜ್ಜೋಡಿ

ವಾಹನದಲ್ಲಿ ಪ್ರಯಾಣ-ರಸ್ತೆಯ ಮೇಲಿಡಬೇಕು ನಮ್ಮ ಕಣ್ಣು, ಮೂಗು, ಬಾಯನ್ನ...ಎಚ್ಚರ ತಪ್ಪಿದರೆ ನಮ್ಮಯ ಜೀವಕ್ಕೆ ಅಪಘಾತ-ಮನೆಯವರ ಬದುಕಿಗೆ ಸಿಡಿಲಾಘಾತ...ಬೇಕಾಬಿಟ್ಟಿ ಪ್ರಯಾಣ-ಅದಾಗಬಹುದು ನಮ್ಮ ಬದುಕಿನ ಕೊನೆಯಣ್ಣ...ವೇಗದ ಹಾದಿ-ಆಗಬಹುದು ಅಪಘಾತಕ್ಕೆ ಬುನಾದಿ...ನಿಗದಿತವಾದ ಸ್ಪೀಡು-ಜೀವಕ್ಕಿಲ್ಲ ಯಾವುದೇ ಕೇಡು...ಓವರ್ ಸ್ಪೀಡು-ಅದಂತೂ ತುಂಬಾ ಬ್ಯಾಡು...ಅತೀ ವೇಗದ ಸಂಚಾರ-ನಮ್ಮಯ ಬದುಕಿಗೆ ಸಂಚಕಾರ...ನಿಯಮಿತವಾದ ವಾಹನ ಚೆಕ್‌ಅಪ್ಪು-ನಮಗೂ, ನಮ್ಮ ಗಾಡಿಗೂ ಎಂದೂ ಆಗದು ಬ್ರೇಕ್‌ಅಪ್ಪು...ಪದೇಪದೇ ಓವರ್‌ಟೇಕ್ ಮಾಡೋ ಖಯಾಲಿ-ಈ...

ಬೆಳ್ಳಾರೆ ಜ್ಞಾನದೀಪದಲ್ಲಿ ಶಿಕ್ಷಕರ ದಿನಾಚರಣೆ ; “ಗುರಿ ತೋರುವ ಗುರುವಿನ ವೃತ್ತಿ ಶ್ರೇಷ್ಠ” : ಉಮೇಶ್ ಮಣಿಕ್ಕಾರ

“ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಗುರಿ ಮುಖ್ಯ. ಗುರಿ ಸಾಧಿಸುವ ದಾರಿ ತೋರಿಸುವ ಶಿಕ್ಷಕ ವೃತ್ತಿ ಶ್ರೇಷ್ಠ” ಎಂದು ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಹೇಳಿದರು. ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಜ್ಞಾನದೀಪ ಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಸಂಸ್ಥೆಯ...

ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಎರ್ಮಾಯಿಲ್ ಸಮೀಪ ಹೊತ್ತಿ ಉರಿದ ಕೆ.ಎಸ್.ಆರ್.ಟಿ.ಸಿ ಬಸ್ ; ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಪ್ರಯಾಣಿಕರು

ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗೆ ಎರ್ಮಾಯಿಲ್ ಬಳಿ ಶನಿವಾರ ಸೆ.05ರಂದು ರಾತ್ರಿ 9:15ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ನಲ್ಲಿದ್ದ 37 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಸ್ ಎರ್ಮಾಯಿಲ್ ಸಮೀಪ ಬರುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಬಸ್‌ನ್ನು...

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಭುವನೇಶ್ವರಿ ಕೆ. ಅವರ ಪರಿಚಯ

ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವುದರೊಂದಿಗೆ ಶಾಲಾ ಅಭಿವೃದ್ಧಿಗೆ ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಹಲವು ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿರುವ ಎಣ್ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಭುವನೇಶ್ವರಿ ಕೆ. ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ದಿ....

ಸುಳ್ಯ ತಾಲೂಕು ಖಾಸಗಿ ಶಾಲಾ ಮುಖ್ಯ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ

ಸೆಪ್ಟೆಂಬರ್ 05 ಶಿಕ್ಷಕರ ದಿನಾಚರಣೆಯಂದು ಪೂರ್ವಾಹ್ನ 9:00 ಗಂಟೆಗೆ ಕೆ.ಪಿ.ಎಸ್ ಸುಳ್ಯ ದಲ್ಲಿ ನಡೆದ ಖಾಸಗಿ ಶಾಲಾ ಶಿಕ್ಷಕರ ಸಂಘದ ಸಭೆಯಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಜ್ಞಾನದೀಪ ವಿದ್ಯಾಸಂಸ್ಥೆ, ಎಲಿಮಲೆಯ ಮುಖ್ಯಶಿಕ್ಷಕರಾದ ಗದಾಧರ ಬಾಳುಗೋಡು ಇವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಕುಮಾರಸ್ವಾಮಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾರತ್ನ ಹಾಗೂ ಶ್ರೀ...

ಯು.ಸಂ.ಮಂಡಳಿ ಹಾಗೂ ಅಮ್ಮ ಚಿಣ್ಣರ ಮನೆಯ ಆಶ್ರಯದಲ್ಲಿ ಮುದ್ದು ಕೃಷ್ಣ–ಮುದ್ದು ರಾಧೆ ಸ್ಪರ್ಧೆ

ಸುಳ್ಯ : ಯುವಜನ ಸಂಯುಕ್ತ ಮಂಡಳಿ ಹಾಗೂ ಅಮ್ಮ ಚಿಣ್ಣರ ಮನೆಯ ಆಶ್ರಯದಲ್ಲಿ ಮುದ್ದು ಕೃಷ್ಣ–ಮುದ್ದು ರಾಧೆ ಸ್ಪರ್ಧೆ ಸೆ. 5ರಂದು ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.ಐದು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಒಟ್ಟು 53 ಮಕ್ಕಳು ಭಾಗವಹಿಸಿ ಗಮನ ಸೆಳೆದರು. 7...

ಅರಿವಿಗೆ, ಬದುಕಿಗೆ ಶಿಕ್ಷಣ ಅಗತ್ಯ: ಡಾ. ಮಾಧವ ಭಟ್ | ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಸುಳ್ಯ: ಇನ್ನೊಬ್ಬರನ್ನು ಪ್ರೀತಿಸಬೇಕಾದರೆ ನಮ್ಮಲ್ಲಿ ಅಹಂ ಹಾಗೂ ಸ್ವಾರ್ಥ ಇರಬಾರದು. ಒಮ್ಮೆ ಬಳಸಿ ಬಿಸಾಡುವ ಶಿಕ್ಷಣ ನಮ್ಮದಲ್ಲ. ಭಾರತದಲ್ಲಿ ಜ್ಞಾನ ಪವಿತ್ರವಾದುದು. ವ್ಯವಸ್ಥಿತ ಶಿಕ್ಷಣದ ಮೂಲಕ ಮಕ್ಕಳು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಬೆಳೆಸಿಕೊಂಡು ರೆಕ್ಕೆ ಬಿಚ್ಚಿ ಹಾರುವಂತಾಗಬೇಕು. ಅರಿವಿಗೆ ಮತ್ತು ಬದುಕುವುದಕ್ಕೆ ಶಿಕ್ಷಣ ಅಗತ್ಯ ಎಂದು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ...
Loading posts...

All posts loaded

No more posts

error: Content is protected !!