ನಿಂತಿಕಲ್ಲು : ಬದ್ರಿಯ ಜುಮಾ ಮಸೀದಿ ಮಹಾಸಭೆ – ಅಧ್ಯಕ್ಷರಾಗಿ ಅಬ್ದುಲ್ ಗಫೂರ್, ಕಾರ್ಯದರ್ಶಿ ಶರೀಫ್ ಜಿ‌.

ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಡಿಸಂಬರ್ 16 ರಂದು ನಡೆಯಿತು. ಗೌರವಾಧ್ಯಕ್ಷರಾದ ಖಾಝಿಯೂ ಆದ ಕೂರ ತಂಘಳ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಾರ್ಷಿಕ ವರದಿ ಮತ್ತು ಆಯ ವ್ಯಯಪಟ್ಟಿ ಮಂಡಿಸಿದರು. ನಂತರ ನೂತನ ಆಡಳಿತ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಅಬ್ದುಲ್ ಗಫೂರ್,ಉಪಾಧ್ಯಕ್ಷರಾಗಿ ಇಬ್ರಾಹಿಂ ಕಜೆ, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಪಳ್ಳಿಮನೆ, ಕಾರ್ಯದರ್ಶಿ...

ಸುಳ್ಯ ಹಬ್ಬದ ಅಂಗವಾಗಿ ಆರು ಸಾಧಕರಿಗೆ ಕೆವಿಜಿ ಯುವ ಸಾಧಕ ಪ್ರಶಸ್ತಿ ಪ್ರದಾನ

ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ ‘ಕೆ.ವಿ.ಜಿ. ಸುಳ್ಯ ಹಬ್ಬ’ ಆಚರಣೆಯ ಅಂಗವಾಗಿ ಡಿ.25ರಂದು ಯುವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಯುವ ಸಾಧಕರಾದ ಸಚಿನ್ ಪ್ರತಾಪ್-ಕ್ರೀಡೆ, ಮೇಜರ್ ಡಾ.ಕುಶ್ವಂತ್ ಕೋಳಿಬೈಲ್-ವೈದ್ಯಕೀಯ, ಸಂತೋಷ್ ಕೊಡೆಂಕಿರಿ-ಚಿತ್ರರಂಗ, ಭವ್ಯಶ್ರೀ ಕುಲ್ಕುಂದ- ಯಕ್ಷಗಾನ, ಮಂಜುನಾಥ...
Ad Widget

ಅಧಿವಕ್ತಾ ಪರಿಷತ್ ನ ರಾಷ್ಟ್ರೀಯ ಅಧಿವೇಶನಕ್ಕೆ ತೆರಳಿದ ಸುಳ್ಯದ ಮೂವರು ನ್ಯಾಯವಾದಿಗಳು

ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ನ ರಾಷ್ಟ್ರೀಯ ಅಧಿವೇಶನ ಹರಿಯಾಣದ ಕುರುಕ್ಷೇತ್ರದಲ್ಲಿ ಡಿ 26ರಂದು ನಡೆಯಲಿದ್ದು, ಸುಳ್ಯದಿಂದ ಮೂವರು ನ್ಯಾಯವಾದಿಗಳು ಭಾಗವಹಿಸಲು ತೆರಳಿರುತ್ತಾರೆ.‌ ಡಿ.26 ರಂದು ಅಪರಾಹ್ನ 3.00 ಗಂಟೆಗೆ ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಯಾಗಿರುವ ಜಸ್ಟೀಸ್ ಸೂರ್ಯಕಾಂತ್ ರವರು ಉದ್ಘಾಟಿಸಲ್ಲಿದ್ದಾರೆ. ಸು‌ಳ್ಯದಿಂದ ಯುವ ನ್ಯಾಯವಾದಿ, ಸಿ.ಎ.ಬ್ಯಾಂಕ್ ನಿರ್ದೇಶಕ ಹರೀಶ್ ಬೂಡುಪನ್ನೆ, ದ.ಕ.ಜಿಲ್ಲಾ ಅಧಿವಕ್ತಾ...

ಕೆವಿಜಿ ಸುಳ್ಯ ಹಬ್ಬದ ಅಂಗವಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ

ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದವ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ ‘ಕೆ.ವಿ.ಜಿ. ಸುಳ್ಯ ಹಬ್ಬ’ ಆಚರಣೆಗೆ ಚಾಲನೆ ನೀಡಲಾಯುತು. ಎರಡು ದಿನಗಳ ಸುಳ್ಯ ಹಬ್ಬದ ಅಂಗವಾಗಿ ಡಿ.25 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಿತು. ಚೆನ್ನಕೇಶವ...

ಶುಭವಿವಾಹ: ಚಿ|ರಾ| ಯತೀಶ್.ಕೆ – ಚಿ|ಸೌ| ದೀಕ್ಷಿತಾ

ಬಾಳಿಲ ಗ್ರಾಮದ ಕುಕ್ಕುತ್ತಡಿ ದಿ|ಜತ್ತಪ್ಪ ಗೌಡರ ಪುತ್ರ ಚಿ|ರಾ| ಯತೀಶ್.ಕೆ ರವರ ವಿವಾಹವು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪುಳಿತ್ತಡಿ ಪುಟ್ಟಣ್ಣ ಗೌಡರ ಪುತ್ರಿ ಚಿ|ಸೌ| ದೀಕ್ಷಿತಾ ರವರೊಂದಿಗೆ ಡಿ.25ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು.

ಬೇಕಾಗಿದ್ದಾರೆ

ಸುಳ್ಯದ ಹಳೆಗೇಟಿನಲ್ಲಿರುವಆರ್ಯುಧಾಮ ಆಯುರ್ವೇದ ಆಸ್ಪತ್ರೆಗೆಮಹಿಳಾ ಮತ್ತು ಪುರುಷ ತೆರಪಿಸ್ಟ್, ಹಾಸ್ಪಿಟಲ್ ಮೈಂಟೆನೆನ್ಸ್ ಸ್ಟಾಪ್, ಸಸ್ಯಾಹಾರ ಅಡುಗೆಯವರು ಬೇಕಾಗಿದ್ದಾರೆ. ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುವುದು.ಸಂಪರ್ಕಿಸಿ:. ಡಾ/ ಹರಿಪ್ರಸಾದ್ ಶೆಟ್ಟಿ9880464302

ಸುಳ್ಯ: ನೂತನವಾಗಿ ನಿರ್ಮಾಣಗೊಂಡ ಬಂಟರ ಸಮುದಾಯ ಭವನ ಲೋಕಾರ್ಪಣೆ

ಸುಳ್ಯದ ಕೇರ್ಪಳದಲ್ಲಿ ಬಂಟರ ಸಂಘದಿಂದ ವತಿಯಿಂದ ನಿರ್ಮಾಣಗೊಂಡ ನೂತನ ಬಂಟರ ಸಮುದಾಯ ಭವನವನ್ನು ಆಶಾ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ಮುಂಬೈಯ ಹೇರಂಭಾ ಗ್ರೂಪ್ ಕೇರ್ ಲಿಮಿಟೆಡ್‌ನ ನಿರ್ದೇಶಕರಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ,ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ರಾಜ್ಯ ಒಕ್ಕಲಿಗರ ಸಂಘದ...

ಡಿ.31 ; ಮಂಡ್ಯ ತಹಶೀಲ್ದಾರ್ ಕುಂಞಿ ಅಹಮದ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ದಾಮೋದರ ಮಾಸ್ಟರ್ ರವರಿಗೆ ‘ಸಜ್ಜನ ಸಿರಿ’ ಪುರಸ್ಕಾರ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೊಂ)ಇದರ ವತಿಯಿಂದ ಪ್ರತಿವರ್ಷ ಕೊಡಮಾಡಲ್ಪಡುವ ಪ್ರತಿಷ್ಠಿತ ಕರ್ನಾಟಕ ರಾಜ್ಯ ಮಟ್ಟದ ಸಜ್ಜನ ಸಿರಿ ರಾಜ್ಯ ಪ್ರಶಸ್ತಿಯನ್ನು ಈ ಹಿಂದೆ ಸುಳ್ಯ ತಾಲೂಕಿನಲ್ಲಿ ತಹಶಿಲ್ದಾರ್ ಆಗಿ ಬಹಳ ಹೆಸರು ಗಳಿಸಿ ಸಾರ್ವಜನಿಕರ ಪ್ರೀತಿಪಾತ್ರರಾಗಿರುವ ಪ್ರಸ್ತುತ ಮಂಡ್ಯ ತಹಶಿಲ್ದಾರ್ ಆಗಿರುವ ಶ್ರೀ ಕುಂಞಿಅಹ್ಮದ್ ಕೆ ಎ ಎಸ್ ಹಾಗೂ ಸರಳ ಸಜ್ಜನ ವ್ಯಕ್ತಿತ್ವದಿಂದ ಜನರ...

ಕರಂಗಲ್ಲು ಸ.ಕಿ.ಪ್ರಾ ಶಾಲೆಯ ನಲಿಕಲಿ ವಿದ್ಯಾರ್ಥಿಗಳಿಗೆ ಚಯರ್ ಕೊಡುಗೆ

ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಅಧ್ಯಕ್ಷರಾದ ಶ್ರೀ ಮಣಿಕುಮಾರ್ ಮುಂಡೋಡಿ ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಂಗಲ್ಲು ಇಲ್ಲಿನ ನಲಿಕಲಿ ವಿದ್ಯಾರ್ಥಿಗಳಿಗೆ 12 ಚಯರ್ ಗಳನ್ನು ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಸರ್ವ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಎಸ್.ಡಿ.ಎಂ.ಸಿ ಯವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

ಡಿ.30: ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೊರಗಜ್ಜನ ನೇಮೋತ್ಸವ

ಪೆರುವಾಜೆ ಗ್ರಾಮದ ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.30 ಶುಕ್ರವಾರದಂದು ನಡೆಯಲಿದೆ. ಬೆಳಿಗ್ಗೆ ಗಂಟೆ 8.00ಕ್ಕೆ ಗಣಹೋಮ, ಬೆಳಿಗ್ಗೆ ಗಂಟೆ 9.00ಕ್ಕೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7.00ಕ್ಕೆ ದೈವದ ಭಂಡಾರ ತೆಗೆದು ರಾತ್ರಿ ಗಂಟೆ 8.00ಕ್ಕೆ ಅನ್ನಸಂತರ್ಪಣೆ...
Loading posts...

All posts loaded

No more posts

error: Content is protected !!