ಜು 29,30,31 ಬೆಳ್ಳಾರೆಯ ತಂಬಿನಮಕ್ಕಿಯಲ್ಲಿ ಸಾದಾತ್ ಆಂಡ್ ನೇರ್ಚೆ-2026

ಬೆಳ್ಳಾರೆ ಗ್ರಾಮದ ತಂಬಿನಮಕ್ಕಿಯ ದಾರುಲ್ ಹುದಾ ವಿದ್ಯಾಸಂಸ್ಥೆಯ ಕ್ಯಾಂಪಸಿನಲ್ಲಿ ಸಾದಾತ್ ಆಂಡ್ ನೇರ್ಚೆಯು ಜು 29,30,31 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

. . . . . . . . .

ಜು 29 ರಂದು ಅಸ್ವರ್ ನಮಾಝಿನ ಬಳಿಕ ಸಯ್ಯಿದ್ ಮುಸ್ತಫಾ ಪೂಕೋಯ ತಂಙಲ್ ಮಂಬಾಡ್ ನೇತೃತ್ವದಲ್ಲಿ ಬೆಳ್ಳಾರೆ ಮಖಾಂ ಝಿಯಾರತ್ ನಡೆಯಲಿದೆ.ಸಂಜೆ 5 ಘಂಟೆಗೆ ಉಮರಾ ಮುಖಂಡ ಲತ್ವೀಫ್ ಹಾಜಿ ಹರ್ಲಡ್ಕ ಧ್ವಜಾರೋಹಣವನ್ನು ನೆರವೇರಿಸಲಿರುವರು.ಅಂದು ಮಗ್ರಿಬ್ ನಮಾಝಿನ ಬಳಿಕ ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ನೇತೃತ್ವದಲ್ಲಿ ಜಲಾಲಿಯ ರಾತ್ವೀಬ್ ನಡೆಯಲಿದೆ.ಮುಖ್ಯ ಪ್ರಭಾಷಣವನ್ನು ರಾಫೀ ಹಿಮಮಿ ಸಖಾಫಿ ಅಯ್ಯಂಗೇರಿ ನೆರವೇರಿಸಲಿರುವರು.

. . . . . . .

ಜು 30 ರಂದು ಮಗ್ರಿಬ್ ನಮಾಝಿನ ಬಳಿಕ ಸಯ್ಯಿದ್ ಪೂಕೋಯ ತಂಙಲ್ ಸುಳ್ಯ ನೇತೃತ್ವದಲ್ಲಿ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ನಡೆಯಲಿದೆ. ಮುಖ್ಯ ಭಾಷಣವನ್ನು ಇರ್ಷಾದ್ ಅಝ್ಹರಿ ಮಲಪ್ಪುರಂ ನೆರವೇರಿಸಲಿರುವರು.

ಜು 31 ರಂದು ಜುಮುಅ: ನಮಾಝಿನ ಬಳಿಕ ಸಯ್ಯಿದ್ ಮುಸ್ತಫಾ ಪೂಕೋಯ ತಂಙಲ್ ಮಂಬಾಡ್ ನೇತೃತ್ವದಲ್ಲಿ ಖಬರ್ ಝಿಯಾರತ್ ನಡೆಯಲಿದೆ.ಅಂದು ಅಸ್ವರ್ ನಮಾಝಿನ ಬಳಿಕ ಸಯ್ಯಿದ್ ಮಶ್ಹೂದ್ ತಂಙಲ್ ಕೂರತ್,ಶಿಹಾಬುದ್ದೀನ್ ನೂರಾನಿ ತಿರುವಟ್ಟೂರ್ ನೇತೃತ್ವದಲ್ಲಿ ಬದರ್ ಮೌಲಿದ್,ಖತ್ಮುಲ್ ಖುರ್ಆನ್ ಮಜ್ಲಿಸ್ ನಡೆಯಲಿದೆ.ಮಗ್ರಿಬ್ ನಮಾಝಿನ ಬಳಿಕ ಅಹ್ದಲಿಯಾ ಆತ್ಮೀಯ ಸಮಾರೋಪ ಸಮ್ಮೇಳನ ನಡೆಯಲಿದೆ.ಶೈಖುನಾ ಸಯ್ಯದ್ ಹಸನುಲ್ ಅಹ್ದಲ್ ತಂಙಲ್ ತಂಬಿನಮಕ್ಕಿ,ಸಯ್ಯಿದ್ ಮುನೀರುಲ್ ಅಹ್ದಲ್ ತಂಙಲ್ ಮುಹಿಮ್ಮಾತ್,ಮುಸ್ತಫಾ ಪೂಕೋಯ ತಂಙಲ್ ಮಂಬಾಡ್, ಮುದುಗಡ ಅಬ್ದುಲ್ ಖಾದರ್ ಸಖಾಫಿ, ಖಲೀಲ್ ಹಿಮಮಿ ಸಖಾಫಿ ಕೊಟ್ಟಮುಡಿ ಭಾಗವಹಿಸಲಿರುವರು.ಮುಖ್ಯ ಪ್ರಭಾಷಣವನ್ನು ಮುಹಮ್ಮದ್ ಅಝ್ಹರಿ ಪೇರೋಡ್ ನೆರವೇರಿಸಲಿದ್ದಾರೆ.ದುಆಕ್ಕೆ ನೇತೃತ್ವವನ್ನು ಸಯ್ಯಿದ್ ಶಿಹಾಬುದ್ದೀನ್ ಅಲ್-ಅಹ್ದಲ್ ಮುತ್ತನೂರ್ ನೀಡಲಿದ್ದಾರೆ.ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯ ಇರುವುದು.ಕಾರ್ಯಕ್ರಮಗಳ ಕೊನೆಯ ದಿನ ಅನ್ನದಾನ ವಿತರಣೆ ನಡೆಯಲಿರುವುದು.

ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading