- Wednesday
- July 29th, 2026
ಕನಕಮಜಲು ಗ್ರಾಮದ ಪಲ್ಲತ್ತಡ್ಕ ದಿ. ಶಿವರಾಮ ಗೌಡರ ಪುತ್ರ ಕೆ.ವಿ.ಜಿ .ಪಾಲಿಟೆಕ್ನಿಕ್ ಉದ್ಯೋಗಿ ಜಯಪ್ರಕಾಶ್ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಕೆಲ ಸಮಯದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರು ತಾಯಿ ದೇವಕಿ, ಪತ್ನಿ ಶರತ್ ಕುಮಾರಿ ( ಪ್ರಮೀಳಾ), ಪುತ್ರ ಧನ್ವಿತ್, ಪುತ್ರಿ ತನ್ವಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಕುಶಾಲನಗರದ ಆನೆಕಾಡು ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬೈಕ್ ಸವಾರ ಪೆರುವಾಜೆಯ ಕಾರ್ತಿಕ್ ಭಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಅವಿವಾಹಿತರಾಗಿದ್ದ ಅವರು ಮೈಸೂರಿನ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಅರ್ನಾಡಿ ವಿಷ್ಣು ಭಟ್ ರವರ ಪುತ್ರ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್...
ಬಳ್ಪ ಗ್ರಾಮದ ಶಿವರಾಮ ಗೌಡ ಎಣ್ಣೆಮಜಲು ಆ.02 ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲೀಲಾವತಿ, ಪುತ್ರ ಪುನಿತ್, ಪುತ್ರಿಯರಾದ ಶ್ರೀಮತಿ ವಾಣಿ, ಶ್ರೀಮತಿ ವೀಣಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಸುಳ್ಯ ಕಸಬಾ ಗ್ರಾಮದ ಕೊಯಿಂಗೋಡಿ ದಿ.ಭವಾನಿ ಪ್ರಸಾದ್ ರವರ ಪುತ್ರ ನಿತಿನ್ ಕೊಯಿಂಗೋಡಿ(35ವ) ಯವರು ಅಸೌಖ್ಯದಿಂದ ಜು.25 ರಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು.ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜು.25 ರಂದು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.ಮೃತರು ತಾಯಿ ಕವಿತಾ, ಪತ್ನಿ ಶಿಲ್ಪ, ಪುತ್ರ ಪ್ರಿಯಂಷು, ಸಹೋದರ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಕಡಬ ತಾಲೂಕು ಏನೆಕಲ್ಲು ಗ್ರಾಮದ ಪದ್ನಡ್ಕ ದಿ.ವಿಜಯಕುಮಾರ್ ಪೂಜಾರಿಯವರ ಪುತ್ರಿ ಅಶ್ವಿನಿ(25) ಅಸೌಖ್ಯದಿಂದ ಜು.21 ರಂದು ನಿಧನರಾದರು. ಅಶ್ವಿನಿ ಅವರಿಗೆ ಒಂದುವರೆ ವರ್ಷಗಳ ಹಿಂದಷ್ಟೇ ಕೊಡಿಂಬಾಳದ ರಂಜಿತ್ ಅವರೊಂದಿಗೆ ವಿವಾಹವಾಗಿತ್ತು. ಅನಾರೋಗ್ಯ ಎಂದು ಚಿಕಿತ್ಸೆಗೆ ಹೋದಾಗ ಬ್ಲಡ್ ಕ್ಯಾನ್ಸರ್ ಎಂದು ಗೊತ್ತಾಗಿ ಅವರು ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತಿ ರಂಜಿತ್, ತಾಯಿ...
ಕಣ್ಣೂರಿನ ಗೆಳೆಯನ ಮನೆಗೆ ತೆರಳಿದ್ದ ಆಸ್ತಿಕ್ ಬಾಳಿಕಳ ಕೆರೆ ನೀರಿನಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದರು. ಇಂದು ಆಸ್ತಿಕ್ ರವರ ಪಾರ್ಥಿವ ಶರೀರ ಅಪರಾಹ್ನ 2.15ಕ್ಕೆ ಸುಳ್ಯಕ್ಕೆ ತಲುಪಲಿರುವುದಾಗಿ ತಿಳಿದುಬಂದಿದೆ. ನಿವೃತ್ತ ವೈದ್ಯಾಧಿಕಾರಿ ಡಾ| ನಂದಕುಮಾರ್ ಬಾಳಿಕಳ ರವರ ಪುತ್ರ ಆಸ್ತಿಕ್ ರಾಘವ್ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜ್ ನಲ್ಲಿ ಪ್ರಥಮ ವರ್ಷದ...
ಮಡಪ್ಪಾಡಿ ಗ್ರಾಮದ ಕಾಯರಕಟ್ಟೆ ಮನೆ ದಿ| ಬಾಲಣ್ಣ ಗೌಡ ರವರ ಪತ್ನಿ ಸೀತಮ್ಮ ರವರು ಇಂದು ಸ್ವಗೃಹದಲ್ಲಿ ನಿಧನರಾದರು.ಇವರಿಗೆ 90 ವರ್ಷ ವಯಸ್ಸಾಗಿತ್ತು.ಮೃತರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪೆರಾಜೆ ಗ್ರಾಮದ ಪೀಚೆ ಮನೆ ಪುರುಷೋತ್ತಮ ಗೌಡರ ಮಗ ದೀಕ್ಷಿತ್(30) ಅನಾರೋಗ್ಯದಿಂದ ನಿಧನರಾದ ಘಟನೆ ಜು.18ರಂದು ನಡೆದಿದೆ.ಹಠಾತ್ ಅಸೌಖ್ಯಕ್ಕೊಳಗಾದ ದೀಕ್ಷಿತ್ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಅದರಂತೆ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಮೃತರು ತಾಯಿ...
ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 24 ವರ್ಷ ಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಯೋಗೀಶ್(42) ರವರು ಜು.16 ರಂದು ನಿಧನರಾದರು. ಮೃತರು ತಾಯಿ ಮೀನಾಕ್ಷಿ, ಪತ್ನಿ ಲಲಿತಾ(ರೇಶ್ಮಾ), ಪುತ್ರರಾದ ಧನುಷ್ ಹಾಗೂ ಗೌಶಿಕ್ ರನ್ನು ಅಗಲಿದ್ದಾರೆ.
ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಹ್ಮಣ್ಯ ನಿವಾಸಿಯಾದ ಸುಬ್ರಹ್ಮಣ್ಯದಲ್ಲಿ ಪಂಕ್ಚರ್ ಅಂಗಡಿ ನಡೆಸುತ್ತಿದ್ದ ಬಾಲಗೋಪಾಲ್ ಸುಬ್ರಹ್ಮಣ್ಯ ರವರು ಜು.12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅಸೌಖ್ಯದಿಂದಿದ್ದ ಅವರಿಗೆ 60 ವರ್ಷ ವಯಸ್ಸಾಗಿತ್ತು.ಗುತ್ತಿಗಾರಿನಲ್ಲಿ ಟಯರ್ ವರ್ಕ್ಸ್ ಅಂಗಡಿಯನ್ನು ನಡೆಸುತ್ತಿದ್ದ ಅವರು ಕಳೆದ 15 ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ರಶ್ಮಿ ಅಟೋ ವರ್ಕ್ಸ್ ಎಂಬ ಶಾಪ್ ಅನ್ನು ನಡೆಸುತ್ತಿದ್ದರು.ಮೃತರು...
Loading posts...
All posts loaded
No more posts
