- Wednesday
- September 23rd, 2026
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡತೋಟ ವಲಯದ ನೂತನ ಕಚೇರಿ ಹಾಗೂ ಗ್ರಾಹಕ ಸೇವಾ ಕೇಂದ್ರದ ಉದ್ಘಾಟನೆ ಜು.14 ರಂದು ಬಾಲಾಜಿ ಟ್ರೇಡರ್ಸ್ ಕಟ್ಟಡದಲ್ಲಿ ನೆರವೇರಿತು. ಕೇಂದ್ರ ಒಕ್ಕೂಟದ ಅಧ್ಯಕ್ಷ ಯತೀಶ್ ರೈ, ಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಶಿಕಲ, ಕಟ್ಟಡ ಮಾಲಕ ಕೃಷ್ಣಕುಮಾರ್ ಭಟ್, ವಲಯ ಅಧ್ಯಕ್ಷ ಭಾಸ್ಕರ್ ರಾವ್ ನೂತನ ಕಚೇರಿಯನ್ನು...
ಸೇವಾಜೆ ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸೇವಾಜೆ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ದೇವಚಳ್ಳ ಗ್ರಾಮ ಪಂಚಾಯಿತ್ ವ್ಯಾಪ್ತಿಗೆ ಒಳಪಟ್ಟ ಸೇವಾಜೆಯ 8 ಬಡ ಕುಟುಂಬಗಳಿಗೆ ತಳೂರು ಪಡಿತರ ಕೇಂದ್ರಕ್ಕೆ ಬಂದು ಪಡಿತರ ಪಡೆಯಲು ಸುತ್ತು ಬಳಸಿ ಬರಬೇಕಾಗಿತ್ತು. ಇಲ್ಲಿಗೆ ಬರುವುದು ಬಡವರಿಗೆ ಹೊರೆಯಾಗುವುದನ್ನು ಮನಗಂಡು ಮಳೆ ಸಂಪೂರ್ಣ ಮುಗಿಯುವ ತನಕ ಮರ್ಕಂಜ ಪ್ರಾ. ಕೃ. ಪ....
ಸಂಪಾಜೆ ಗ್ರಾಮದ ಪೆಲ್ತಡ್ಕ ಪದ್ಮನಾಭ ಹಾಗೂ ಶೇಷಪ್ಪ ಅವರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ಮಾಡಿ ತೆಂಗು ಅಡಿಕೆ, ಬಾಳೆ ಗಿಡಗಳ ನಾಶ ಮಾಡಿ ಅಪಾರ ನಷ್ಟ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ಪಾಲಕ ಚಂದ್ರು, ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್, ಹನೀಫ್ ಎಸ್. ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು....
ಇಬ್ಬನಿ ಕ್ರಿಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ "ಪ್ರೇಮಯಾನ" ಆಲ್ಬಂ ಹಾಡು ಇಂದು ಬಿಡುಗಡೆಯಾಗಿದೆ. ಲೀಲಾಕುಮಾರಿ ತೊಡಿಕಾನರವರ ಸಾಹಿತ್ಯವನ್ನು ಮಹಾಲಿಂಗ ಮೈಸೂರುರವರು ಹಾಡಿದ್ದಾರೆ. ಸುಳ್ಯದ ಪ್ರತಿಭೆಗಳಾದ ಶರತ್ ಮಾಸ್ತಿ ಮತ್ತು ಸಾಯಿಶೃತಿ ನಟಿಸಿದ್ದಾರೆ.ಹಾಡನ್ನು ಕೇಳಲು ಈ ಕೆಳಗಿನ ಲಿಂಕ್ ಬಳಸಿ.https://youtu.be/JNfyOzLZZM0 https://youtu.be/JNfyOzLZZM0
ದೇವಚಳ್ಳ ಗ್ರಾಮದ ಮಂಜೋಳುಕಜೆ ಪವನ ಕುಮಾರ್ ರವರ ಮನೆ ಮೇಲೆ ಜು.14 ರಂದು ದೊಡ್ಡ ಗಾತ್ರದ ಮರವೊಂದು ಬಿದ್ದು ಮನೆಯ ಚಾವಣಿ ಸಂಪೂರ್ಣ ಹಾನಿಯಾಗಿದೆ. ಸುದ್ದಿ ತಿಳಿದು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಪ್ರಶಾಂತ್ ಮೆದು, ದುರ್ಗದಾಸ್ ಮೆತ್ತಡ್ಕ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. ಹಾಗೂ ಶ್ರೀ ವಿಷ್ಣು ವಿಶ್ವ ಹಿಂದೂ ಪರಿಷತ್...
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆಯು ಜು.15 ರಂದು ನಡೆಯಿತು. ಅರ್ಚಕ ವೆಂಕಟ್ರಾಮ್ ಭಟ್ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ, ಮಿತ್ತೂರು ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ಕಟ್ಟಡ ಸಲಹಾ ಸಮಿತಿ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು,...
ಜೂನ್ 15ರಂದು ಸುರಿದ ಭಾರಿ ಮಳೆಗೆ ಮರ್ಕಂಜ ಗ್ರಾಮದ ಜನಾರ್ಧನ ನಾಯ್ಕರವರು ನಿರ್ಮಿಸುತ್ತಿರುವ ನೂತನ ಮನೆಯ ಹಿಂಬದಿಯ ಬರೆ ಕುಸಿದಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಓಮನಎನ್.ಕೆ. ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದಾರೆ. ಸುಬ್ರಹ್ಮಣ್ಯಕ್ಕೆ ಪುತ್ತೂರು ನಗರ ಠಾಣೆ ಎಸ್.ಐ. ಜಂಬೂರಾಜ್ ಮಹಾಜನ್ ಬರಲಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ಮಡಪ್ಪಾಡಿ ಒಕ್ಕೂಟದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರ ಲಾಭಾಂಶ ವಿತರಣಾ ಕಾರ್ಯಕ್ರಮವು ಹಣ ಸಂಗ್ರಹಣ ಕೇಂದ್ರ ಮಡಪ್ಪಾಡಿ ದಲ್ಲಿ ನಡೆಯಿತು .ಒಟ್ಟು ಒಕ್ಕೂಟದಲ್ಲಿ 43 ಸಂಘಗಳಿಗೆ ಲಾಭಾಂಶ ವಿತರಣೆ ನಡೆದಿದ್ದು ಸಾಂಕೇತಿಕವಾಗಿ ರತ್ನ ಶ್ರೀ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆಯ...
ಲಾಭಾಂಶ ವಿತರಣೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.14 ರಂದು ಯೇನೆಕಲ್ಲು ಒಕ್ಕೂಟದ 41 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯೇನೆಕಲ್ಲು ಒಕ್ಕೂಟದ ಸ್ಥಾಪಕಾಧ್ಯಕ್ಷರು ಹಾಗೂ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿಯಾಗಿರುವ ಶಿವಪ್ರಸಾದ್...
Loading posts...
All posts loaded
No more posts
