- Wednesday
- September 23rd, 2026
ಜೀರ್ಮುಖಿ- ಬೊಮ್ಮಾರು ಸಂಪರ್ಕಿಸುವ ರಸ್ತೆಯು ಮಂದ್ರಪ್ಪಾಡಿ ಬಳಿ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಗಟ್ಟಿಗಾರು ಶಾಲೆ ಸೇರಿದಂತೆ ಈ ರಸ್ತೆ ಸುಮಾರು ೫೦ ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು ಪ್ರತೀ ವರ್ಷ ರಸ್ತೆ ಕೆಸರುಮಯವಾಗಿರುವುದರಿಂದ ಇಲ್ಲಿನ ನಿವಾಸಿಗಳು ಸಂಕಷ್ಟ ಪಡುತ್ತಿದ್ದಾರೆ. ಸೇವಾಜೆ ರಸ್ತೆಗೆ ಪರ್ಯಾಯ ಮಾರ್ಗ: ಸದ್ಯ ಸೇವಾಜೆಯಲ್ಲಿ ಸೇತುವೆಯಾಗುತ್ತಿದ್ದು ಮರ್ಕಂಜ- ಅರಂತೋಡು ರಸ್ತೆ...
ಸುಳ್ಯ ತಾಲೂಕಿನ ಉಬರಡ್ಕ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು ಹಿಂದು ರುದ್ರ ಭೂಮಿ ಕೆಲವು ವರ್ಷಗಳ ಹಿಂದೆ ನಿರ್ಮಾಣವಾಗಿ ಸರಕಾರವು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಿತ್ತು.. ನೂರಾರು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದಿದ್ದರು.ಆದರೆ ಕೆಲವು ರಾಜಕೀಯ ಮುಖಂಡರು ರಾಜಕೀಯ ದುರುದ್ದೇಶದಿಂದ ಕಳೆದ ರಾತ್ರಿ ಅಪಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ತಂದು ಶವಸಂಸ್ಕಾರ ಮಾಡಲು ಮುಂದಾದಾಗ ಅದನ್ನು ವಿರೋಧಿಸಿ ಹಿಂದೂ...
ರಾಜೀವ್ ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಪಿ.ರಾಜೀವ್ ರವರಿಗೆ ಚಾಮರಾಜನಗರ ತಾಲೂಕಿಗೆ ಕ್ಷೇತ್ರಸಂಪನ್ಮೂಲ ಅಧಿಕಾರಿಯಾಗಿ ಭಡ್ತಿಗೊಂಡು ಜೂ.27ರಂದುವರ್ಗಾವಣೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜೀವ್ ರವರು ಮೂಲತಃಚಾಮರಾಜನಗರದವರಾಗಿದ್ದು, ಮುಖ್ಯೋಪಾಧ್ಯಾಯರಾಗಿಮರ್ಕಂಜ ಪ್ರೌಢಶಾಲೆಗೆ ನೇಮಕಗೊಂಡಿದ್ದರು.ಮರ್ಕಂಜ ಪ್ರೌಢಶಾಲೆಗೆಅಚ್ಚುತ ತೇರ್ಥಮಜಲು ರವರನ್ನು ಪ್ರಭಾರಮುಖ್ಯೋಪಾಧ್ಯಾಯರಾಗಿ ನೇಮಿಸಲಾಗಿದೆ.
ಗೂನಡ್ಕ ಬೀಜದಕಟ್ಟೆ ನಿವಾಸಿ ರಾದಮ್ಮ ಪೂಜಾರಿಯವರಿಗೆ ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆಯಡಿಯಲ್ಲಿ ಮನೆ ದುರಸ್ತಿಗೆ ರೂ 12500 ಸಹಾಯಧನ ಚೆಕ್ಕನ್ನು ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್, ಸದಸ್ಯರುಗಳಾದ ಜಗದೀಶ್ ರೈ, ಸುಮತಿ ಶಕ್ತಿವೇಲು, ಎಸ್ ಕೆ. ಹನೀಫ್, ಗ್ರಾಮ ಕರಣಿಕರಾದ ಮಿಯಾ ಶಾಬ್...
ಉಬರಡ್ಕ ಮಿತ್ತೂರು ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲಿನಲ್ಲಿರುವ ಸಾರ್ವಜನಿಕ ಮುಕ್ತಿಧಾಮ ಹಿಂದೂ ರುದ್ರ ಭೂಮಿಯ ಗೇಟಿಗೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಸೇರಿ ಬೀಗ ಹಾಕಿರುವುದನ್ನು ಖಂಡಿಸಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯವರು ಸುಳ್ಯ ತಾಲೂಕು ತಹಶೀಲ್ದಾರರವರಿಗೆ ಹಾಗೂ ಇ.ಒ ರವರಿಗೆ ಜು 28 ರಂದು ಮನವಿ ಸಲ್ಲಿಸಿದರು.ಕೊಡಿಯಾಲಬೈಲಿನಲ್ಲಿರುವ ಹಿಂದೂ...
ಪೆರಾಜೆ ಗ್ರಾಮದ ಕುಂಟಿಕಾನ ಕಮಲಾಕ್ಷ ಅವರು ಅಲ್ಪಕಾಲದ ಅಸೌಖ್ಯದಿಂದ ಜು. 27ರಂದು ನಿಧನರಾದರು.ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಜಾನಕಿ, ಪುತ್ರರಾದ ಯತೀಶ, ರಾಮಚಂದ್ರ, ಪುತ್ರಿ ಲೀಲಾವತಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧವಾಗಿ ಆಯ್ಕೆಯಾದರು.ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯ ಪ್ರಕ್ರೀಯೆಯನ್ನು ಸಹಕಾರ ಸಂಘದ ಹಿರಿಯ ನಿರೀಕ್ಷಕರಾದ ಶಿವಲಿಂಗಯ್ಯ.ಎಂ ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟರು.ಸಂಘದ ನಿರ್ದೇಶಕರಾದ ಕೇಶವ ಕುಂದರ್ ,ಪುಷ್ಪರಾಜ್ ಬಿ.ಎನ್,ಇಬ್ರಾಹಿಂ...
ಕೊಡಿಯಾಲಬೈಲು ಗಾಂಧಿ ವನದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ 3ನೇ ವರ್ಷದ ವನ ಮಹೋತ್ಸವಪಶುಸಂಗೋಪನಾ ಇಲಾಖೆ ಸುಳ್ಯ, ಅರಣ್ಯ ಇಲಾಖೆ ಸುಳ್ಯ ಹಾಗೂ ಗಾಂಧಿ ಚಿಂತನೆ ವೇದಿಕೆ ಸುಳ್ಯ ಇವರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಾದ ನಾಗರಿಕ ಹೋರಾಟ ಸಮಿತಿ ಕೊಡಿಯಾಲಬೈಲು, ಮಹಮ್ಮಾಯಿ ಸೇವಾ ಸಮಿತಿ ಕೊಡಿಯಾಲಬೈಲು, ಶ್ರೀವಿಷ್ಣು ಯುವಕ ಮಂಡಲ ಅಮೈ ಕೊಡಿಯಾಲಬೈಲು, ವರಲಕ್ಷ್ಮಿ ಯುವತಿ...
Loading posts...
All posts loaded
No more posts
