ಕುಕ್ಕೇಟಿ ಕೂಸಪ್ಪ ಗೌಡ ನಿಧನ

ಮಂಡೆಕೋಲು ಗ್ರಾಮದ ಕುಕ್ಕೇಟಿ ಕೂಸಪ್ಪ ಗೌಡ(89)ರವರು ಆ.16ರಂದು ಮಧ್ಯರಾತ್ರಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಯಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ ಶ್ರೀಮತಿ ಚಿನ್ನಮ್ಮ, ಪುತ್ರರಾದ ದೇವಯ್ಯ, ಪೂವಯ್ಯ, ರಾಘವ, ರಾಮಚಂದ್ರ, ಪುತ್ರಿಯರಾದ ಪುಷ್ಪಾವತಿ, ಮಮತಾ, ಚಿತ್ರಲೇಖ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಕಾಣಿಯೂರು: ವಿನೂತನ ಹುಟ್ಟು ಹಬ್ಬಕ್ಕೆ ಸಾಕ್ಷಿಯಾದ ಚಾರ್ವಾಕದ ಯುವಕ

ಕಡಬ ತಾಲೂಕಿನ ಕಾಣಿಯೂರಿನ ಚಾರ್ವಾಕದ ಯುವಕ ರಾಜೇಶ್ ತನ್ನ ಹುಟ್ಟು ಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಿಕೊಂಡು ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಪ್ರತಿಯೊಬ್ಬರೂ ಹುಟ್ಟು ಹಬ್ಬವನ್ನು ಒಂದು ರೀತಿಯಲ್ಲಿ ಮೋಜು ಮಸ್ತಿಯೊಂದಿಗೆ ಆಚರಿಸುತ್ತಾರೆ. ಆದರೆ ಅದಕ್ಕೆ ಅಪವಾದವೆಂಬಂತೆ ಚಾರ್ವಾಕದ ಯುವಕ ಶ್ರೀ ದುರ್ಗಾ ಅರ್ಥ್ ಮೂವರ್ಸ್ ಮಾಲೀಕ ರಾಜೇಶ್ ಚಾರ್ವಾಕ ತೀರ ಬಡಕುಟುಂಬದ ಶೇಖರ ಪೂಜಾರಿ ಅವರ...
Ad Widget

ಕಬಕದ ಘಟನೆಯ ಕುರಿತು ಕ್ರಮ ಕೈಗೊಳ್ಳದಿದ್ದರೆ ಮುಂದೆ ನಮಗೂ ಅಫ್ಘಾನಿಸ್ತಾನದ ಗತಿಬರಬಹುದು- ಹರೀಶ್ ಕಂಜಿಪಿಲಿ

‌ಸುಳ್ಯ: ಅಮೃತ ಮಹೋತ್ಸವದ ಹಿನ್ನಲೆ ಎಲ್ಲಾ ಗ್ರಾ.ಪಂ‌. ಮಟ್ಟದಿಂದಲೂ ಅಮೃತ ಮಹೋತ್ಸವವನ್ನು ಕೇಂದ್ರ ಸರಕಾರದ ನಿರ್ದೇಶನದಂತೆ ಆಚರಿಸಲಾಗಿತ್ತು. ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ವೀರ ಸಾವರ್ಕರ್ ಅವರ ಫೋಟೋವನ್ನು ಹರಿದು ಟಿಪ್ಪು ಫೋಟೋ ಹಾಕಬೇಕು ಎಂಬ ನೆಪವೊಡ್ಡಿ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಫೋಟೋ ಹರಿದು ಹಾಕಿ ಅವಮಾನ ಮಾಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದೆ....

ಬೆಳ್ಳಾರೆ :ಎಸ್.ಡಿ.ಪಿ.ಐ ಮತ್ತು ಪಿ.ಫ್.ಐ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದೂ ಸಂಘಟನೆಯಿಂದ ಪ್ರತಿಭಟನೆ, ಮನವಿ ಸಲ್ಲಿಕೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಬೆಳ್ಳಾರೆ ಇದರ ವತಿಯಿಂದ ಇಂದು ಬೆಳಿಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯ ಮುಂಭಾಗ ಎಸ್.ಡಿ.ಪಿ.ಐ ಮತ್ತು ಪಿ.ಫ್.ಐ ಸಂಘಟನೆಯನ್ನು ನಿಷೇಧಿಸಲು ಮತ್ತು ಕಬಕದಲ್ಲಿ ಸ್ವಾತಂತ್ರ್ಯೋತ್ಸವದ ದಿನ ರಥಯಾತ್ರೆಯನ್ನು ತಡೆದು ನಿಲ್ಲಿಸಿ ಬಂಧಿತರಾಗಿರುವ ಎಸ್.ಡಿ.ಪಿ.ಐ ಕಾರ್ಯಕರ್ತರ ಮೇಲೆ ದೇಶದ್ರೋಹ ಕೇಸು ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಬಳಿಕ...

ಸುಬ್ರಹ್ಮಣ್ಯ: ಶಾಲಾ ವತಿಯಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ

ಈ ಸಲದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಅನನ್ಯ.ಎಂ.ಡಿ ಹಾಗೂ ವೆನೆಸ್ಸಾ ಶರೀನಾ ಡಿ'ಸೋಜ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಈ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಅಲ್ಲದೇ ಸಂಸ್ಥೆಯಲ್ಲಿ 'ಎ ಪ್ಲಸ್'...

ಬೆಳ್ಳಾರೆ :ಎಸ್.ಡಿ.ಪಿ.ಐ ಮತ್ತು ಪಿ.ಫ್.ಐ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದೂ ಸಂಘಟನೆಯಿಂದ ನಾಳೆ ಪ್ರತಿಭಟನೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಬೆಳ್ಳಾರೆ ಇದರ ವತಿಯಿಂದನಾಳೆ (ಆ.17) ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ ಬೆಳ್ಳಾರೆ ಪೊಲೀಸ್ ಠಾಣೆಯ ಮುಂಭಾಗ ಎಸ್.ಡಿ.ಪಿ.ಐ ಮತ್ತು ಪಿ.ಫ್.ಐ ಸಂಘಟನೆಯನ್ನು ನಿಷೇಧಿಸಲು ಮತ್ತು ಕಬಕದಲ್ಲಿ ಸ್ವಾತಂತ್ರ್ಯೋತ್ಸವದ ದಿನ ರಥಯಾತ್ರೆಯನ್ನು ತಡೆದು ನಿಲ್ಲಿಸಿ ಬಂಧಿತರಾಗಿರುವ ಎಸ್.ಡಿ.ಪಿ.ಐ ಕಾರ್ಯಕರ್ತರ ಮೇಲೆ ದೇಶದ್ರೋಹ ಕೇಸು ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ...

ಕಳಂಜ ಗ್ರಾಮ ಪಂಚಾಯತ್ ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವೈಫೈ ವ್ಯವಸ್ಥೆ

ಕೋವಿಡ್ ಕಾರಣದಿಂದ ಶಾಲೆಗಳು ಪುನರಾರಂಭವಾಗದೆ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಿದ್ದರೂ ಸರ್ಕಾರವು ಆನ್ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅಂತರ್ಜಾಲದ ಸಮಸ್ಯೆಯಿರುವುದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಡಕುಂಟಾಗಿರುತ್ತದೆ. ಇಂತಹ ವಿಷಮ ಪರಿಸ್ಥಿತಿಯನ್ನು ಮನಗಂಡು ಇದೀಗ ಕಳಂಜ ಗ್ರಾಮ ಪಂಚಾಯತ್ ನಿಂದ ವಿದ್ಯಾರ್ಥಿಗಳಿಗೆ ಉಚಿತ ವೈಫೈ ಸೌಲಭ್ಯವನ್ನು...

ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿಯಾಗಿ ಚಂದ್ರಾಕ್ಷಿ ಜೆ ರೈ ಆಯ್ಕೆ

ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿಯಾಗಿ ಶ್ರೀಮತಿ ಚಂದ್ರಾಕ್ಷಿ ಜೆ ರೈ ಯವರು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷೆಯಾಗಿ ಶ್ರೀಮತಿ ಹರಿಣಿ ಸದಾಶಿವ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಳ್ಯ ತಾಲೂಕಿನಿಂದ ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ, ಶ್ರೀಮತಿ ಹರ್ಷಾ ಕರುಣಾಕರ, ಶ್ರೀಮತಿ ತ್ರಿವೇಣಿ ದಾಮ್ಲೆ ಮತ್ತು ಶ್ರೀಮತಿ ಸುಮನಾ ಕ್ರಪಾಶಂಕರ್ ಆಯ್ಕೆಯಾಗಿರುತ್ತಾರೆ.

ಸ್ನೇಹ ಶಾಲೆಯಲ್ಲಿ ಸಾಧಕರಿಗೆ ಸನ್ಮಾನ

ಸ್ನೇಹ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.16 ರಂದು ನಡೆಯಿತು. 10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ 14 ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಶಾಲು ಹೊದಿಸಿ ಪುಸ್ತಕಗಳನ್ನು ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ತುಷಾರ್ ಡಿ.ಕೆ, ಶಿವಶರಣ ಹೊಳ್ಳ ಎನ್,...

ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದು ಸಂಘಟನೆಗಳಿಂದ ನಾಳೆ ಠಾಣೆಯ ಎದುರು ಪ್ರತಿಭಟನೆ

ಕಬಕದಲ್ಲಿ ಸ್ವಾತಂತ್ರ್ಯ ದಿನ ರಥಯಾತ್ರೆಯನ್ನು ತಡೆದು ನಿಲ್ಲಿಸಿ ಬಂಧಿತರಾಗಿರುವ ಎಸ್ ಡಿ ಪಿ ಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಕೇಸು ದಾಖಲಿಸಿವಂತೆ ಹಾಗೂ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಹಿಂದು ಜಾಗರಣ ವೇದಿಕೆಯ ವತಿಯಿಂದ ಪ್ರತಿಭಟನೆ ಹಾಗೂ ಮನವಿ...
Loading posts...

All posts loaded

No more posts

error: Content is protected !!