- Thursday
- September 24th, 2026
ಸುಳ್ಯ: 2014 ರ ಲೋಕಸಭಾ ಚುನಾವಣೆಯ ಸಂದರ್ಭ ಹರೀಶ್ ಕಂಜಿಪಿಲಿ ಮತ್ತು ತಂಡದವರು ಅಂದಿನ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಸರಸ್ವತಿ ಕಾಮತ್ ಅವರ ಮೇಲೆ ಮಾಡಿದ್ದಾರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.೬ ರಂದು ಸುಳ್ಯ ನ್ಯಾಯಾಲಯದಲ್ಲಿ ತೀರ್ಪು ಹೊರಬಂದಿದ್ದು ಹರೀಶ್ ಕಂಜಿಪಿಲಿ ಮತ್ತವರ ತಂಡಕ್ಕೆ ಶಿಕ್ಷೆ ನಿಗದಿಯಾಗಿದೆ. ಘಟನೆಯ ಹಿನ್ನಲೆ: 2014 ರ ಲೋಕಸಭಾ ಚುನಾವಣೆಯ ಸಂದರ್ಭ ...
ಅಮರ ಮುಡ್ನೂರು ಗ್ರಾಮದ ಚಾಮಡ್ಕ ಫಾಲ್ಸ್ ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಇದೀಗ ಅಲ್ಲಿ ಅಪಾಯದ ಸ್ಥಿತಿಯಲ್ಲಿ ಮೋಜು ಮಸ್ತಿ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ನೀರಿನ ಹರಿವಿನಿಂದಾಗಿ ಕಲ್ಲುಗಳ ಪಾಚಿಕಟ್ಟಿದ್ದು ಹೆಚ್ಚಿನ ಯುವಕ - ಯುವತಿಯರು ಇತ್ತೀಚಿಗೆ ಈ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮೋಜಿಗೆ ಬಿದ್ದು ಪಾಚಿಗಟ್ಟಿದ ಕಲ್ಲುಗಳ ಮೇಲೆ ಓಡಾಡುತ್ತಿದ್ದಾರೆ.ಪ್ರವಾಸಿಗರಿಗೆ...
'ಬದುಕಿದರೆ ಹೀಗೆ ಬದುಕಬೇಕಲ್ಲವೇ?' ಎಂಬಂತೆ ಸದ್ದಿಲ್ಲದೆ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯ ಕೆಲಸವನ್ನು ಇಲ್ಲೋರ್ವ ಹಿರಿಯ ವ್ಯಕ್ತಿ ಮಾಡುತ್ತಿದ್ದಾರೆ. ಕಳಂಜ ಗ್ರಾಮದ ಎ.ಬಿ. ಮೊೖದ್ದಿನ್ ಎಂಬವರೇ ಈ ರೀತಿಯಾದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರು.ಇವರು ಹಲವಾರು ವರ್ಷಗಳಿಂದ ವಿದೇಶದಲ್ಲಿ ಕೆಲಸದಲ್ಲಿ ಇದ್ದು ಈಗ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಹಾಯಾಗಿ ಇರದೇ ತನ್ನದೇ ಆದ ವಿಶಿಷ್ಟ...
Soumya Durgaprasad meladthale ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ ಇದರ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸಭೆ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಗಿರಿಪ್ರಕಾಶ್ ಕಲ್ಲುಗದ್ದೆ ಯವರ ಅಧ್ಯಕ್ಷತೆ ಯಲ್ಲಿ ಆರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ.ಕುಮಾರಿ ಶ್ವೇತಾ ಅರಮನೆಗಯ, ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ ಮತ್ತು ಶ್ರೀಮತಿ...
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಸುಳ್ಯ ಡಿವಿಷನ್ ಸಮಿತಿಯ ಅರ್ಧವಾರ್ಷಿಕ ಕೌನ್ಸಿಲ್ 'ರಿವ್ಯೂ' ಡಿವಿಷನ್ ಅಧ್ಯಕ್ಷರಾದ ಎ.ಎಂ.ಫೈಝಲ್ ಝುಹ್‌ರಿ ಕಲ್ಲುಗುಂಡಿಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 5 ರವಿವಾರ, ಪೈಂಬೆಚ್ಚಾಲು ಎಚ್ಐ ಮದ್ರಸ ವಠಾರದಲ್ಲಿ ನಡೆಯಿತು. ಅಧ್ಯಕ್ಷರ ಪ್ರಾರ್ಥನೆಯೊಂದಿಗೆ ಚಾಲನೆಗೊಂಡ ಸಭೆಯನ್ನು ಪೈಂಬೆಚ್ಚಾಲು ಜಮಾಅತ್ ಪ್ರ.ಕಾರ್ಯದರ್ಶಿ ಬಿ.ಎಂ.ಇಸ್ಮಾಯಿಲ್ ಸಖಾಫಿ ಉದ್ಘಾಟಿಸಿದರು.ಪ್ರ.ಕಾರ್ಯದರ್ಶಿ ಹಸೈನಾರ್ ನೆಕ್ಕಿಲ...
ಐವರ್ನಾಡು ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಹಣ್ಣಿನ ಗಿಡಗಳ ಮಾಹಿತಿ ಕಾರ್ಯಕ್ರಮ ಇಂದು ಸೊಸೈಟಿ ಆವರಣದಲ್ಲಿ ನಡೆಯಿತು. ದಯಾಪ್ರಸಾದ್ ಜಿಮುಳ್ಳು ಅವರು ಹಣ್ಣಿನ ಗಿಡಗಳ ಕುರಿತು ಮಾಹಿ ತಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ 600 ಕ್ಕೆ 600 ಅಂಕ ಪಡೆದ ನಾಟಿಕೇರಿ ವಸಂತಕುಮಾರ ಮತ್ತು ಮೀನಾಕ್ಷಿ...
ಪೆರುವೋಡಿ : ಮುಕ್ಕೂರುಜ್ಯೋತಿ ಯುವಕ ಮಂಡಲ,ಯುವಸೇನೆ ಮುಕ್ಕೂರುಧರ್ಮಸ್ಥಳ ಗ್ರಾಮಾಭಿವೃದ್ದಿ ಸ್ವ ಸಹಾಯ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಸೆ.5 ರಂದು ಪೆರುವೋಡಿ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಅರ್ಚಕ ಸುರೇಶ್ ಉಪಾಧ್ಯಾಯ ದೀಪ ಬೆಳಗಿಸಿದರು. ಸತ್ಯಪ್ರಸಾದ್ ಕಂಡಿಪ್ಪಾಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಬೆಳ್ಳಾರೆ ಜೆಸೀಐ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಗ್ರಾ.ಪಂ.ಸದಸ್ಯೆ ಗುಲಾಬಿ...
ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಲು ಮಕ್ಕಳಿಂದಲೇ ಪ್ರಾರಂಭಗೊಂಡ ಚಿರಾಯು ಸ್ಟುಡೆಂಟ್ಸ್ ಕ್ಲಬ್‌ನ ಎರಡನೇ ಘಟಕ ಇದೀಗ ಪ್ರಾರಂಭಗೊಂಡಿದೆ. ಮಂಡೆಕೋಲಿನ ಕಣೆಮರಡ್ಕದಲ್ಲಿ ಪ್ರಾರಂಭಗೊಂಡ ಚಿರಾಯು ಸ್ಟುಡೆಂಟ್ಸ್ ಕ್ಲಬ್ ನ ಎರಡನೇ ಘಟಕದ ಉದ್ಘಾಟನೆಯನ್ನು ಮಂಡೆಕೋಲು ಗ್ರಾ.ಪಂ ಅಧ್ಯಕ್ಷೆ ವಿನುತಾ ಪಾತಿಕಲ್ಲು ಸೆ.5 ರಂದು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಆರಂಭದ ಹಂತದಲ್ಲೇ ಮಕ್ಕಳ ಪ್ರತಿಭೆ...
ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೆಪಿಎಸ್ ಬೆಳ್ಳಾರೆ ಇಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಪ್ರಸಾದ್ ಜಿ. ಇವರಿಗೆ ತಾಲೂಕು ಉತ್ತಮ ಸ್ಕೌಟ್ಸ್ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Loading posts...
All posts loaded
No more posts
