- Thursday
- September 24th, 2026
ಹಿಂದೂ ಐಕ್ಯ ವೇದಿ ದೇಲಂಪಾಡಿ ಘಟಕದ ವತಿಯಿಂದ ಸರಕಾರಿ ಆಯುರ್ವೇದ ಆಸ್ಪತ್ರೆ ವಠಾರದಲ್ಲಿ ಸೆ.12 ರಂದು ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.
ಸುಳ್ಯ ಕಸಬಾ ಸುಪ್ರೀತ್ ಮೋಂಟಡ್ಕ ಮತ್ತು ಲತಾಶ್ರೀ ಸುಪ್ರೀತ್ ಮೋಂಟಡ್ಕ ದಂಪತಿಗಳ ಪುತ್ರಿ ಸ್ನಿಗ್ಧ ಮೋಂಟಡ್ಕ ಇವಳ 8ನೇ ವರ್ಷದ ಹುಟ್ಟು ಹಬ್ಬವನ್ನು ಸುಳ್ಯ ಕೇರ್ಪಳ ಸಾನ್ವಿದ್ಯ ನಿಲಯದಲ್ಲಿ ಸೆ.12 ರಂದು ಆಚರಿಸಲಾಯಿತು
ಜೇಸೀ ಸಪ್ತಾಹದ ಪ್ರಯುಕ್ತ ಮ್ಯಾಟ್ರಿಕ್ಸ್ ಎಜುಕೇಷನ್ ಇನ್ಸ್ಟಿಟ್ಯೂಷನ್ ಸುಳ್ಯದಲ್ಲಿ ಮುಕ್ತ ಕೇರಂ ಪಂದ್ಯಾಟದ ಉದ್ಘಾಟನೆ ಸೆ.12ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಸಿಟಿಯ ಉಪಾಧ್ಯಕ್ಷ ಬಶೀರ್ ಯು ಪಿ ಬೆಳ್ಳಾರೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸಹಾಯಕ ಇಂಜಿನಿಯರ್ ಮಣಿಕಂಠರವರು ಪಂದ್ಯಾಟದ ಉದ್ಘಾಟನೆಗೈದರು. ಮುಖ್ಯ ಅತಿಥಿಗಳಾಗಿ ಪ್ರವೀಣ್ ಆಲೆಟ್ಟಿ ಮತ್ತು ಡಿಗ್ಯಾ ನಾಯ್ಕ್, ಘಟಕಾಧ್ಯಕ್ಷ ಚಂದ್ರಶೇಖರ್...
ಮಕ್ಕಳಿಗೆ ರೊಬೋಟಿಕ್ ಲ್ಯಾಬ್ ಮೂಲಕ ತರಬೇತಿ ನೀಡಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞನದ ಬಗ್ಗೆ ಕುತೂಹಲ ಹೆಚ್ಚಿಸಿ ಪ್ರೋತ್ಸಾಹ ನೀಡುವ ಟೆಕ್ ಅನ್ವೇಷಣದ ಟೆಕ್ ಸಂವೇದ ಸುಳ್ಯ ಶಾಖೆ ಶ್ರೀಹರಿ ವಾಣಿಜ್ಯ ಸಂಕೀರ್ಣದಲ್ಲಿರುವ ಜ್ಞಾನದೀಪ ಸಂಸ್ಥೆಯಲ್ಲಿ ಸೆ.9ರಂದು ಉದ್ಘಾಟನೆಗೊಂಡಿದೆ.ಮಾಣಿಬೆಟ್ಟು ಶಿವರಾಮ ಗೌಡರು ಉದ್ಘಾಟಿಸಿದರು. ಟೆಕ್ನೊ ಅನ್ವೇಷಣ ಮಂಡ್ಯದ ಸಂಚಾಲಕರಾದ ಅವಿನಾಶ್ ಎ. , ಟೆಕ್ ಸಂವೇದದ...
ದೆಹಲಿಯ ಸಿವಿಲ್ ಡಿಫೆನ್ಸ್ ಅಧಿಕಾರಿ ಸಾಬಿಯಾ ಸೈಫ್ ಮೇಲೆ ಅಮಾನವೀಯವಾಗಿ ಅತ್ಯಾಚಾರಗೈದು ಮೃಗೀಯವಾಗಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ಹಾಗೂ ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ಳಾರೆ ಜಂಟಿ ಆಶ್ರಯದಲ್ಲಿ ಸೆ.11ರಂದು ಬೆಳ್ಳಾರೆ ಬಸ್ಸು ತಂಗುದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಎಸ್.ಡಿ.ಪಿ.ಐ ರಾಜ್ಯ...
ಯಾರದ್ದೋ ಸಾಧನೆಗೆ ತೃಪ್ತಿ ಪಡಬೇಡಿ ಸ್ವತಃ ತಾವೇ ಸಾಧನೆ ಮಾಡಿ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಹೇಳಿದರು.ಅವರು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಹಾಗೂ ಎಸ್ ಡಬ್ಲ್ಯೂ ಎಪ್ ಯೋಜನೆಯ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದ ಅಡಿಯಲ್ಲಿ ಬರುವ ಕಲಿಕ ಚಟುವಟಿಕೆಗಳ ಕಂಪ್ಯೂಟರ್...
ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಸುಮಾರು 36 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಆ. 31ರಂದು ಸ್ವಯಂ ನಿವೃತ್ತಿ ಪಡೆದ ಶ್ರೀಮತಿ ರಾಜೀವಿ ಎಂ.ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸೆ. 11ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಅಮರಪಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಮಚಂದ್ರ ದೀಪ ಬೆಳಗಿಸಿ...
ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂರ್ವ ಸಂಪ್ರದಾಯದಂತೆ ಸೆ.13ರಂದು ಹೊಸ್ತಾರೋಗಣೆ (ನವಾನ್ನ ಪ್ರಸಾದ) ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಕದಿರು ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರಾತಃಕಾಲ 5.15ಕ್ಕೆ ಸರಿಯಾಗಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಪೂರ್ವಾಹ್ನ ಗಂಟೆ 7.30ಕ್ಕೆ ತೆನೆ ತರುವುದು, ಕದಿರು ಪೂಜೆ ನಡೆಯಲಿದೆ. ಬಳಿಕ ದೇವಳದ...
ಜೇಸಿಐ ಬೆಳ್ಳಾರೆ ಮತ್ತು ಯುವ ಜೇಸೀ ವಿಭಾಗ ಬೆಳ್ಳಾರೆ ಇದರ ಜೇಸೀ ಸಪ್ತಾಹ 2021 ಸಪ್ತ ಕಲೋತ್ಸವದ ಅಂಗವಾಗಿ ವಲಯಾಧ್ಯಕ್ಷರ ಭೇಟಿ ಸೆ.11 ರಂದು ನಡೆಯಿತು. ಬೆಳಿಗ್ಗೆ ಶಾಶ್ವತ ಯೋಜನೆಗಳ ಅನಾವರಣ ಕಾರ್ಯಕ್ರಮದ ಅಂಗವಾಗಿ ನೆಟ್ಟಾರು ಶಾಲೆಗೆ ನೀರಿನ ಟ್ಯಾಂಕ್ ಮತ್ತು ನಾಮಫಲಕವನ್ನು ಕೊಡುಗೆಯಾಗಿ ನೀಡಲಾಯಿತು. ನಂತರ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸಭಾ...
ಸರಸ್ವತಿ ಕಾಮತ್ ಅವರ ಆರೋಪ ದುರುದ್ದೇಶಪೂರಿತವಾಗಿದೆ. ಆದರೂ ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಹರೀಶ್ ಕಂಜಿಪಿಲಿ ಅವರು ತಪ್ಪು ಮಾಡಿಲ್ಲ ಎಂದು ನಾವು ಮೇಲಿನ ನ್ಯಾಯಾಲಯದಲ್ಲಿ ಸಾಬೀತುಪಡಿಸುತ್ತೇವೆ ಎಂದು ರಾಜ್ಯ ರೈತಮೋರ್ಚಾದ ಉಪಾಧ್ಯಕ್ಷ ಎ.ವಿ ತೀರ್ಥರಾಮ ಅವರು ಹೇಳಿದರು. ಸುಳ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕಂಜಿಪಿಲಿ ಅವರು ಬಿಜೆಪಿ ಮಂಡಲದ ಆಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ...
Loading posts...
All posts loaded
No more posts
