ಮಾ.03 : ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲಿನ ಉಚಿತ ತಪಾಸಣಾ ಶಿಬಿರ

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಶ್ರವಣ ದಿನದ ಪ್ರಯುಕ್ತ ಮಾ.03 ಶುಕ್ರವಾರದಂದು ಬೆಳಿಗ್ಗೆ ಕಿವಿ ಮೂಗು ಗಂಟಲಿನ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ನುರಿತ ತಜ್ಞರಿಂದ ತಪಾಸಣೆ ನಡೆಸಲಾಗುವುದು, ಆದುದರಿಂದ 0-6 ವರ್ಷದ ಮೂಗು, ಗಂಟಲು ಕಿವಿಯ ಯಾವುದೇ ಸಮಸ್ಯೆ ಇರುವ ಮಕ್ಕಳನ್ನು ತಪಾಸಣಾ ಶಿಬಿರಕ್ಕೆ ಕರೆ ತರಬೇಕಾಗಿ ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ ತಿಳಿಸಿದ್ದಾರೆ.

ಮಾ.9: ಅಲೆಕ್ಕಾಡಿಯಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ

ಅಲೆಕ್ಕಾಡಿ ಶಾಲಾ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರ ವತಿಯಿಂದ ಮಾ.9ರಂದು ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.ಎಂದು ಪ್ರಾಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad Widget

ಗುತ್ತಿಗಾರು : ಮಾ.3 ಮತ್ತು 4 ರಂದು ಮುತ್ತಪ್ಪ ತಿರುವಪ್ಪ ದೈವದ ಪುನರ್ ಪ್ರತಿಷ್ಠೆ ಹಾಗೂ ಜಾತ್ರೋತ್ಸವ

ಗುತ್ತಿಗಾರು : ಮಾ.3 ಮತ್ತು 4 ರಂದು ಮುತ್ತಪ್ಪ ತಿರುವಪ್ಪ ದೈವದ ಪುನರ್ ಪ್ರತಿಷ್ಠೆ ಹಾಗೂ ಜಾತ್ರೋತ್ಸವ ಗುತ್ತಿಗಾರಿನ ಮುತ್ತಪ್ಪನಗರದಲ್ಲಿರುವ ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಮಾ. 03 ಮತ್ತು ಮಾ. 04 ರಂದು ಪುನರ್ ಪ್ರತಿಷ್ಠೆ ಹಾಗೂ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ.ಮಾ....

ಅಚ್ರಪ್ಪಾಡಿ ಶಾಲೆಗೆ ಕ್ರಿಯಾಶೀಲ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಪ್ರಶಸ್ತಿ

ಮಾಣಿಯಲ್ಲಿ ಮಾ.1 ರಂದು ನಡೆದ ಕರ್ನಾಟಕ ರಾಜ್ಯ ಎಸ್‌.ಡಿ.ಎಂ.ಸಿ ಸಮನ್ವಯ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಎಸ್‌ಡಿಎಂಸಿ ಯ 21ನೇ ವರ್ಷಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಳ್ಯ ತಾಲೂಕಿನ ಅಚ್ರಪ್ಪಾಡಿ ಶಾಲೆಯು ತಾಲೂಕು ಮಟ್ಟದ "ಕ್ರಿಯಾಶೀಲ ಶಾಲಾಭಿವೃದ್ಧಿ ಮತ್ತು...

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ – ಸನ್ಮಾನ ಮತ್ತು ಗೌರವ ಸಮರ್ಪಣಾ ಸಮಾರಂಭ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.24 ರಂದು ಬೃಹತ್ ರಕ್ತದಾನ ಶಿಬಿರ ಹಾಗೂ ವಾರ್ಷಿಕ ಸಭಾ ಕಾರ್ಯಕ್ರಮ ನಡೆಯಿತು. ಹಾಗೂ ಈ ಸಂದರ್ಭದಲ್ಲಿ ಸನ್ಮಾನ ಹಾಗೂ ಗೌರವಾರ್ಪಣಾ ಸಮಾರಂಭ ನಡೆಯಿತು.ಬೆಳಿಗ್ಗೆ ರೆಡ್ ಕ್ರಾಸ್ ಸೊಸೈಟಿ, ಗುತ್ತಿಗಾರು ಗ್ರಾಮ ಪಂಚಾಯತ್, ಸರಕಾರಿ ಆಸ್ಪತ್ರೆಯ ಸಹಕಾರದೊಂದಿಗೆ ಸರಕಾರಿ ಆಸ್ಪತ್ರೆ ಗುತ್ತಿಗಾರು ಇಲ್ಲಿ ರಕ್ತದಾನ ಶಿಬಿರ ನಡೆಯಿತು.ರಕ್ತದಾನ...

ಪಾಲೆಪ್ಪಾಡಿ ಶ್ರೀ ಇರ್ವೆರ್ ಉಳ್ಳಾಕ್ಲು ದೈವಸ್ಥಾನ ಮತ್ತು ಪಂಜುರ್ಲಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ – ದೈವಗಳ ನೇಮೋತ್ಸವ

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀ ಇರ್ವೆರ್ ಉಳ್ಳಾಕ್ಲು, ಪರಿವಾರ ದೈವಗಳ ಮತ್ತು ಪಾಲೆಪ್ಪಾಡಿ ಶ್ರೀ ಪಂಜುರ್ಲಿ ದೈವದ ಹಾಗೂ ದರ್ಖಾಸ್ತು ಉಳ್ಳಾಕ್ಲು,ಅಡ್ಯಂತಾಯ ಕಟ್ಟೆಯ ನವೀಕರಣ ಪ್ರತಿಷ್ಠಾ ಕಲಶವು ಫೆ.23 ರಿಂದ ಫೆ.27 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು. ಫೆ.23 ರಂದು ತಂತ್ರಿಗಳ ಆಗಮನದ...

ಶಾರದಾ ಕೊಂದಾಳ ನಿಧನ

ಕೊಲ್ಲಮೊಗ್ರ ಗ್ರಾಮದ ಕೊಂದಾಳ ವೆಂಕಟ್ರಮಣ ಗೌಡರ ಪತ್ನಿ ಶ್ರೀಮತಿ ಶಾರದಾ ಕೊಂದಾಳ ಫೆ. 28 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಪುತ್ರ ಚಿಂತನ್, ಪುತ್ರಿ ಚೈತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಸ್ಪರ್ಧಾ ಕಾರ್ಯಕ್ರಮವು ಜರುಗಿತು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ , ಸಂಘಟಕ , ಸಾಹಿತಿ ಮತ್ತು ಚಿತ್ರನಿರ್ದೇಶಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು...

ಅರಂತೋಡು : ಶ್ರೀ ಮಲ್ಲಿಕಾರ್ಜುನ ಫ್ಯೂಯಲ್‌ರವರ ನಯಾರಾ ಎನರ್ಜಿ ಪೆಟ್ರೋಲ್ ಪಂಪ್ ಲೋಕಾರ್ಪಣೆ

ಅರಂತೋಡಿನಲ್ಲಿ ನಿರ್ಮಾಣಗೊಂಡ ಶ್ರೀ ಮಲ್ಲಿಕಾರ್ಜುನ ಫ್ಯೂಯಲ್‌ರವರ ನಯಾರಾ ಎನರ್ಜಿ ಪೆಟ್ರೋಲ್ ಪಂಪ್ ಇಂದು ಲೋಕಾರ್ಪಣೆಗೊಂಡಿತು. ಪೆಟ್ರೋಲ್ ಬಂಕ್ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ ನೆರವೇರಿಸಿ ಮಾತನಾಡಿಗ್ರಾಹಕರಿಗೆ ಒಳ್ಳೆಯ ಅನುಕೂಲವಾಗಲಿ ,ಇಡೀ ಗ್ರಾಮವೇ ಮೆಚ್ಚುವಂತಹ ಕೆಲಸ ಪ್ರಹ್ಲಾದ್ ಕುಟುಂಬ ಮಾಡಿದೆ ಎಂದು ಶುಭ ಹಾರೈಸಿದರು. ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಾಹಿದ್ ಮಾತನಾಡಿ...

ಆಯುರ್ಧಾಮ ಆಸ್ಪತ್ರೆಯಲ್ಲಿ ಮೂಲವ್ಯಾಧಿ,ಪಿಸ್ಟುಲಾ,ಫಿಶರ್ ಹಾಗೂ ಗುದರೋಗಗಳ ತಪಾಸಣಾ ಶಿಬಿರ

ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ, ಪಿಸ್ಟುಲಾ,ಫಿಶರ್ ಹಾಗೂ ಗುದರೋಗಗಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮಾ.5 ರಂದು ನಡೆಯಲಿದೆ.ಪೈಲ್ಸ್ (ಮೂಲವ್ಯಾಧಿ), ಪಿಸ್ಟುಲಾ (ಭಗಂದರ) ಹಾಗೂ ಫಿಶ‌ ಮುಂತಾದ ಗುದ ರೋಗಗಳ ತಪಾಸಣೆ, ಚಿಕಿತ್ಸೆ, ಹಾಗೂ ಅವಶ್ಯಕತೆ ಕಂಡುಬಂದಲ್ಲಿ ಕ್ಷಾರ ಚಿಕಿತ್ಸೆ ಮಾಡಲಾಗುವುದು ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ ಯಂ. ತಿಳಿಸಿದ್ದಾರೆ. ತಜ್ಞ...
Loading posts...

All posts loaded

No more posts

error: Content is protected !!