ನಂದಕುಮಾರ್ ಗೆ ಟಿಕೇಟ್ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೇಸ್ ಕಚೇರಿ ಎದುರು ಸುಳ್ಯದ ಕಾಂಗ್ರೇಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ

ಮಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ (Sullia Congress) ಕೆಪಿಸಿಸಿ ಘೋಷಿಸಿರುವ ಅಭ್ಯರ್ಥಿ ಜಿಗಣಿ ಕೃಷ್ಣಪ್ಪ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸಿ ಸುಳ್ಯ ಭಾಗದ ಕಾಂಗ್ರೆಸ್ ಕಾರ್ಯಕರ್ತರು 15 ಬಸ್ ಗಳಲ್ಲಿ ಮಂಗಳೂರಿಗೆ ಬಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆಗೆ ನಡೆಸಿದ್ದಾರೆ. ‘ನಾಯಕರ ಅಭ್ಯರ್ಥಿ ನಮಗೆ ಬೇಡ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು’. ‘ನಂದಕುಮಾರ್ ಅವರಿಗೆ...

ಎ.11-18 ರಂಗ ಮಯೂರಿಯಲ್ಲಿ ” ಬಣ್ಣ ” ಬೇಸಿಗೆ ಶಿಬಿರ

ರಂಗಮಯೂರಿಯಲ್ಲಿ ಎ.11 ರಿಂದ 18ರವರೆಗೆ ರಾಜ್ಯ ಮಟ್ಟದ ರಂಗಶೈ ಲಿಯ ಆಕರ್ಷಕ ಮಕ್ಕಳ ಬೇಸಿಗೆ ಶಿಬಿರವಾದ "ಬಣ್ಣ" ಕಾಯರ್ತೋಡಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಿರೂಪಣಾ ಕೌಶಲ್ಯ, ರಂಗ ತರಬೇತಿ, ನಾಟಕ ನಿರ್ಮಾಣ, ಸಾಹಿತ್ಯ, ಸಂಸ್ಕೃತಿ, ನೃತ್ಯ ತರಬೇತಿ, ಹಳ್ಳಿಮದ್ದು, ರಂಗ ಹೋಳಿ, ಗಾಳಿಪಟ ಉತ್ಸವ, ಯಕ್ಷಗಾನ ವೇಷಭೂಷಣ ಪ್ರಾತ್ಯಕ್ಷಿಕೆ,...
Ad Widget

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಆಯ್ಕೆ

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಆಯ್ಕೆ ನಡೆದಿದೆ. ಸದಸ್ಯರಾಗಿ ಎಂ ಚಂದ್ರಕಾಂತ, ಶ್ರೀಮತಿ ಎ ನವಪ್ರಭ, ಶ್ರೀಮತಿ ಶಮಿತ ಪಿ ರೈ, ಕೆ ವಿಶ್ವನಾಥ ಭಟ್, ಪಿ ಗಂಗಾಧರ ರೈ, ಸುರೇಶ್ ಕುಮಾರ್ ಶೆಟ್ಟಿ, ಬಿ ಉದಯಪ್ರಸಾದ್, ಪಿ ರಾಧಾಕೃಷ್ಣ ಹಾಗೂ ಪ್ರಧಾನ ಅರ್ಚಕರು ಆಯ್ಕೆಯಾಗಿದ್ದಾರೆ.

ನಾಲ್ಕೂರು : ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ

ಸುಳ್ಯ ತಾಲೂಕಿನ ನಾಲ್ಕೂರಿನ ಚಾರ್ಮತ, ವಲ್ಪಾರೆ ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾಡು ಹೊತ್ತಿ ಉರಿಯುತ್ತಿದೆ ಎಂದು ತಿಳಿದುಬಂದಿದ್ದು, ಆಸುಪಾಸಿನ ಪ್ರದೇಶದಲ್ಲಿ ಹೊಗೆ ಆವರಿಸಿದೆ ಎಂದು ತಿಳಿದುಬಂದಿದೆ.ಅರಣ್ಯ ಇಲಾಖೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳಿಯರು ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

ಸಂಪಾಜೆಯ ಅರೆಕಲ್ಲು ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ

ಮಡಿಕೇರಿ ಉಪ ವಿಭಾಗದ ಸಂಪಾಜೆ ವಲಯ ಕಡಮಕಲ್ಲು ಮೀಸಲು ಅರಣ್ಯ ಅರೆಕಲ್ಲು ಬಳಿ ಕಾಡ್ಗಿಚ್ಚಿನಿಂದ ವ್ಯಾಪಕ ಬೆಂಕಿ ಆವರಿಸಿಕೊಂಡಿದೆ.ಬೆಂಕಿ ನಂದಿಸಲು ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿ ,ಸ್ಥಳೀಯರು ಅರ ಸಾಹಸ ಪಡುತ್ತಿದ್ದು, ನೂರಾರು ಮರಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.

ನಂದಕುಮಾರ್ ಪರವಾಗಿ ಹೆಚ್ಚಿದ ಕಾರ್ಯಕರ್ತರ ಒತ್ತಡ

ಸುಳ್ಯ ಕ್ಷೇತ್ರಕ್ಕೆ ಜಿ ಕೃಷ್ಣಪ್ಪರ ಆಯ್ಕೆಯಿಂದ ಕೆರಳಿರುವ ಸುಳ್ಯದ ಕಾರ್ಯಕರ್ತರು ಮತ್ತು ನಂದಕುಮಾರ್ ಅಭಿಮಾನಿಗಳು ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸಿ ಮಂಗಳೂರು ಚಲೋ ಅಭಿಯಾನದ ಮೂಲಕ ಜಿಲ್ಲಾ ನಾಯಕರಿಗೆ ಒತ್ತಡ ಹೇರಲು ಮಂಗಳೂರಿಗೆ ಸುಳ್ಯ ಮತ್ತು ಕಡಬದಿಂದ ಸಾವಿರಾರು ಕಾರ್ಯಕರ್ತರು ತೆರಳಿದ್ದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶ ಗೊಳ್ಳಲಿದ್ದಾರೆ. ಮಂಗಳೂರಿಗೆ ತೆರಳುವ ಮುನ್ನ ಸುಳ್ಯ ಬ್ಲಾಕ್ ಕಾಂಗ್ರೆಸ್...

ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ
ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ

ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆಗೆ ಕೇಂದ್ರ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಮೇ 10ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ. ಮೇ 13 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಚುನಾವಣೆ ಘೋಷಣೆ ಆದ ತಕ್ಷಣದಿಂದ ನೀತಿ ಸಂಹಿತೆ ಜಾರಿಗೆ ಬಂದಿದೆ. ಕಳೆದ ಬಾರಿ 2018ರ ಮೇ 23ರಂದು ಸರಕಾರ ರಚನೆಯಾಗಿದ್ದು, ಈ ಬಾರಿ...

ಮಾ.29ರಿಂದ ಏ.2ರ ತನಕ ಕೂಜುಗೋಡು ಕಟ್ಟೆಮನೆ ತರವಾಡು ಶ್ರೀ ಕೆಂಚಾಂಬದೇವಿ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗು ಧರ್ಮ ನಡಾವಳಿ

ಸುಳ್ಯ:ಕೂಜುಗೋಡು ಕಟ್ಟೆಮನೆ ತರವಾಡು ಶ್ರೀ ಕೆಂಚಾಂಬದೇವಿ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗು ಧರ್ಮ ನಡಾವಳಿ ಮಾ.29ರಿಂದ ಏ.2ರ ತನಕ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲ್ಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಮಾ.29 ರಂದು ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.30ರಂದು ಪೂ.6.30ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ...

ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿಯವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಗುಪ್ತವಾರ್ತೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ನವೀನ್ ಚಂದ್ರ ಜೋಗಿ ಮೂರು ವರ್ಷಗಳ ಹಿಂದೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಆಗಮಿಸಿದ್ದರು. ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹಲವಾರು ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದರು.ಉಡುಪಿ ಜಿಲ್ಲೆಯ ಕಾಪು ಮೂಲದವರಾದ ನವೀನ್ ಚಂದ್ರ ಅವರನ್ನು ಮುಂಬರುವ ವಿಧಾನ...

ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಕಾಲಾವಕಾಶ ವಿಸ್ತರಿಸಿದ ಸರ್ಕಾರ

ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಗಡುವು ನೀಡಿತ್ತು. ಮಾರ್ಚ್ 31 2023ರೊಳಗೆ ಎಲ್ಲರೂ ಆಧಾರ್-ಪ್ಯಾನ್ ಲಿಂಕ್ ಮಾಡಲು ಡೆಡ್ಲೈನ್ ನೀಡಿತ್ತು. ಇದೀಗ ಕೇಂದ್ರ ಸರ್ಕಾರ ಈ ಗಡುವನ್ನು ವಿಸ್ತರಣೆ ಮಾಡಿದೆ. ಆಧಾರ್ ಜೋಡಣೆ ಅವಧಿಯನ್ನು 2023 ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಪ್ಯಾನ್ ಕಾರ್ಡ್‌ನಲ್ಲಿನ ವಿಳಾಸವನ್ನು ಆಧಾರ್ ಸಹಾಯದಿಂದ...
Loading posts...

All posts loaded

No more posts

error: Content is protected !!