ಸುಬ್ರಹ್ಮಣ್ಯ: ನೂಚಿಲ ಬಳಿ ಒಂಟಿ ಸಲಗ ಪ್ರತ್ಯಕ್ಷ ; ಬಾಳೆ ಗಿಡ ಧ್ವಂಸ

ಸುಬ್ರಹ್ಮಣ್ಯ: ಪೇಟೆ ಸಮೀಪದ ನೂಚಿಲ ಎಂಬಲ್ಲಿರುವ ಸುಜ್ಞಾನ ಮಂದಿರದ ಬಳಿ ತಡರಾತ್ರಿ ಒಂಟಿ ಕಾಡಾನೆಯೊಂದು ಸಂಚರಿಸಿ ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ. ತಡರಾತ್ರಿ ಮಂದಿರದ ಅಸುಪಾಸಿನಲ್ಲಿ ಸುತ್ತಾಡಿದ ಒಂಟಿ ಸಲಗವು, ಹತ್ತಿರದಲ್ಲಿದ್ದ ಬಾಳೆ ಗಿಡಗಳನ್ನು ತುಳಿದು ಧ್ವಂಸಗೊಳಿಸಿದೆ. ದಿಢೀರನೆ ಕಾಡಾನೆ ಪ್ರತ್ಯಕ್ಷಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ಭೀತಿ ವ್ಯಕ್ತವಾಗಿದೆ.

ಕುಕ್ಕೆಗೆ ಆಗಮಿಸಿದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾ

ಸುಬ್ರಹ್ಮಣ್ಯ, ಅಕ್ಟೋಬರ್ 5 : ರಾಷ್ಟ್ರೀಯ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾವನ್ನು ಸೋಮವಾರ ಕೈಗೊಳ್ಳಲಾಯಿತು.  ಪಂಜಾ ವಲಯ ಅರಣ್ಯಾಧಿಕಾರಿ ಸಂಧ್ಯಾ ರವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳು, ಫಾರೆಸ್ಟ್ ಗಾರ್ಡ್ ಹಾಗೂ ವಾಚರ್ ಗಳನ್ನು ಒಳಗೊಂಡ ಸುಮಾರು 30ಕ್ಕೂ ಮಿಕ್ಕಿ ಅಧಿಕಾರಿ ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡರು....
Ad Widget

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು 30 ಸಾವಿರ ಭಕ್ತರ ಆಗಮನ

ಸುಬ್ರಹ್ಮಣ್ಯ ಅಕ್ಟೋಬರ್ 03 : ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ಸುಮಾರು ಮೂವತ್ತು ಸಾವಿರದಷ್ಟು ಭಕ್ತರ ಪ್ರವಾಹವೇ ಹರಿದು ಬಂದಿದೆ. ಶಾಲೆಗಳಿಗೆ ದಸರಾ ರಜೆ ಆರಂಭವಾದಾಗಿನಿಂದ ಶುಕ್ರವಾರ ಸಂಜೆಯಿಂದಲೇ ಭಕ್ತರು ಶ್ರೀ ಕ್ಷೇತ್ರಕ್ಕೆ ತಂಡವಾಗಿ ಆಗಮಿಸಿದ್ದರು. ಶ್ರೀ ದೇವಳದ ವಸತಿ ಗ್ರಹಗಳೆಲ್ಲ ಭರ್ತಿಯಾಗಿದ್ದು, ಅಲ್ಲದೆ ಖಾಸಗಿ ವಸತಿ ಗ್ರಹಗಳ ಮೊರೆ...

ಸುಬ್ರಹ್ಮಣ್ಯ : ಕೃಷಿಕರಿಗೆ ಸಾವಯವ ಗೊಬ್ಬರಗಳ ಲೋಕಾರ್ಪಣೆ

ಸುಬ್ರಹ್ಮಣ್ಯ ಅಕ್ಟೋಬರ್ 2: ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಈ ದಿನ ಗಾಂಧಿ ಜಯಂತಿಯ ಶುಭದಿನದಂದು ರಾಜ್ಯದ್ಯಂತ ಆಸಕ್ತ ಕೃಷಿಕರಿಗೆ ನೀಡುವ ಸಾವಯವ ಗೊಬ್ಬರಗಳ ಲೋಕಾರ್ಪಣ ಕಾರ್ಯಕ್ರಮ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ...

ಸುಬ್ರಹ್ಮಣ್ಯ ಅಂಗನವಾಡಿಯಲ್ಲಿ ಗಾಂಧಿ ಜಯಂತಿಯಂದು ಗಿಡ ನೆಡುವ ಆಚರಣೆ

ಆಗಸ್ಟ್ 2 : ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿಯಂದು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಕಡಬ ತಾಲೂಕು ಪಂಚ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು. ಅವರು ಮಾಡುತ್ತಾ "ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .ಪರಿಸರ ಉಳಿಸಿ...

ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿಯಾಗಿ ಮೃತ್ಯು

ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಡವೆಯೊಂದು ಕಾರಿಗೆ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ನಡೆದಿದೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಕಡವೆ ಏಕಾಏಕಿ ಅಡ್ಡ ಬಂದಿದ್ದು, ಡಿಕ್ಕಿಯ ಪರಿಣಾಮ ಕಾರಿನ ಮುಂಭಾಗಕ್ಕೆ ಭಾರೀ ಹಾನಿಯಾಗಿದೆ. ಡಿಕ್ಕಿಯ ಬಳಿಕ ಕಡವೆ ರಸ್ತೆಯ ಬದಿಗೆ ಎಸೆಯಲ್ಪಟ್ಟು ಮೃತಪಟ್ಟಿರುವುದು ಕಂಡುಬಂದಿದೆ.ಘಟನೆಯಿಂದಾಗಿ ವಾಹನ ಸವಾರರಲ್ಲಿ ಆತಂಕ ಮೂಡಿದ್ದು, ಈ ಭಾಗದಲ್ಲಿ ಕಾಡುಪ್ರಾಣಿಗಳ...

ಶಿಕ್ಷಕಿ , ಕವಯತ್ರಿ ಮೋಹಿತಾ ಹೊಸ್ಮಠ ರಿಗೆ ರಾಷ್ಟ್ರ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ

ಬೆಳಕು ಸಾಹಿತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ಪುರಸ್ಕಾರಕ್ಕೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿಕ್ಷಕಿ, ಕವಯತ್ರಿ ಮೋಹಿತಾ ಹೊಸ್ಮಠ ಆಯ್ಕೆಯಾಗಿದ್ದು, ರಾಷ್ಟ್ರ ಮಟ್ಟದ ಸಾಹಿತ್ಯ ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅಕ್ಟೋಬರ್ 29 ರಂದು ಬೆಂಗಳೂರಿನ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಬೆಳಕು ಸಂಸ್ಥೆಯ...

ಇಂದಿನಿಂದ(ಅ.02 ರಿಂದ 04) ಸುಳ್ಯದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ “ಸ್ವದೇಶಿ ಆಹಾರ ಮೇಳ” ; ಸ್ವದೇಶಿ ಆಹಾರದ ಸವಿಯೊಂದಿಗೆ ಸ್ವದೇಶಿ ಸೊಗಡಿನ ಸಂಭ್ರಮ

ಸುಳ್ಯದಲ್ಲಿ ಇದೇ ಮೊದಲ ಬಾರಿಗೆ “ಸ್ವದೇಶಿ ಆಹಾರ ಮೇಳ”ವು ಇಂದಿನಿಂದ(ಅ.02) ಅ.04 ರವರೆಗೆ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಹಾಗೂ ಶಕ್ತಿ ಇವೆಂಟ್ಸ್ ಇದರ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ವಿವಿಧ ತಿಂಡಿ-ತಿನಿಸುಗಳು, ಖಾದಿ ಬಟ್ಟೆಗಳು, ಮಸಾಲಾ...

ಸುಬ್ರಹ್ಮಣ್ಯ : ವಿವಾದಿತ ಜಾಗಗಳ ತೆರವು ಕಾರ್ಯ ಆರಂಭ..!

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ ಶ್ರೀನಿಕೇತನ ಕಟ್ಟಡ ಸೇರಿದಂತೆ ಕೆಲ ಜಾಗಗಳ ಕುರಿತ ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಖಾಸಗಿಯವರ ನಡುವಿನ ಜಾಗದ ವಿವಾದ ಸುಪ್ರೀಂ ಮೆಟ್ಟಿಲೇರಿತ್ತು. ಈ ಸಂಬಂಧ ಖಾಸಗಿಯವರು ಸಲ್ಲಿಸಿದ್ದ ದಾವೆಯನ್ನು ಸುಪ್ರೀಂ ಇತ್ತೀಚೆಗೆ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಶ್ರೀನಿಕೇತನ ಕಟ್ಟಡದಲ್ಲಿರುವ...

ಕುಕ್ಕೆ ಸುಬ್ರಹ್ಮಣ್ಯ : ಕೆ.ಎಸ್.ಎಸ್ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಅಮರ ಸುದ್ದಿ ವರದಿಗಾರರಾದ ಉಲ್ಲಾಸ್ ಕಜ್ಜೋಡಿಯವರಿಗೆ ಸನ್ಮಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸೆ.29ರಂದು ಎನ್.ಎಸ್.ಎಸ್ ದಿನಾಚರಣೆಯನ್ನು ಹಮ್ಮಿಕೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿಯ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಕುಶಾಲಪ್ಪ.ಎಸ್ ಇವರು ಮುಖ್ಯ...
Loading posts...

All posts loaded

No more posts

error: Content is protected !!