- Thursday
- November 5th, 2026
ಸುಳ್ಯ: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಆರೋಪಗಳನ್ನು ಅಭಿಯೋಜನೆ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಸುಳ್ಯ ನ್ಯಾಯಾಲಯ ದೋಷಮುಕ್ತಗೊಳಿಸಿದೆ. 2023ರ ಜ.21ರಂದು ರಾತ್ರಿ ಸುಮಾರು 9 ಗಂಟೆಗೆ ಸುಳ್ಯ ಕಸಬಾ ಗ್ರಾಮದ ಗುರುಂಪು ಎಂಬಲ್ಲಿ ಸುಳ್ಯ–ನಾಗಪಟ್ಟಣ ಡಾಮರು ರಸ್ತೆಯ ಬದಿಯಲ್ಲಿದ್ದ ಕಂದು ಬಣ್ಣದ ಎರಡು ಹೋರಿ ಕರುಗಳನ್ನು...
ಕಲ್ಮಕಾರು ಗ್ರಾಮದ ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 13ನೇ ವರ್ಷದ ದುರ್ಗಾ ಪೂಜೆ ಹಾಗೂ ವಾಹನ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಸೆ.26ರಂದು ದೇವಸ್ಥಾನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸತೀಶ್.ಟಿ.ಎನ್, ಕಾರ್ಯದರ್ಶಿ ಗಂಗಾಧರ.ಕೆ.ಎಸ್, ಗೌರವಾಧ್ಯಕ್ಷರಾದ ಬಾಲಕೃಷ್ಣ ಕೊಪ್ಪಡ್ಕ, ಅರ್ಚಕರಾದ ಶಿವರಾಮ ಪೊಂದ್ರುಕೋಡಿ, ಕೋಶಾಧಿಕಾರಿಗಳಾದ ಶ್ರೀಮತಿ ವೀಣಾ ಶಿವಾನಂದ ಬಿಳಿಮಲೆ, ಆಡಳಿತ ಸಮಿತಿಯ ಸದಸ್ಯರಾದ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸೆ.29ರಂದು ಎನ್.ಎಸ್.ಎಸ್ ದಿನಾಚರಣೆಯನ್ನು ಹಮ್ಮಿಕೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿಯ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಕುಶಾಲಪ್ಪ.ಎಸ್ ಇವರು ಮುಖ್ಯ...
ಜಗತ್ತಿನಾದ್ಯಂತ ಸೆಪ್ಟಂಬರ್ 29ನ್ನು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತಿದೆ. ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, 2000ನೇ ಇಸವಿಯಲ್ಲಿ ಆರಂಭವಾದ ಈ ಆಚರಣೆಯನ್ನು ಪ್ರತಿ ವರ್ಷ ಸೆಪ್ಟಂಬರ್ 29ರಂದು ಬೇರೆ ಬೇರೆ ತಿರುಳನ್ನು (Theme) ಇಟ್ಟುಕೊಂಡು ಆಚರಿಸಲಾಗುತ್ತಿದೆ. 2011 ರವರೆಗೆ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು. 2012 ರಿಂದ ಖಾಯಂ...
ಸುಳ್ಯ: ಅಮೃತ್ 2.0 ಯೋಜನೆಯ ಕಾಮಗಾರಿಯಿಂದ ಹದಗೆಟ್ಟಿದ್ದ ಸುಳ್ಯ ನಗರದ ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ ಆರಂಭವಾಗಿದೆ. ಸುಳ್ಯ ನಗರ ವ್ಯಾಪ್ತಿಯ ಹಳೇಗೇಟು, ಜ್ಯೋತಿ ಸರ್ಕಲ್ ಮತ್ತು ಗಾಂಧಿನಗರ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡಗಳು ಬಿದ್ದು ಸಾರ್ವಜನಿಕರು, ವಾಹನ ಸವಾರರು ಪರದಾಡುತ್ತಿದ್ದರು. ಈ ಹಿಂದೆ ಒಂದು ಬಾರಿ ತಾತ್ಕಾಲಿಕವಾಗಿ ದುರಸ್ತಿ ನಡೆಸಿದ್ದರೂ ಮಳೆಯ ಕಾರಣದಿಂದ ಕಾಂಕ್ರೀಟ್...
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ “ಉತ್ಸವ್-2026” ಸಾಂಸ್ಕೃತಿಕ ಸಂಭ್ರಮ ಸೆ. 26ರಂದು ನಡೆಯಿತು. ಅಕಾಡೆಮಿಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ 'ಬಿ' ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾಪ್ರಸಾದ್ ಕೆ.ವಿ., ಸೆಕ್ರೆಟರಿ, ಎ.ಒ.ಎಲ್.ಇ (ರಿ) ಕಮಿಟಿ ‘ಬಿ’ ಡಾ. ಜ್ಯೋತಿ ಆರ್. ಪ್ರಸಾದ್ ಇವರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಆಯೋಜಿಸಲಾಯಿತು. ಪ್ರಾಂಶುಪಾಲ ಡಾ. ಸುರೇಶ ವಿ. ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲೆ, ಸಂಸ್ಕೃತಿ,...
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 29 ಸೆಪ್ಟೆಂಬರ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಸೆಪ್ಟೆಂಬರ್ 29) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 *01,🐏ಮೇಷರಾಶಿ🐏*📃,ಈ ದಿನ ನಿಮಗೆ ಶುಭವಾಗಿದೆ ಹೊಸ ವಾಹನ ಮನೆ ಖರೀದಿಯ ವಿಚಾರವಾಗಿ ಎಲ್ಲವೂ ಸಕಾರಾತ್ಮಕವಾಗಿ ನಡೆಯಲಿವೆ, ಅಥವಾ ಮನೆಗೆ ಸಂಬಂದಿಸಿದ ವಸ್ತುಗಳನ್ನು ಖರೀದಿ ಮಾಡಬಹುದು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಜಾಗೃತ ವಹಿಸುವುದು ಉತ್ತಮ,ಗಮನಿಸಿ:-ನಿಮ್ಮ ವಿರೋಧಿಗಳು ನಿಮ್ಮ ದಿಕ್ಕು ಬದಲಿಸುವ ಕೆಲಸ ಮಾಡಬಹುದು, ಪರಿಹಾರ:-ಈದಿನಗಣಪತಿಯ...
ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸೆ.27ರಂದು ನಡೆಯಿತು.ಸಂಘದ ನೂತನ ಅಧ್ಯಕ್ಷರಾಗಿ ರವಿಚಂದ್ರ ಗೋಳ್ಯಾಡಿ, ಕಾರ್ಯದರ್ಶಿಯಾಗಿ ಜಯಕುಮಾರ್ ಕಲ್ಲೇರಿಕಟ್ಟ, ಖಜಾಂಜಿಯಾಗಿ ವಿಜಯಕುಮಾರ್ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ಆಶಿಕ್ ಕಲ್ಲೇಮಠ ಆಯ್ಕೆಯಾದರು.ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಮನೀಷ್ ಪಲ್ಲತ್ತಡ್ಕ, ಸಂಘದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. (ವರದಿ...
ಸುಳ್ಯ: ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ, ಅತ್ಯುತ್ತಮ ಯುವಕ-ಯುವತಿ ಮಂಡಳಿಗಳಿಗೆ ಪ್ರಶಸ್ತಿ ಹಾಗೂ ‘ಯುವರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಸೆ. 26ರಂದು ಸುಳ್ಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಯುವಜನ ಸಂಯುಕ್ತ ಮಂಡಳಿಯ ಚಟುವಟಿಕೆಗಳು ಯೋಜನಾ ಬದ್ಧವಾಗಿ ನಡೆಯಬೇಕು. ಸುಳ್ಯದ ಯುವಜನ...
Loading posts...
All posts loaded
No more posts
