ಬೆಳ್ಳಾರೆ – ಮೊಗ್ರ- ಗುತ್ತಿಗಾರು 33 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ನೀಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚರ ವಹಿಸಲು ಮೆಸ್ಕಾಂ ಸೂಚನೆ

ಗುತ್ತಿಗಾರು ಗ್ರಾಮದ ಮೊಗ್ರ ಎಂಬಲ್ಲಿ ಹೊಸದಾಗಿ ನಿರ್ಮಿಸಲಾದ 33/11 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡಲು ಬೆಳ್ಳಾರೆಯಲ್ಲಿ ಹಾಲಿ ಇರುವ ವಿದ್ಯುತ್ ವಿತರಣಾ ಕೇಂದ್ರದಿಂದ ನೂತನವಾಗಿ ರಚಿಸಲಾದ 5 ಕಿ.ಮೀ. ಭೂಗತ ಕೇಬಲ್ ಹಾಗೂ 17.1 ಕಿ.ಮೀ. ಓವರ್ ಹೆಡ್ ಮಾರ್ಗದಲ್ಲಿ ಜುಲೈ 30 ರಂದು ವಿದ್ಯುತ್ ಸಂಪರ್ಕ ನೀಡಲಾಗುವುದು .ನೆಟ್ಟಾರಿನಿಂದ ಬೆಳ್ಳಾರೆ,...

ಪತ್ರಕರ್ತರಿಗೆ ಸವಾಲುಗಳು ಬಂದಾಗ ಜನತೆ ಅವರ ಬೆಂಬಲಕ್ಕೆ ನಿಲ್ಲಬೇಕು : ಮಹೇಶ್ ಪುಚ್ಚಪ್ಪಾಡಿ

ಪತ್ರಕರ್ತರು ಉತ್ತಮ ಕೆಲಸ ಮಾಡಿದಾಗ ಹಲವಾರು ಸವಾಲುಗಳು ಎದುರಾಗುತ್ತವೆ.ಅವುಗಳನ್ನು ಎದುರಿಸಿ ಮುನ್ನಡೆಯಲು ಪತ್ರಕರ್ತರಿಗೆ ಸಮಾಜದ ಬೆಂಬಲ ಬೇಕಾಗಿದೆ ಎಂದು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಹೇಳಿದ್ದಾರೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಗಮಯೂರಿ ಕಲಾಶಾಲೆಯ ಸಭಾಭವನದಲ್ಲಿ ಜು.29ರಂದು ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು. ಮಾಧ್ಯಮ ಕ್ಷೇತ್ರವನ್ನು ಪ್ರಜಾ ಪ್ರಭುತ್ವದ...
Ad Widget

ಅಕ್ರಮ ಮರ ಸಾಗಾಟ – ಇಬ್ಬರ ಬಂಧನ, ಮರ ವಶ

ತರಕಾರಿ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನುಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ. ಮರದ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಆರೋಪಿಗಳಾದ ಕಾಂಞಗಾಡ್ ಕುರಿಚಿಯಲ್ ನಿವಾಸಿ ಪಿ.ದನೇಶ್(28) ಹಾಗೂ ಕಣ್ಣೂರು ನಿವಾಸಿ ಎಂ.ರಾಹುಲ್(26) ಎಂಬುವವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಅಚ್ಚು (ಅಶ್ರಫ್) ವಿರಾಜಪೇಟೆಯ ನಿವಾಸಿಯಾಗಿದ್ದು,...

ನಡುಗಲ್ಲು : ಶ್ರಮದಾನ -ರಸ್ತೆ ದುರಸ್ತಿ

ನಾಲ್ಕೂರು 1ನೇ ವಾರ್ಡ್ ನಡುಗಲ್ಲು ಭಾಗದ ಕಲ್ಲಾಜೆ, ಅಂಬೆಕಲ್ಲು, ಎರ್ದಡ್ಕ, ಅಂಜೇರಿ, ಕಾಯರ್ ಮುಗೆರ್, ಮರಕತ, ಇಜ್ಜಿನಡ್ಕ, ಚಾರ್ಮತ ಭಾಗದ ರಸ್ತೆಗಳು ವಿಪರೀತ ಮಳೆಯಿಂದ ಕೆಸರಾಗಿದ್ದರಿಂದ ಸಂಚಾರಕ್ಕೆ ಕಷ್ಟವಾಗುತ್ತಿತ್ತು. ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಜು.27 ರಂದು ಗ್ರಾಮಸ್ಥರ ಸಹಕಾರದೊಂದಿಗೆ ಶ್ರಮದಾನವನ್ನು ಮಾಡಲಾಯಿತು. ✍ವರದಿ :- ಉಲ್ಲಾಸ್ ಕಜ್ಜೋಡಿ

ಸುಳ್ಯ : ವಾಹನ ಡಿಕ್ಕಿಯಾಗಿ ಪಾದಾಚಾರಿ ಗಂಭೀರ

ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಬುಲೆರೋ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಪೆರಾಜೆ ಬಂಗಾರಕೋಡಿಯ ಗೋಪಾಲ ಕಜೆಮೂಲೆಯವರು ರಸ್ತೆ ದಾಟುತ್ತಿದ್ದ ವೇಳೆ ಬೊಲೆರೋ ವಾಹನ ಡಿಕ್ಕಿ ಹೊಡೆದು ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ತಕ್ಷಣ ಅದೇ ಬೊಲೆರೋದಲ್ಲಿ ಸರಕಾರಿ ಆಸ್ಪತ್ರೆಗೆ ತಂದು ಮಂಗಳೂರಿನ ಕೆ.ಎಸ್.ಹೆಗ್ಡೆ...

ನ.ಪಂ.ಗೆ ಬಾರದ ನೀರಿನ ಬಿಲ್ : ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ- ನ.ಪಂ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ತರಾಟೆ

ಅಧಿಕಾರಿಗಳ ಬೇಜವಾಬ್ದಾರಿಯಿಂದ ನೀರಿನ ಬಿಲ್ ಅನ್ನು ಹಲವು ವರ್ಷಗಳಾದರೂ ನ.ಪಂ. ನಿಂದ ವಸೂಲಿ ಮಾಡಲು ಸಾಧ್ಯವಾಗಿಲ್ಲ. ೧.೫ ಕೋಟಿ ನೀರಿನ ಬಿಲ್ ಸೇರಿದಂತೆ ಹಲವು ಬಿಲ್‌ಗಳು ವಸೂಲಿಯಾಗಲು ಬಾಕಿಯಿದೆ. ಇನ್ನು ಒಂದು ತಿಂಗಳೊಳಗೆ ಬಿಲ್ ವಸೂಲಾತಿಯಾಗದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಎಚ್ಚರಿಕೆ ನೀಡಿದರು.ಸುಳ್ಯ ನ.ಪಂ. ಸಾಮಾನ್ಯ...

ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಸುಧಾಕರ್ ಸುಳ್ಯ ಭೇಟಿ

ಸುಳ್ಯ ಬಿಜೆಪಿ ಯುವ ಮೋರ್ಚಾದ ಪ್ರಭಾರಿಗಳಾದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಸುಧಾಕರ್ ಧರ್ಮಸ್ಥಳ ನಮ್ಮ ಸುಳ್ಯ ಮಂಡಲಕ್ಕೆ ಜು.29 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಸುಳ್ಯ ಮಂಡಲ ಯುವಮೋರ್ಚಾ ಪ್ರಭಾರಿಗಳಾದ ಶಿವಾನಂದ ಕುಕ್ಕುಂಬಳ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕಿಶನ್...

ಸುಬ್ರಹ್ಮಣ್ಯ :- ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸಭೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸಭೆಯು ಜು.28 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ಅದ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಕೃಷಿ-ಬೆಳೆಗಳ ಸಮಸ್ಯೆ(ಹಳದಿರೋಗ) ಪರಿಹಾರದ ಚರ್ಚೆ, ಅರಣ್ಯ ಕಾನೂನು-ರೈತರ ಸಮಸ್ಯೆಗಳ ಪರಿಹಾರ ಮತ್ತು ಪ್ರತೀ ಗ್ರಾಮ ಬೇಟಿ ಮಾಡಿ ಜನಜಾಗೃತಿ ಮೂಡಿಸುವುದು ಹಾಗೂ ಇತರ...

ವಿದ್ವತ್ ಹೊಸೋಳಿಕೆ ಪ್ರಥಮ ಹುಟ್ಟುಹಬ್ಬ ಆಚರಣೆ

ಸಾಹಿತಿ, ಕಿರಣ ಸಂಸ್ಥೆಯ ಅಧ್ಯಕ್ಷ ಯೋಗೀಶ್ ಹೊಸೋಳಿಕೆ ಮತ್ತು ಸರ್ವೇಯರ್ ಜಯಶ್ರೀ ವೈ. ಹೊಸೋಳಿಕೆ ಯವರ ಪುತ್ರ ವಿದ್ವತ್.ವೈ. ಹೊಸೋಳಿಕೆ ಯವರ ಪ್ರಥಮ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಸಂಪ್ರದಾಯದಂತೆ ದೀಪ ಉರಿಸಿ, ಮಗುವಿಗೆ ಆರತಿ ಎತ್ತಿ, ಸೋಬಾನೆ ಹಾಡಿನೊಂದಿಗೆ ಆಚರಿಸಲಾಯಿತು. ಪ್ರಥಮ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಕುಟುಂಬಸ್ಥರು, ಊರಿನವರು ಭಾಗವಹಿಸಿದ್ದರು. ಯೋಗೀಶ್ ಹೊಸೋಳಿಕೆ ಸ್ವಾಗತಿಸಿ,...

ಹಿಂಜಾವೇ ವಿಭಾಗ ಕಾರ್ಯದರ್ಶಿಯಾಗಿ ಚಿನ್ಮಯ್ ಈಶ್ವರಮಂಗಲ

ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದಶಿಯಾಗಿ ಕಾರ್ಯ ನಿರ್ವಹಿಸಿದ್ದ ಶ್ರೀ ಚಿನ್ಮಯ್ ಈಶ್ವರಮಂಗಲ ಇವರು ಇದೀಗ ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ . ಮೈಸೂರಿನಲ್ಲಿ ನಡೆದ ಹಿಂದು ಜಾಗರಣ ವೇದಿಕೆಯ ಪ್ರಾಂತ ಬೈಠಕ್ ನಲ್ಲಿ ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಕಾರಂತ್ ಜೀಯವರು ಈ...
Loading posts...

All posts loaded

No more posts

error: Content is protected !!