ಮಡಪ್ಪಾಡಿ : ಬೃಹತ್ ಲಸಿಕಾ ಅಭಿಯಾನ

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಬೃಹತ್ ಲಸಿಕಾ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಆರೋಗ್ಯ ಇಲಾಖೆಯವರು ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಲಸಿಕಾ ವಿತರಣಾ ಅಭಿಯಾನದಲ್ಲಿ ಕೈ ಜೋಡಿಸಿದರು.

ಮೋದಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ಕಲ್ಕುಡ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸುಳ್ಯ ಗಾಂಧಿನಗರ ಕಲ್ಕುಡ ದೈವಸ್ಥಾನದಲ್ಲಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಪಕ್ಷದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಮೋದಿಯವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು ಎಂದು ಪ್ರಾರ್ಥಿಸಲಾಯಿತು. ಧರ್ಮದರ್ಶಿ ಉಮೇಶ್ ವಾಗ್ಲೆ ಪ್ರಾರ್ಥನೆ ನೆರೆವೇರಿಸಿದರು. ಈ ಸಂದರ್ಭದಲ್ಲಿ ಕಲ್ಕುಡ ದೈವಸ್ಥಾನದ ಸಮಿತಿಯ ಸದಸ್ಯರು ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರರಾದ ಪಿ.ಕೆ ಉಮೇಶ್,...
Ad Widget

ವಳಲಂಬೆ : ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

ಪ್ರಧಾನಿ ನರೇಂದ್ರ ಮೋದಿಯವರ 71 ನೇ ಹುಟ್ಟುಹಬ್ಬದ ಅಂಗವಾಗಿ ವಳಲಂಬೆ ಶ್ರೀ ಶಂಖಪಾಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಕೆ.ಬೆಳ್ಯಪ್ಪ ಗೌಡ, ಎ.ವಿ.ತೀರ್ಧರಾಮ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ವೆಂಕಟ್ ವಳಲಂಬೆ, ಅರ್ಚಕರಾದ ಪರಮೇಶ್ವರ ಭಟ್, ಮಹಾಬಲೇಶ್ವರ ಭಟ್ ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.(ಚಿತ್ರ :...

ನಾಲ್ಕೂರು : ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸಹಾಯಹಸ್ತ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ವತಿಯಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಆದಿಮಾಯೆ ಸ್ವ-ಸಹಾಯ ಸಂಘದ ಸದಸ್ಯೆ ಪ್ರೇಮಾರವರಿಗೆ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ವೈಯಕ್ತಿಕವಾಗಿ ಸಂಗ್ರಹಿಸಿದ ಮೊತ್ತವನ್ನು ಅವರ ಮನೆಗೆ ಬೇಟಿ ನೀಡಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಅವರು ಆರ್ಥಿಕವಾಗಿ ಕಷ್ಟದಲ್ಲಿರುವುದನ್ನು ಮನಗಂಡು...

ನರೆಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕಾಯರ್ತೋಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಇಂದು ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನದ ಆಚರಣೆಯ ಅಂಗವಾಗಿ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಪಕ್ಷದ ವತಿಯಿಂದ ನೆರೆವೇರಿಸಲಾಯಿತು. ಈ ಸಂದರ್ಭದಲ್ಲಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಮೂಕ್ತೇಸರಾದ ಪಿ.ಕೆ.ಉಮೇಶ್ ದೇವರಿಗೆ ಪ್ರಾರ್ಥನೆ ಸಲ್ಲಿಸಿ ,ಕಾಯರ್ತೋಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ನೀಲಕಂಠ ವಿಶೇಷ ಪೂಜೆ ನೆರೆವೇರಿಸಿದರು, ವಿಜಯ ದೇಗೊಂಡಿ...

ಪೆರುವಾಜೆ: ಭಾವೈಕ್ಯ ಯುವಕ ಮಂಡಲದಿಂದ ದಿ|ಪ್ರೇಮನಾಥ ರೈ ರವರ ಪುಣ್ಯಸ್ಮರಣೆ ಕಾರ್ಯಕ್ರಮ

ಪೆರುವಾಜೆ ಭಾವೈಕ್ಯ ಯುವಕ ಮಂಡಲ(ರಿ.) ವತಿಯಿಂದ ಪೂರ್ವಾಧ್ಯಕ್ಷರಾದ ದಿ| ಪ್ರೇಮನಾಥ ರೈ ರವರ ಒಂದನೇ ವರುಷದ ಪುಣ್ಯಸ್ಮರಣೆ ಕಾರ್ಯಕ್ರಮ ಸೆ.16 ರಂದು ಪೆರುವಾಜೆ ಯುವಕ ಮಂಡಲದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾವೈಕ್ಯ ಯುವಕ‌ ಮಂಡಲ ಮತ್ತು ದಿ|ಪ್ರೇಮನಾಥ ರೈ ರವರ ಒಡನಾಟ ಮತ್ತು ಸಮಾಜಮುಖಿ ಕಾರ್ಯಗಳನ್ನು ಯುವಕ ಮಂಡಲದ ಅಧ್ಯಕ್ಷರಾದ ವಾಸುದೇವ ಪೆರುವಾಜೆ ನೆನಪಿಸಿಕೊಂಡರು. ಕಾರ್ಯಕ್ರಮದ ನಂತರ...

ಮಾವಿನಕಟ್ಟೆ : ಚಿರಾಯು ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಸ್ತಿತ್ವಕ್ಕೆ – ಅಧ್ಯಕ್ಷ ಜಯಂತ ಮಾವಿನಕಟ್ಟೆ, ಕಾರ್ಯದರ್ಶಿ ಯತೀಂದ್ರ ಮಾವಿನಕಟ್ಟೆ

ಚಿರಾಯು ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ವಿಜಯಕಾಂತ್ ಮಾವಿನಕಟ್ಟೆ, ಅಧ್ಯಕ್ಷರಾಗಿ ಜಯಂತ ಮಾವಿನಕಟ್ಟೆ, ಉಪಾಧ್ಯಕ್ಷರಾಗಿ ಪ್ರವೀಣ್ ಮಾವಿನಕಟ್ಟೆ, ಕಾರ್ಯದರ್ಶಿಯಾಗಿ ಯತೀಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ ಖಜಾಂಜಿಯಾಗಿ ಫಾರೂಕ್ ಮಾವಿನಕಟ್ಟೆ, ಗೌರವ ಸಲಹೆಗಾರರಾಗಿ ಸಿದ್ದಿಕ್ ಅಬುದಾಬಿ, ತೋಮಸ್ ದುಬೈ ಹಾಗೂ ಕವನ ಮಾವಿನಕಟ್ಟೆ , ಸಂಘಟನಾ...

ಸಂಘ ಧ್ಯೇಯ ಕಿರುಚಿತ್ರಕ್ಕೆ ಮುಹೂರ್ತ

ಎ.ಯು. ಕ್ರಿಯೇಶನ್ ನಿರ್ಮಾಣದ "ಸಂಘಧ್ಯೇಯ" ಎಂಬ ಕನ್ನಡ ಕಿರುಚಿತ್ರದ ಮುಹೂರ್ತವು ಉಪ್ಪಿನಂಗಡಿಯ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು. ಕಿರುಚಿತ್ರದ ನಾಯಕನಾಗಿ ನವನೀತಕೃಷ್ಣ ಜೋಗಿಯಡ್ಕರವರು ಬಣ್ಣ ಹಚ್ಚಲಿದ್ದು, ಕಥೆ,ಚಿತ್ರಕಥೆ,ಸಂಭಾಷಣೆ ಮತ್ತು ನಿರ್ದೇಶನವನ್ನು ಅಚಲ್ ಉಬರಡ್ಕ ಮಾಡಲಿದ್ದಾರೆ. ಈ ಕಿರುಚಿತ್ರದಲ್ಲಿ ಶ್ರೀವತ್ಸ ಭಾರಧ್ವಾಜ, ಕಿರಣ್ ಕುಮಾರ್ ಶಾಂತಿನಗರ ಮತ್ತಿತರರು ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಛಾಯಾಗ್ರಾಹಕರಾಗಿ ವಿನಯ್ ರೈ...

ಸರಕಾರದ ನಡೆ ಖಂಡಿಸಿ ವಿ ಹೆಚ್ ಪಿ, ಬಜರಂಗದಳ ನಾಳೆ ಪ್ರತಿಭಟನೆ

ಮೈಸೂರಿನ ನಂಜನಗೂಡಿನಲ್ಲಿ ಪುರಾತನ ದೇವಸ್ಥಾನ ತೆರವುಗೊಳಿಸಿದ್ದನ್ನು ಹಾಗೂ ಇನ್ನೂ ಹಲವು ದೇವಸ್ಥಾನಗಳನ್ನು ಧ್ವಂಸಗೊಳಿಸಲು ನಿರ್ಧರಿಸಿರುವ ಸರಕಾರದ ನಡೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಖಂಡಿಸಿ ಸೆ.16 ರಂದು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಿದೆ ಎಂದು ಬಜರಂಗದಳದ ಜಿಲ್ಲಾ ಸಂಯೋಜಕ ಲತೀಶ್ ಗುಂಡ್ಯ ತಿಳಿಸಿದ್ದಾರೆ.

ಅರಂತೋಡು : ಬಟ್ಟೆ ಒಗೆಯಲು ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆ

ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿ ನಾಪತ್ತೆಯಾಗಿದ್ದ ಉಳುವಾರಿನ ಮಹಿಳೆಯ ಮೃತದೇಹ ಪೆರಾಜೆ ಸಮೀಪ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.ಅರಂತೋಡು ಗ್ರಾಮದ ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ. 11ರಂದು ಸಂಜೆ 5 ಗಂಟೆ ಸುಮಾರಿಗೆ ಅರಂತೋಡಿನ ಮಾಡದ ಬಳಿ ಇರುವ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ನಾಪತ್ತೆಯಾಗಿದ್ದರು. ತೊಡಿಕಾನ ಅರಂತೋಡಿನ ಗ್ರಾಮಸ್ಥರು, ಅಗ್ನಿಶಾಮಕ ದಳ, ಪೈಚಾರಿನ...
Loading posts...

All posts loaded

No more posts

error: Content is protected !!