ಸಂಘ ಧ್ಯೇಯ ಕಿರುಚಿತ್ರಕ್ಕೆ ಮುಹೂರ್ತ

ಎ.ಯು. ಕ್ರಿಯೇಶನ್ ನಿರ್ಮಾಣದ “ಸಂಘಧ್ಯೇಯ” ಎಂಬ ಕನ್ನಡ ಕಿರುಚಿತ್ರದ ಮುಹೂರ್ತವು ಉಪ್ಪಿನಂಗಡಿಯ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು. ಕಿರುಚಿತ್ರದ ನಾಯಕನಾಗಿ ನವನೀತಕೃಷ್ಣ ಜೋಗಿಯಡ್ಕರವರು ಬಣ್ಣ ಹಚ್ಚಲಿದ್ದು, ಕಥೆ,ಚಿತ್ರಕಥೆ,ಸಂಭಾಷಣೆ ಮತ್ತು ನಿರ್ದೇಶನವನ್ನು ಅಚಲ್ ಉಬರಡ್ಕ ಮಾಡಲಿದ್ದಾರೆ.

. . . . . . . . .


ಈ ಕಿರುಚಿತ್ರದಲ್ಲಿ ಶ್ರೀವತ್ಸ ಭಾರಧ್ವಾಜ, ಕಿರಣ್ ಕುಮಾರ್ ಶಾಂತಿನಗರ ಮತ್ತಿತರರು ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಛಾಯಾಗ್ರಾಹಕರಾಗಿ ವಿನಯ್ ರೈ ಮತ್ತು ಚಂದ್ರಶೆಖರ ಶೆಟ್ಟಿಯವರು ಸಹಕರಿಸಲಿದ್ದಾರೆ.
ಈ ಕಿರುಚಿತ್ರವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧ್ಯೇಯವನ್ನು ಇಟ್ಟುಕೊಂಡು, ಜನರಲ್ಲಿ ರಕ್ತದಾನವು ಶ್ರೇಷ್ಠವಾದದ್ದು ಎಂಬ ಸಂದೇಶವನ್ನು ಸಾರುವಂತೆ ಈ ಕಥೆಯನ್ನು ಹೆಣೆಯಲಾಗಿದೆ.
ಸಂಘ ಧ್ಯೇಯ ಕಿರುಚಿತ್ರದ ಪೋಸ್ಟರನ್ನು ಉಪ್ಪಿನಂಗಡಿಯ ಶ್ರೀರಾಮ ಹಾಗೂ ಇಂದ್ರಪ್ರಸ್ಥ ಶಾಲೆಯ ಸಂಚಾಲಕರು ಮತ್ತು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು.ಜಿ. ರಾಧಾರವರು ಬಿಡುಗಡೆಗೊಳಿಸಿದರು.
ಈ ಸಮಯದಲ್ಲಿ ದೇವಸ್ಥಾನದ ಅರ್ಚಕರಾದ ನಾಗರಾಜ ಭಟ್,ಸಾಯಿಗೀತ ಯು. ಆರ್.,ಸುಷ್ಮಾ ಚಂದ್ರಶೇಖರ್ ಶೆಟ್ಟಿಯವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading