- Wednesday
- August 19th, 2026
ಮಂಡೆಕೋಲು ಗ್ರಾಮದ ದೇವರಗುಂಡ ಡಿ.ವಿ. ಸದಾನಂದ ಗೌಡರ ಸಹೋದರ ದಿ. ಬಾಸ್ಕರ ಗೌಡರ ಮನೆ ಮೇಲೆ ಕಳೆದ ರಾತ್ರಿ ತೆಂಗಿನ ಮರ ಬಿದ್ದು ಮನೆಯ ಮಾಡು ಕುಸಿದಿದೆ. ಮನೆಯವರಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೆರಾಜೆಯ ಕುಂಬಳಚೇರಿ ಎಂಬಲ್ಲಿ ಬೈಕ್ ಹಾಗೂ ಜೀಪು ಮಧ್ಯೆ ಅಪಘಾತ ನಡೆದು ಬೈಕ್ ನಲ್ಲಿದ್ದ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಪೆರಾಜೆಯ ಆರ್.ಡಿ. ವೆಂಕಪ್ಪ ರವರ ಪುತ್ರ ದರ್ಶನ್ ಮತ್ತು ಪೆರಾಜೆಯ ಲೋಕನಾಥ ಕುಂದಲ್ಪಾಡಿ ಅವರ ಪುತ್ರ ವಿಶ್ವದೀಪ್ ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದು...
ಅರಂತೋಡು-ತೊಡಿಕಾನ ಪ್ರಾಕೃ.ಪ.ಸ.ಸಂಘ ನಿಯಮಿತದ ವತಿಯಿಂದ ಬೆಳ್ತಂಗಡಿ ರಬ್ಬರ್ ಬೆಳೆಗಾರರ ಮತ್ತು ಮಾರಾಟಗಾರರ ಸಹಕಾರ ಸಂಘ ನಿ. ಉಜಿರೆ ಇದರ ಸಹಭಾಗಿತ್ವದಲ್ಲಿ ರಬ್ಬರ್ ಖರೀದಿ ಕೇಂದ್ರ ಹಾಗೂ ಗಣೇಶ್ ಕ್ಯಾಶ್ಯೂಸ್ ಅಡ್ಕಾರ್ ಸಹಕಾರದೊಂದಿಗೆ ಗೇರು ಬೀಜ ಖರೀದಿ ಕೇಂದ್ರ ಮಾ.23 ರಂದು ಶುಭಾರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಭಾರತೀಯ ಜನತಾ ಪಾರ್ಟಿ...
ದೇವಚಳ್ಳ ಗ್ರಾಮದ ಸೇವಾಜೆ - ಮಂಜೊಳುಕಜೆ ಸಾರ್ವಜನಿಕ ರಸ್ತೆಯ ಕಾಂಕ್ರೀಟಿಕರಣ ಉದ್ಘಾಟನಾ ಕಾರ್ಯಕ್ರಮವು ಮಾ.23 ರಂದು ನಡೆಯಿತು.ಉದ್ಘಾಟನೆ ಯನ್ನು ರಾಘವಗೌಡ ಮೆತ್ತಡ್ಕ ದೀಪ ಬೆಳಗಿಸುವ ಮೂಲಕ, ಗ್ರಾಮ ಪಂಚಾಯತ್ ಸದಸ್ಯರಾದ ಲೀಲಾವತಿ ಸೇವಾಜೆ ರಿಬ್ಬನ್ ತುಂಡರಿಸುವ ಮೂಲಕ ರಸ್ತೆಗೆ ಚಾಲನೆ ನೀಡಿದರು. ಹಾಗೂ ಪರಮೇಶ್ವರ ನಂದಗೋಕುಲ ತೆಂಗಿನಕಾಯಿ ಒಡೆದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಗಳಾದ...
ದೇವಚಳ್ಳ ಗ್ರಾಮದ ಎಲಿಮಲೆ - ಕಲ್ಲುಪಣೆ ಸಾರ್ವಜನಿಕ ರಸ್ತೆಯ ಕಾಂಕ್ರೀಟಿಕರಣಗೊಂಡ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮವು ಮಾ.21ರಂದು ನಡೆಯಿತು.ಉದ್ಘಾಟನೆ ಯನ್ನು ಶ್ರೀಮತಿ ವಿಜಯಲಕ್ಷ್ಮಿ ಶಂಕರನಾರಾಯಣ ಭಟ್ ಮೂಲೆತೋಟ ಹಾಗೂ ಎಲಿಮಲೆ ಪ್ರೌಢಶಾಲಾ ದೈಹಿಕ ಶಿಕ್ಷಕಿ ತಿರುಮಲೇಶ್ವರಿ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಶೀನಪ್ಪ ಗೌಡ ಅಂಬೆಕಲ್ಲು ಹಾಗೂ ಧರ್ಮಪಾಲ ಗೌಡ ಗಟ್ಟಿಗಾರು ರಿಬ್ಬನ್ ಕತ್ತರಿಸಿ ಹಾಗೂ ಮಹಾಲಿಂಗ...
ಪಂಜ ಗ್ರಾಮ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮತ್ತು ವಿಶೇಷ ಚೇತನರಿಗೆ ಸವಲತ್ತು ವಿತರಣಾ ಕಾರ್ಯಕ್ರಮ ಗ್ರಾಮ ಪಂಚಾಯತ್ ನಲ್ಲಿ ಮಾ.22ರಂದು ಜರುಗಿತು. ಪಂಜ ಪೇಟೆಯಲ್ಲಿ ಸಿಸಿ ಕ್ಯಾಮರಾ ಉದ್ಘಾಟನೆ ಬಳಿಕ ಸಚಿವ ,ಶಾಸಕ ಎಸ್ .ಅಂಗಾರ ರವರು ಗ್ರಾಮ ಪಂಚಾಯತ್ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಕಂದಾಯ ಇಲಾಖೆಯ...
ವಿದ್ಯಾಬೋಧಿನೀ ಪ್ರೌಢ ಶಾಲೆಯಲ್ಲಿ 2021-22ನೆಯ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳ ವಿದಾಯ ಸಮಾರಂಭವು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವೆಂಕಟ್ರಮಣ ಭಟ್ ನೆಟ್ಟಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಥಿಗಳಾಗಿ ಬಾಳಿಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಕೆ, ಉಪಾಧ್ಯಕ್ಷರಾದ ಶ್ರೀಮತಿ ತ್ರಿವೇಣಿ, ಬಾಳಿಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹೂವಪ್ಪ ಗೌಡ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ...
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧನೆ ಮಾಡಿದ ಮನ್ವಿತ ಸುಳ್ಯ ಅವರಿಗೆ ಎಸ್ ಎಸ್ ಕಲಾ ಸಂಗಮ ಟೀಮ್ ಪ್ರತಿಭಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಬೆಂಗಳೂರಿನ ಕೆನರಾ ಆಗೋ ಕೆಮಿಕಲ್ಸ್ ನಲ್ಲಿ ಪ್ರೊಡಕ್ಷನ್ ಮೆನೇಜರ್ ಆಗಿದ್ದ ಅಜ್ಞಾವರ ಗ್ರಾಮದ ದಿನೇಶ್ ಅಡ್ಡತಂಡ್ಕರವರು ಮಾ.18 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅಪರ್ಣಾ, ಪುತ್ರಿ ಆದ್ಯ, ತಂದೆ ರಾಮಪ್ಪ, ತಾಯಿ ಸಾವಿತ್ರಿ ಸಹೋದರರಾದ ಲೊಕೇಶ್, ಸುರೇಶ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.
Praveen S. Rao ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕುಜಡ್ಕ ಇದರ ಆಡಳಿತ ಮಂಡಳಿಗೆ ಮಾ.7ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಹಾಗು ಬಿಜೆಪಿ ಬಂಡಾಯ ಸ್ವಾಭಿಮಾನಿ ಬಳಗ 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಇಂದು ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಾಜಿ ಉಪಾಧ್ಯಕ್ಷ...
Loading posts...
All posts loaded
No more posts
