- Friday
- August 28th, 2026
ಪೋಲೀಸ್ ಹೊರಠಾಣೆ ಕಲ್ಲುಗುಂಡಿ ಇವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಇಂದು ನಡೆಯಿತು. ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಎ.ಎಸ್.ಐ ನಾಗೇಶ್, ಪೋಲೀಸ್ ಕಾನ್ ಸ್ಟೇಬಲ್ ರಾಜು , ಗೃಹರಕ್ಷಕದಳದ ರಾಮ್ ರಾಜ್ ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.
ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಪೋಷಕರ ಸಭೆ ಇಂದು ನಡೆಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀ ಧನಂಜಯ ಅಡ್ಪಂಗಾಯ ರವರು ಅಧ್ಯಕ್ಷತೆ ವಹಿಸಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವನ್ನು ವಿವರಿಸಿ ಅತ್ಯುತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಕೆ. ಪ್ರಾಸ್ತಾವಿಕವಾಗಿ...
ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 1.23 ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಕೇಂದ್ರೀಯ ರಬ್ಬರ್ ಮಂಡಳಿಯ ಸದಸ್ಯರಾದ ಮುಳಿಯ ಕೇಶವ ಭಟ್,...
ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ಜ. 15 ರಂದು ಚೊಕ್ಕಾಡಿಯ ಅಮೈ ಚಾವಡಿಯಲ್ಲಿ ಶ್ರಮದಾನ ಮಾಡಲಾಯಿತು. ಶ್ರಮದಾನ ದಲ್ಲಿ ಸಂಘಟನೆಯ ಸದಸ್ಯರುಗಳಾದ ಪ್ರದೀಪ್ ಬೊಳ್ಳೂರು, ಹರ್ಷಿತ್ ದಾತಡ್ಕ, ರಜನಿಕಾಂತ್ ಉಮ್ಮಡ್ಕ, ಪ್ರವೀಣ್ ಕುಲಾಲ್, ಮಿಥುನ್ ಕೆರೆಗದ್ದೆ, ರಾಜೀವಿ ಗೊಲ್ಯಾಡಿ, ಜಯಪ್ರಸಾದ್ ಸಂಕೇಶ, ಪ್ರಸಾದ್ ಬೊಳ್ಳೂರು, ಶಶಿಕಾಂತ್, ಪ್ರಸನ್ನ ಕುಮಾರಿ ಚಾಮಡ್ಕ ಇವರುಗಳು ಭಾಗವಹಿಸಿ...
ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಐದು ಜನ ಭಾರತೀಯ ನಾಗರಿಕರನ್ನು ರಕ್ಷಿಸಿದ ಅರಂತೋಡು ಓಟೆಡ್ಕ ಆಕಾಶ್ ಅವರನ್ನು ಭಾರತೀಯ ಭೂಸೇನಾಧಿಕಾರಿ ಜನರಲ್ ಮೇಜರ್ ರವರು ಭಾರತೀಯ ಸೇನಾ ದಿನಾಚರಣೆ ಆದ ಇಂದು (ಜ. 15 ರಂದು) ಗೌರವಿಸಿದರು.ಕಳೆದ ಬಾರಿ ಅವರು ಬೆಸ್ಟ್ ಫೈರರ್ ಪ್ರಶಸ್ತಿ ಪಡೆದುಕೊಂಡಿದ್ದರು. ಇವರು ಅರಂತೋಡು ಗ್ರಾಮದ ಓಟೆಡ್ಕ ಕಮಲಾಕ್ಷ ಮತ್ತು ದಮಯಂತಿ ದಂಪತಿಗಳ...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಆರಂಭಗೊಂಡಿದ್ದು, ಇಂದು(ಜ.16 ರಂದು) ಬೆಳಿಗ್ಗೆ ಗಂಟೆ 9-10 ರಿಂದ 9-45 ರ ಕುಂಭ ಲಗ್ನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ಕಲ್ಲುರ್ಟಿ ಮತ್ತು ಕಲ್ಕುಡ ದೈವದ ಪ್ರತಿಷ್ಠೆ ನೆರವೇರಿತು. ಈ ಸಂದರ್ಭದಲ್ಲಿ ಪವಿತ್ರವಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ...
ಹಿರಿಯರಿಂದ ಬೆಳೆದು ಬಂದ ಸಂಪ್ರದಾಯ ಮತ್ತು ವೃತ್ತಿ ಬದುಕನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ರವಾನಿಸುವ ಜವಾಬ್ದಾರಿ ನಮ್ಮ ಮುಂದಿದೆ. ಪ್ರತಿಯೊಂದು ಸಮುದಾಯದವರು ತಮ್ಮ ತಮ್ಮ ವೃತ್ತಿ ಹಾಗೂ ಬದುಕನ್ನು ಕಟ್ಟಿ ಬೆಳೆಸುದರೊಂದಿಗೆ ಸದೃಢ ಸಮಾಜವನ್ನು ಕಟ್ಟುವ ಕಾರ್ಯ ಆಗಬೇಕಾಗಿದೆ ಎಂದು ಕೆ.ವಿ.ಜಿ ವಿವಿಧ್ದೋದ್ದೇಶ ಸೌರ್ಹಾದ ಸಹಕಾರಿ (ನಿ) ಸುಳ್ಯ ಇದರ ಅಧ್ಯಕ್ಷರು, ರಾಜ್ಯ ಒಕ್ಕಲಿಗರ...
ವಿಶ್ವಹಿಂದು ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಇದರ ನೂತನ ಜವಾಬ್ದಾರಿಗಳನ್ನು ಇಂದು ಪುತ್ತೂರಿನಲ್ಲಿ ನಡೆದ ಜಿಲ್ಲಾ ಬೈಠಕ್ ನಲ್ಲಿ ಘೋಷಣೆ ಮಾಡಲಾಯಿತು. ಹಿಂದು ಯುವ ನಾಯಕ ಎಲಿಮಲೆಯ ಹರಿಪ್ರಸಾದ್ ಬಿ.ವಿ ಎಲಿಮಲೆಯವರನ್ನು ಭಜರಂಗದಳ ಪ್ರಖಂಡ ಸಂಚಾಲಕರಾಗಿ ಮತ್ತು ಯುವ ವಕೀಲ ಸಂದೀಪ್ ವಳಲಂಬೆಯವರನ್ನು ಪ್ರಖಂಡ ವಿಧಿ ಪ್ರಮುಖ್ ಆಗಿ ಘೋಷಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿಶ್ವ ಹಿಂದು...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇವ ಒಕ್ಕೂಟದ ಸದಸ್ಯರು ಮತ್ತು ಊರವರ ಸಹಕಾರದೊಂದಿಗೆ ದೇವ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ದೈವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.02 ರಿಂದ ಮಾ.04 ರವರೆಗೆ ನಡೆಯಲಿರುವ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದ ಅಂಗವಾಗಿ ಜ.14 ರಂದು ಕೊಳ್ಳಿ ಮುಹೂರ್ತ ನೆರವೇರಿತು. ಹಾಗೂ ಒತ್ತೆಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಮುಖ್ಯ ಅರ್ಚಕರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್...
Loading posts...
All posts loaded
No more posts
