ನೆಟ್ಟಾರು ಗ್ರಾಮದ ಲಕ್ಷ್ಮೀಶ ಕಿನ್ನಿಮಜಲು (34 ವರ್ಷ) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಾರಿನಿಂದ ವರದಿಯಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ (ನಾಗಶ್ರೀ ಆಟೋ) ಇವರು ಬೆಳ್ಳಾರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೆ.18 ರಂದು ಎಂದಿನಂತೆ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದು, ಮನೆಯ ಹಿಂಬದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಘಟನೆ ನಿನ್ನೆ ಸಂಜೆ ವರದಿಯಾಗಿದ್ದು ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ ಶ್ರೀಮತಿ ಸೌಮಶ್ರೀ, ತಂದೆ ಮೋನಪ್ಪ ಗೌಡ ಕಿನ್ನಿಮಜಲು, ತಾಯಿ ಶ್ರೀಮತಿ ಮೋಹಿನಿ, ಸಹೋದರ ಯೋಗೀಶ್ ಕಿನ್ನಿಮಜಲು, ಸಹೋದರಿ ಶ್ರೀಮತಿ ಭಾರತಿ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
- Sunday
- November 24th, 2024