ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಗ್ಯ ಹಸ್ತ ಕಾರ್ಯಕ್ರಮ ಕ್ಕೆ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ರಾದ ಸಲೀಂ ಅಹ್ಮದ್, ವಿಧಾನ ಪರಿಷತ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಹರೀಶ್ ಕುಮಾರ್ ಅರಂತೋಡು ಹಾಗೂ ಬೆಳ್ಳಾರೆ ಗ್ರಾಮದ ದರ್ಖಾಸ್ತು ಗೆ ಭೇಟಿ ನೀಡಿದರು.
ಕೆ ಪಿ ಸಿ ಸಿ ಯ ವಿನೂತನ ಕಾರ್ಯಕ್ರಮ ಆರೋಗ್ಯ ಹಸ್ತ ಯೋಜನೆಯ ಬಗ್ಗೆ ಪರಿಶೀಲನೆ ನಡೆಸಲು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ರಾದ ಶ್ರೀ ಸಲೀಂ ಅಹ್ಮದ್ ದ.ಕ ಜಿಲ್ಲಾ ಪ್ರವಾಸ ಕಾರ್ಯಕ್ರಮ ದ ಅಂಗವಾಗಿ ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಆರೋಗ್ಯ ಹಸ್ತ ಆರೋಗ್ಯ ತಪಾಸಣೆ ಕಾರ್ಯಕ್ರಮ ಸಹ ನಡೆಯಿತು.
ನಂತರ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬೆಳ್ಳಾರೆ ಯ ಪ್ರಿಯದರ್ಶಿನಿ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ಆರೋಗ್ಯ ಹಸ್ತ ಆರೋಗ್ಯ ತಪಾಸಣೆ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಉಚಿತ ನೋಂದಾವಣೆ ಕಾರ್ಯಕ್ರಮ ಬೆಳ್ಳಾರೆ ಗ್ರಾಮದ ದರ್ಖಾಸ್ತು ಎಂಬಲ್ಲಿ ನಡೆಯಿತು. ದರ್ಖಾಸ್ತು ತಮಿಳು ಕಾರ್ಮಿಕರ ಕಾಲೊನಿ ಯಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿ ನಂತರ ದರ್ಖಾಸ್ತಿನಲ್ಲಿ ನಡೆದ ಸರಳ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಹರೀಶ್ ಕುಮಾರ್, ವಿಧಾನಪರಿಷತ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಬಾಲರಾಜ್, ಡಾ.ರಘು, ಕೆ ಪಿಸಿ ಸಿ ಸದಸ್ಯ ಭರತ್ ಮುಂಡೋಡಿ,ಹರೀಶ್ ಕುಮಾರ್ , ವಿಧಾನಪರಿಷತ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಬಾಲರಾಜ್, ಡಾ.ರಘು, ಕೆ ಪಿಸಿ ಸಿ ಸದಸ್ಯ ಭರತ್ ಮುಂಡೋಡಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾದ ಶ್ರೀ ಧನಂಜಯ ಅಡ್ಪಂಗಾಯ, ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಗಳಾದ ಎಂ ವೆಂಕಪ್ಪ ಗೌಡ, ಟಿ ಎಂ ಶಹೀದ್, ವಹೀದಾ ಇಸ್ಮಾಯಿಲ್, ರಾಜೀವಿ ರೈ, ಅನಿಲ್ ರೈ ಬೆಳ್ಳಾರೆ, ಶಕುಂತಲಾ ನಾಗರಾಜ್, ಸಂಶುದ್ದೀನ್ ಎಸ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಸೇರಿದಂತೆ ಪ್ರಮುಖ ನಾಯಕರು, ಕಾರ್ಯಕರ್ತರು, ಫಲಾನುಭವಿಗಳು ಉಪಸ್ಥಿತರಿದ್ದರು.