ಪುಳಿಕುಕ್ಕು ಅಂಗನವಾಡಿ ಕೇಂದ್ರಕ್ಕೆ ₹10 ಸಾವಿರ ಮೌಲ್ಯದ ಕುರ್ಚಿಗಳ ಕೊಡುಗೆ

ಪುಳಿಕುಕ್ಕು : ತಾವು ಬಾಲ್ಯದಲ್ಲಿ ವಿದ್ಯಾಭ್ಯಾಸ ಕಲಿತ ಪುಳಿಕುಕ್ಕು ಅಂಗನವಾಡಿ ಕೇಂದ್ರದ ಮಕ್ಕಳ ಅನುಕೂಲಕ್ಕಾಗಿ ಪಂಚಶ್ರೀ ದೋಟಿ ಹೌಸ್, ಪುಳಿಕುಕ್ಕು ಇದರ ಮಾಲೀಕರಾದ ಡಿಕೆಶ್ ಗೌಡ ಗಿರಿಯಮಜಲು ಅವರು ಸುಮಾರು ₹10,000 ಮೌಲ್ಯದ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

. . . . . . . . .

ತಾವು ಕಲಿತ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುಳಿತುಕೊಳ್ಳಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿರುವ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

. . . . . . .

ಈ ಕುರ್ಚಿಗಳನ್ನು ಅಂಗನವಾಡಿ ಕೇಂದ್ರದ ಶಿಕ್ಷಕಿ ನವ್ಯ ಡೆಕ್ಕಳ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನಾಕೂರು ಗಯಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪ್ರಸಾದ್ ಮಜಲಕರೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಪೊಯ್ಯೆಮಜಲು, ಕಾರ್ಯದರ್ಶಿ ದಿನೇಶ್ ಕಲ್ಲರ್ಪೆ, ಉಪಾಧ್ಯಕ್ಷ ಆನಂದ ಗೌಡ ಕೊಡಂಗೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading