40ಕ್ಕೂ ಅಧಿಕ ಮಳಿಗೆಗಳೊಂದಿಗೆ ಗಮನ ಸೆಳೆದ ‘ಮಕ್ಕಳ ಸಂತೆ’: ವಿದ್ಯಾರ್ಥಿಗಳ ಭರ್ಜರಿ ವ್ಯಾಪಾರ ವಹಿವಾಟು

ಸುಳ್ಯ: ‘ನೋ ಬ್ಯಾಗ್ ಡೇ’ ಪ್ರಯುಕ್ತ ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ಸಂತೆ’ ಹಾಗೂ ‘ಮೆಟ್ರಿಕ್ ಮೇಳ’ವು ವಿದ್ಯಾರ್ಥಿಗಳ ಉತ್ಸಾಹಭರಿತ ವ್ಯಾಪಾರ ವಹಿವಾಟಿನೊಂದಿಗೆ ಯಶಸ್ವಿಯಾಗಿ ನಡೆಯಿತು. ಸುಮಾರು 40ಕ್ಕೂ ಅಧಿಕ ಮಳಿಗೆಗಳನ್ನು ತೆರೆದ ವಿದ್ಯಾರ್ಥಿಗಳು ದಿನಪೂರ್ತಿ ವ್ಯಾಪಾರ ನಡೆಸಿ ಸಂಭ್ರಮಿಸಿದರು.

. . . . . . . . .

ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತಾವೇ ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳು, ಹಣ್ಣು ಹಂಪಲುಗಳು, ಜ್ಯೂಸ್, ಚಾಟ್ಸ್ ಐಟಂಗಳು, ಐಸ್ ಕ್ರೀಮ್, ಬಟ್ಟೆ ಅಂಗಡಿಗಳು, ಆಟಿಕೆ ಸಾಮಗ್ರಿಗಳು, ಪುಸ್ತಕ ಮಳಿಗೆಗಳು ಹಾಗೂ ಲಕ್ಕಿ ಗೇಮ್ಸ್ ಮಳಿಗೆಗಳನ್ನು ತೆರೆದು ಗ್ರಾಹಕರನ್ನು ಆಕರ್ಷಿಸಿದರು. ಕೆಲವು ಮಳಿಗೆಗಳಲ್ಲಿ ಮಕ್ಕಳೊಂದಿಗೆ ಪೋಷಕರೂ ಕೈಜೋಡಿಸಿ ವ್ಯಾಪಾರಕ್ಕೆ ಸಾಥ್ ನೀಡಿದರು. ಮಳಿಗೆಗಳಿಗೆ ಭೇಟಿ ನೀಡಿದ ಪೋಷಕರು ಹಾಗೂ ಅಧ್ಯಾಪಕರು ವಸ್ತುಗಳನ್ನು ಖರೀದಿಸುವ ಮೂಲಕ ವಿದ್ಯಾರ್ಥಿಗಳ ವ್ಯಾಪಾರ ಕೌಶಲ್ಯವನ್ನು ಪ್ರೋತ್ಸಾಹಿಸಿದರು.

. . . . . . .

ಇದೇ ಸಂದರ್ಭದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ‘ಬೆಂಕಿ ಇಲ್ಲದ ಅಡುಗೆ’ ವಿಭಾಗದಲ್ಲಿ ಸಿದ್ಧಪಡಿಸಿದ ವಿಶೇಷ ಬಗೆಯ ಫಲಹಾರ ಹಾಗೂ ಆಹಾರ ಖಾದ್ಯಗಳ ಪ್ರದರ್ಶನ ಗಮನ ಸೆಳೆಯಿತು. ಅತಿಥಿಗಳು, ಶಿಕ್ಷಕರು ಹಾಗೂ ಪೋಷಕರು ಈ ಖಾದ್ಯಗಳ ರುಚಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಘಾಟನೆ ಮತ್ತು ಪ್ರಮುಖರ ಉಪಸ್ಥಿತಿ:
ಕಾರ್ಯಕ್ರಮವನ್ನು ಸುಳ್ಯ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಹಸೈನಾರ್ ಜಯನಗರ, ಸದಸ್ಯ ಚಿದಾನಂದ ಗರ್ಗುಂಜ, ಶಾಂತಿನಗರ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಜೀರ್ ಶಾಂತಿನಗರ, ವರ್ತಕರ ಸಂಘದ ಉಪಾಧ್ಯಕ್ಷ ಡಿ.ಎಸ್. ಗಿರೀಶ್ ದೇವರಗುಂಡ, ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ, ಶಿಕ್ಷಕ ನಾರಾಯಣ ಬೊಳ್ಳೂರು ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading