ಮಡಪ್ಪಾಡಿ ಸಹಕಾರಿ ಸಂಘದಲ್ಲಿ ದೀಪಾವಳಿ ಅದೃಷ್ಟಶಾಲಿಗಳ ಆಯ್ಕೆ

ಮಡಪ್ಪಾಡಿ : ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಕ್ಷಯ ಸಹಕಾರಿ ಮಾರ್ಟ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದಿನಸಿ ಖರೀದಿಸಿದ ಸದಸ್ಯ ಗ್ರಾಹಕರಿಗೆ ವಿತರಿಸಲಾಗಿದ್ದ ಅದೃಷ್ಟ ಚೀಟಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

. . . . . . . . .

ಸಂಘದ ಹಿರಿಯ ಸದಸ್ಯರಾದ ಸುಶೀಲ ಕೇವಳ ಹಾಗೂ ತಿಮ್ಮಪ್ಪ ಗೌಡ ತಂಬುಲ್ಪಾಜೆ ಅವರು ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿ ಸದಸ್ಯ ಗ್ರಾಹಕರನ್ನು ಆಯ್ಕೆ ಮಾಡಿದರು.

. . . . . . .

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು, ಉಪಾಧ್ಯಕ್ಷ ಸಚಿನ್ ಬಳ್ಳಡ್ಕ, ನಿರ್ದೇಶಕರಾದ ಮಿತ್ರದೇವ ಮಡಪ್ಪಾಡಿ, ಸೋಮಶೇಖರ ಕೇವಳ, ಕರುಣಾಕರ ಪಾರೆಪ್ಪಾಡಿ, ಪ್ರವೀಣ ಪಾಲ್ತಾಡು, ಶಿವರಾಮ ಆಚಾರ್ಯ ಚಿರೆಕಲ್ಲು, ಪ್ರದೀಪ್ ಕುಮಾರ್ ಪಣಿಯಾಲ, ಚಂದ್ರಶೇಖರ ಗುಡ್ಡೆ, ಮಾಜಿ ಉಪಾಧ್ಯಕ್ಷ ಎನ್.ಟಿ.ಹೊನ್ನಪ್ಪ, ಧನ್ಯಕುಮಾರ್ ದೇರ್ಮಜಲು, ಚಂದ್ರಶೇಖರ ಗೋಳ್ಯಾಡಿ, ಸಿಇಓ ಪ್ರಶಾಂತ್ ಪೂಂಬಾಡಿ ಹಾಗೂ ಸಿಬ್ಬಂದಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪ್ರಥಮ ಬಹುಮಾನವನ್ನು ಸಂಪತ್ ಕುಮಾರ್ ದೇರುಮಜಲು, ದ್ವಿತೀಯ ಬಹುಮಾನ ಮನೋಜ್ ಕುಮಾರ್ ಪೂಂಬಾಡಿ, ಐದು ಆಕರ್ಷಕ ಬಹುಮಾನದ ವಿಜೇತರಾಗಿ ತಾರಾನಾಥ ಅಂಬೆಕಲ್ಲು, ಸುದಿನ ಕಜೆ, ಕುಸುಮಾಧರ ಹಾಡಿಕಲ್ಲು, ಶಿವರಾಮ ಮಡಪ್ಪಾಡಿ, ಭವಾನಿ ಶಂಕರ ಕೇವಳ ಆಯ್ಕೆಯಾದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading