ಪತ್ರಕರ್ತ ಜೆ.ಕೆ. ರೈ ಅವರಿಗೆ ನುಡಿನಮನ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಜೆ.ಕೆ. ರೈ ಅವರ ಸ್ಮರಣಾರ್ಥ ನುಡಿನಮನ ಹಾಗೂ ವೈಕುಂಠ ಸಮಾರಾಧನೆ ಕಾರ್ಯಕ್ರಮವು ನ. 11ರಂದು ಬಂಟರ ಭವನದಲ್ಲಿ ನಡೆಯಿತು.

. . . . . . . . .

ಇದಕ್ಕೂ ಮೊದಲು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತರಕ್ರಿಯೆ ಕಾರ್ಯಕ್ರಮ ನೆರವೇರಿತು.

. . . . . . .

ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ದುರ್ಗಕುಮಾರ್ ನಾಯರ್‌ಕೆರೆ ಹಾಗೂ ನ್ಯಾಯವಾದಿ ಜಯಪ್ರಕಾಶ್ ರೈ ಅವರು, ದಿವಂಗತ ಜೆ.ಕೆ. ರೈ ಅವರೊಂದಿಗಿನ ಒಡನಾಟ ಹಾಗೂ ಅವರೊಂದಿಗೆ ಕಳೆದ ಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ತಂದೆ ನಾರಾಯಣ ರೈ ಅವರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಗೌರವ ಸಲ್ಲಿಸಲಾಯಿತು.

ಮುರಳೀಧರ ರೈ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಮೃತರ ಪತ್ನಿ ಹಾಗೂ ಪುತ್ರಿ, ಪುತ್ರ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಬಂಧುಮಿತ್ರರು ಆಗಮಿಸಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಸಿ ನಮಿಸಿ ನಂತರ ಭೋಜನ ಸ್ವೀಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading