ಗಾಯಕಿ ಸುಮ ಕೆ.ಎಸ್. ಅವರಿಗೆ “ವಚನ ಮಂದಾರ” ರಾಜ್ಯ ಪ್ರಶಸ್ತಿ

ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಎಜ್ಯುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ತನ್ನ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ನೀಡುವ ಪ್ರತಿಷ್ಠಿತ ‘ವಚನ ಮಂದಾರ’ ರಾಜ್ಯ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗಾಯಕಿ ಸುಮ ಕೆ.ಎಸ್. ಬಾಳಿಲ ರವರಿಗೆ ಪ್ರದಾನ ಮಾಡಲಾಯಿತು.

. . . . . . . . .

ಸುಮ ಕೆ ಎಸ್ ರವರಿಗೆ ಈ ಹಿಂದೆ ಪಂಡಿತ ಪುಟ್ಟರಾಜ ಗವಾಯಿ ಸ್ಮರಣಾರ್ಥ ಕೊಡಮಾಡುವ ಕಲಾ ವಿಕಾಸ ಯುವಸಿರಿ ರಾಜ್ಯ ಪ್ರಶಸ್ತಿ, ರಾಜ್ಯ ಯುವ ಪುರಸ್ಕಾರ ರಾಜ್ಯ ಪ್ರಶಸ್ತಿ, ಪಂಜ ಪಂಚಶ್ರೀ ಪ್ರಶಸ್ತಿಗಳು ಲಭಿಸಿವೆ.

. . . . . . .

ಇವರು ಆಕಾಶವಾಣಿ ಬಿ ಗ್ರೇಡ್ ಕಲಾವಿದೆಯಾಗಿ, ಚಂದನ ಸ್ವರ ಮಾಧುರ್ಯ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಯುವಜನ ಮೇಳಗಳಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳು ನಡೆಸುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಇವರು ಭಾಗವಹಿಸುತ್ತಿದ್ದಾರೆ. ಪ್ರಸ್ತುತ ದಳ ಸುಬ್ರಾಯ ಭಟ್ ನ್ಯಾಯವಾದಿ ಕಛೇರಿಯಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಇವರು ನಿವೃತ್ತ ಪ್ರಾಂಶುಪಾಲ ಕೆ.ವಿ.ಸುಬ್ರಹ್ಮಣ್ಯ ಮತ್ತು ಸಾವಿತ್ರಿ ಕೆ.ಎಸ್.ರವರ ಪುತ್ರಿ ಹಾಗೂ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಆಡಳಿತಾಧಿಕಾರಿ ಬಾಲಚಂದ್ರ ಮಡ್ತಿಲ ರವರ ಪತ್ನಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading